ಸಾಧನದ ದೇಹವಿದು ನೀ ದಯದಿ ಕೊಟ್ಟದ್ದು
ಬೆಂಗಳೂರು: ಕಬ್ಬೂರಿನ ನಿವಾಸಿ, ಜ್ಞಾನವೃದ್ಧರಾದ ಶ್ರೀಯುತ ಗೋವಿಂದರಾವ್ ನಾರಾಯಣರಾವ್ ದೇಶಪಾಂಡೆಯವರು ತಮ್ಮ 98ನೇ ವರ್ಷದ ಹುಟ್ಟುಹಬ್ಬವನ್ನು ಇತ್ತೀಚೆಗೆ ಸಂಭ್ರಮದಿಂದ ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಅವರ ಕುಟುಂಬದ ಸದಸ್ಯರು ಹಾಗೂ ಆಪ್ತರು ಕಬ್ಬೂರಿನಲ್ಲಿರುವ ಅವರ ಸ್ವಗೃಹಕ್ಕೆ ತೆರಳಿ, ಗೌರವಪೂರ್ವಕವಾಗಿ ಸನ್ಮಾನಿಸಿ ವಿಶೇಷ ಆಶೀರ್ವಾದವನ್ನು ಪಡೆದರು.
ಶ್ರೀಯುತ ಗೋವಿಂದರಾವ್ ದೇಶಪಾಂಡೆಯವರು ನಿವೃತ್ತ ಶಾಲಾ ಶಿಕ್ಷಕರಾಗಿದ್ದಾರೆ. ಅವರಿಗೆ ಮೂವರು ಗಂಡುಮಕ್ಕಳು ಹಾಗೂ ಒಬ್ಬ ಮಗಳಿದ್ದಾರೆ. ಹಿರಿಯ ಪುತ್ರರಾದ ಶ್ರೀ ಸಂಜೀವ ದೇಶಪಾಂಡೆಯವರು ಕರ್ನಾಟಕ ಗ್ರಾಮೀಣ ಬ್ಯಾಂಕಿನ ನಿವೃತ್ತ ಅಧಿಕಾರಿ. ಎರಡನೇ ಪುತ್ರರು ಕಬ್ಬೂರಿನಲ್ಲಿ ಕೃಷಿಕರಾಗಿದ್ದು, ಕಿರಿಯ ಪುತ್ರರು ಬೆಳಗಾವಿಯಲ್ಲಿ ಔಷಧೀಯ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಅಳಿಯರಾದ ಶ್ರೀ ರಾಘವೇಂದ್ರ ದೇಶಪಾಂಡೆಯವರು ಕೂಡ ಕರ್ನಾಟಕ ಗ್ರಾಮೀಣ ಬ್ಯಾಂಕಿನ ನಿವೃತ್ತ ಅಧಿಕಾರಿಯಾಗಿದ್ದಾರೆ.
ದೇಶಪಾಂಡೆ ಕುಟುಂಬವು ತಮ್ಮ ಸ್ವಂತ ಹೊಲದಲ್ಲಿಯೇ ವಾಸವಾಗಿದ್ದು, ಭೂಮಿತಾಯಿಯೊಂದಿಗೆ ಗಟ್ಟಿಯಾದ ಬಾಂಧವ್ಯವನ್ನು ಉಳಿಸಿಕೊಂಡಿದೆ. ಕುಟುಂಬದ ಸದಸ್ಯರು ಉನ್ನತ ಶಿಕ್ಷಣ ಪಡೆದಿದ್ದರೂ, ಆಧುನಿಕತೆಯನ್ನು ಅಗತ್ಯವಿರುವಷ್ಟು ಮಾತ್ರ ಜೀವನದಲ್ಲಿ ಅಳವಡಿಸಿಕೊಂಡು ಸರಳ, ನೆಮ್ಮದಿಯ ಬದುಕು ನಡೆಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಇಂದಿನ ಯುವ ಪೀಳಿಗೆಗೆ ಇದು ಉತ್ತಮ ಸಂದೇಶವಾಗಿದ್ದು, ಇದೇ ಶ್ರೀಯುತ ದೇಶಪಾಂಡೆಯವರ ಸದೃಢ ಆರೋಗ್ಯ ಮತ್ತು ದೀರ್ಘಾಯುಷ್ಯದ ಪ್ರಮುಖ ರಹಸ್ಯವೆಂದು ಹೇಳಬಹುದು.
ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನರಸಿಂಹ ಸೌಹಾರ್ದ ಸಂಘ, ನರಸಿಂಹ ಸ್ವಸಹಾಯ ಸಂಘ ಹಾಗೂ ಗಾಯತ್ರಿ ಸಮೂಹ, ವಿಜಯಪುರದ ಪ್ರತಿಯೊಬ್ಬ ಸದಸ್ಯರೂ “ಶ್ರೀಯುತರು ಇನ್ನೂ ನೂರು ವರ್ಷ ಆರೋಗ್ಯವಾಗಿ ಬಾಳಲಿ, ಅವರ ಆಶೀರ್ವಾದ ಸದಾ ನಮ್ಮ ಮೇಲಿರಲಿ” ಎಂಬ ಹಾರೈಕೆಯನ್ನು ವ್ಯಕ್ತಪಡಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


