ಮೇರು ಕಲಾವಿದನ ಪ್ರದರ್ಶನದಿಂದಲೇ ಕಲೆಗೆ ಬೆಲೆ: ವಿದುಷಿ ಉಷಾ ಬಸಪ್ಪ

Upayuktha
0

               


      

ಬೆಂಗಳೂರು: ತಮ್ಮ ವಿಶಿಷ್ಟ ನೃತ್ಯ ಪ್ರಸ್ತುತಿಗಳ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ವಿದ್ವಾನ್ ಡಾ. ಸಂಜಯ್ ಶಾಂತರಾಮ್ ಅವರ ಹುಟ್ಟುಹಬ್ಬದ ಅಂಗವಾಗಿ ಇತ್ತೀಚೆಗೆ ನಗರದ ಸೇವಾ ಸದನದಲ್ಲಿ “ಕವಿ ಕಾವ್ಯ ನಮನ” ಕಾರ್ಯಕ್ರಮವನ್ನು ಆಯೋಜಿಸಲಾಯಿತು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ವಿದುಷಿ ಉಷಾ ಬಸಪ್ಪ ಅವರು, ವಿದ್ವಾನ್ ಡಾ. ಸಂಜಯ್ ಶಾಂತರಾಮ್ ಅವರನ್ನು ಹೃದಯಪೂರ್ವಕವಾಗಿ ಅಭಿನಂದಿಸಿದರು. “ಸಂಜಯ್ ಶಾಂತರಾಮ್ ಅವರು ನಮ್ಮ ನಾಡಿನ ನಿಜವಾದ ನೃತ್ಯ ರತ್ನ. ಬಾಲ್ಯದಲ್ಲೇ ತಮ್ಮ ಪ್ರತಿಭೆಯನ್ನು ಮೆರೆದ ಅವರು ನೃತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ನೃತ್ಯಗಾರರಾಗಿ ಮಾತ್ರವಲ್ಲದೆ ಬರಹಗಾರ, ಗಾಯಕರಾಗಿ, ನಟರಾಗಿ ಹಾಗೂ ಬಹುಮುಖ ಪ್ರತಿಭೆಯ ಮೇರು ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಇಂತಹ ಕಲಾವಿದರಿಂದಲೇ ಕಲೆಗೆ ನಿಜವಾದ ಮೌಲ್ಯ ಸಿಗುತ್ತದೆ,” ಎಂದು ಅವರು ಅಭಿಪ್ರಾಯಪಟ್ಟರು.


ಈ ಸಂದರ್ಭದಲ್ಲಿ ವಿದುಷಿ ಬಿ. ಸುನಂದಾದೇವಿ, ವಿದುಷಿ ರೇಖಾ ಜಗದೀಶ್ ಹಾಗೂ ಗುರು ವಿಜಯ್ ಶಂಕರ್ ಅವರು ಡಾ. ಸಂಜಯ್ ಶಾಂತರಾಮ್ ಅವರ ಕಲಾ ಸಾಧನೆಗಳನ್ನು ಸ್ಮರಿಸಿ ಮೆಚ್ಚುಗೆಯ ಮಾತುಗಳನ್ನು ವ್ಯಕ್ತಪಡಿಸಿದರು.


ಕಾರ್ಯಕ್ರಮದ ಅಂಗವಾಗಿ ವಿದ್ವಾನ್ ಡಾ. ಸಂಜಯ್ ಶಾಂತರಾಮ್ ಅವರು ನೀಡಿದ ಮನಮೋಹಕ ನೃತ್ಯ ಪ್ರಸ್ತುತಿಗೆ ಪ್ರೇಕ್ಷಕರು ಎದ್ದುನಿಂತು ಚಪ್ಪಾಳೆ ತಟ್ಟುವ ಮೂಲಕ ಭರ್ಜರಿ ಪ್ರಶಂಸೆ ವ್ಯಕ್ತಪಡಿಸಿದರು.



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top