ಪುತ್ತೂರು: ಸಂಗೀತ ನೃತ್ಯ ಸಾಹಿತ್ಯ ಮುಂತಾದ ಶಾಸ್ತ್ರೀಯ ಕಲೆಗಳು ನಾಡಿನ ಶ್ರೀಮಂತಿಕೆಯ ಪ್ರತೀಕ. ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಯ ಮೂಲಕ ನಮ್ಮ ಉತ್ಕೃಷ್ಟತೆಯ ಅಂಶಗಳನ್ನು ಸಮಾಜಕ್ಕೆ ತೋರಿಸಿಕೊಟ್ಟಂತಾಗುತ್ತದೆ ಎಂದು ದ್ವಾರಕಾ ಕಾರ್ಪೋರೇಷನ್ ಮುಖ್ಯಸ್ಥ ಗೋಪಾಲಕೃಷ್ಣ ಭಟ್ ಹೇಳಿದರು.
ಪುತ್ತೂರು ಸಮೀಪದ ಮುರದ ಶಿವಸದನ ಹಿರಿಯ ನಾಗರಿಕರ ವಸತಿ ನಿಲಯದಲ್ಲಿ ಜರುಗಿದ ಸಂಗೀತ ಕಲಾವಿದ ಆಗಮ ಪೆರ್ಲ ಅವರ ಸಂಗೀತ ಕಚೇರಿಯನ್ನು ಉದ್ಘಾಟಿಸಿ ಅವರು ಮಾತಾಡಿದರು.
ಕಲಾವಿದ ಆಗಮ ಪೆರ್ಲ ಓರ್ವ ಪ್ರತಿಭಾವಂತ ಯುವ ಗಾಯಕರಾಗಿ ಗುರುತಿಸಿಕೊಂಡಿದ್ದಾರೆ. ಅವರ ಭವಿಷ್ಯ ಉಜ್ವಲವಾಗಲಿ ಎಂದು ಅವರು ಹಾರೈಸಿದರು.
ಅಧ್ಯಕ್ಷತೆ ವಹಿಸಿದ ಶಿವಸದನ ಹಿರಿಯ ನಾಗರಿಕರ ವಸತಿ ನಿಲಯದ ಮುಖ್ಯಸ್ಥೆ ಸುಮಂಗಲಾ ಪ್ರಭಾಕರ್ ಇಲ್ಲಿ ಸುಮಾರು ನೂರ ಮೂವತ್ತರಷ್ಟು ಅಶಕ್ತ ಮಂದಿಗೆ ವಸತಿ ವ್ಯವಸ್ಥೆ ಕಲ್ಪಿಸಿದ್ದೇವೆ. ಅವರ ಶ್ರೇಯೋಭಿವೃದ್ಧಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೇವೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಾಹಿತಿ ಹಾಗೂ ಮಂಗಳೂರು ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ. ವಸಂತಕುಮಾರ ಪೆರ್ಲ ಅವರು ಶಿವಸದನ ಹಿರಿಯ ನಾಗರಿಕರ ವಸತಿ ನಿಲಯವು ಉತ್ತಮವಾಗಿ ಸಮಾಜಸೇವೆ ಮಾಡುತ್ತಿದೆ. ನಿಲಯವಾಸಿಗಳ ಜೀವನವನ್ನು ಸಹ್ಯಗೊಳಿಸುವ ಇಂತಹ ಚಟುವಟಿಕೆಗಳು ಸ್ವಾಗತಾರ್ಹ ಎಂದರು.
ಅನಂತರ ಮಂಗಳೂರಿನ ಪ್ರತಿಭಾವಂತ ಯುವ ಸಂಗೀತ ಕಲಾವಿದ ಆಗಮ ಪೆರ್ಲ ಸಂಗೀತ ಕಚೇರಿ ನಡೆಸಿಕೊಟ್ಟರು. ಮಂಗಳೂರಿನ ಧನಶ್ರೀ ಶಬರಾಯ ವಯಲಿನ್ ಮತ್ತು ಕಾಸರಗೋಡು ಉಬರಂಗಳದ ಪರಾಶರ ಮೃದಂಗ ಪಕ್ಕವಾದ್ಯ ಸಹಕಾರ ನೀಡಿದರು.
ಕಲಾವಿದೆ ವಿದ್ಯಾಶ್ರೀ ವಿಕ್ರಮರಾವ್ ಪ್ರಾರ್ಥನೆ ಹಾಡಿದರು. ಮೇಲ್ವಿಚಾರಕಿ ರೇಖಾ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯದರ್ಶಿ ಕರುಣ್ ರಾವ್ ಬೆಳ್ಳೆ ವಂದಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

