ಚಂಡೀಗಢದ ಆಡಳಿತಾತ್ಮಕ ಒಳ ನೇೂಟ

Upayuktha
0


ಚಂಡೀಗಢ ಆಥಿ೯ಕವಾಗಿ ಶೈಕ್ಷಣಿಕವಾಗಿ ಆಡಳಿತಾತ್ಮವಾಗಿ ಹೆಚ್ಚು ಗಮನ ಸೆಳೆಯುವ ಮಾದರಿ ಪ್ರದೇಶವೆಂದರುಾ ಆಶ್ಚರ್ಯವಲ್ಲ. ಹೇಳಿ ಕೇಳಿ ಚಂಡೀಗಢ ಒಂದು ಕೇಂದ್ರಾಡಳಿತ ಪ್ರದೇಶ. ಇಲ್ಲಿನ ಒಟ್ಟು ಜನಸಂಖ್ಯೆ 1.29 ಮಿಲಿಯನ್. ಒಟ್ಟು ಸಾಕ್ಷರತಾ ಪ್ರಮಾಣ ಶೇ.99.93. ಜಿಡಿಪಿ ಮತ್ತು ತಲಾದಾಯ ದೇಶದಲ್ಲಿಯೇ ಆಗ್ರ ಸ್ಥಾನದಲ್ಲಿ ನಿಲ್ಲುತ್ತದೆ. ಆಡಳಿತದ ನೆಲೆಯಲ್ಲಿ ಇಡೀ ಚಂಡೀಗಢ ಭೌಗೋಳಿಕವಾಗಿ ವಿಭಜಿಸಿ ರಚನೆ ಮಾಡಿರುವುದು ಇಡಿ ದೇಶಕ್ಕೆ ಮಾದರಿ.


ಆಡಳಿತದಲ್ಲಿ ಅಭಿವೃದ್ಧಿ ಶಿಸ್ತು, ಪ್ರಾಕೃತಿಕ ಹಸಿರು ಸಂಪತ್ತಿನ ಸೌಂದರ್ಯ ಉಳಿಸಿ ಬೆಳೆಸಿಕೊಳ್ಳುವಲ್ಲಿ ಚಂಡೀಗಢ ನಿಜಕ್ಕೂ ರಾಷ್ಟ್ರದಲ್ಲಿಯೇ ಮೇಲ್ಪಂಕ್ತಿಯಲ್ಲಿ ನಿಲ್ಲಬಲ್ಲ ಪ್ರದೇಶವೆಂದರೂ ತಪ್ಪಾಗಲಾರದು. ಆಡಳಿತಾತ್ಮಕ ಅನುಕೂಲತೆಯ ದೃಷ್ಟಿಯಿಂದ 60 ಸೆಕ್ಟರ್ ಗಳಾಗಿ ವಿಭಾಗಿಸಲಾಗಿದೆ. ಪ್ರತಿಯೊಂದು ಸೆಕ್ಟರ್ ತನ್ನದೇ ವಿಶೇಷತೆ ಪಡೆದುಕೊಂಡಿದೆ. ಪ್ರಮುಖವಾದ ಸೆಕ್ಟರ್ ಅಂದರೆ ಕ್ಯಾಪಿಟಲ್ ಕಾಂಪ್ಲೆಕ್ಸ್, ಸಿಟಿಸೆಂಟರ್  ಇತ್ಯಾದಿ. ಕ್ಯಾಪಿಟಲ್ ಕಾಂಪ್ಲೆಕ್ಸ್ ಸೆಕ್ಟರ್ ನಲ್ಲಿ ಶಾಸಕಾಂಗ ನ್ಯಾಯಾಂಗ ಮತ್ತು ಆಡಳಿತದ ಕಾರ್ಯಾಲಯಕ್ಕೆ ಸಂಬಂಧಿಸಿದ ಕೇಂದ್ರ ಸ್ಥಾನವಿದೆ.ಇದನ್ನೇ ಯುನೆಸ್ಕೋ ವಲ್ಡ್ ಹೆರಿಟೇಜ್ ಎಂದು ಗುರುತಿಸಲ್ಪಟ್ಟಿದೆ. ಸಿಟಿ ಸೆಂಟರ್ ಸೆಕ್ಟರ್ ನಲ್ಲಿ ವ್ಯಾಪಾರ ವಾಣಿಜ್ಯ ಕೇಂದ್ರವಾಗಿ ಗುರುತಿಸಲ್ಪಟ್ಟಿದೆ.


ಚಂಡೀಗಢದಲ್ಲಿ ಬಹುಮುಖ್ಯವಾಗಿ ಗಮನಿಸಬೇಕಾದದ್ದು ಪ್ರಾಕೃತಿಕ ಹಸಿರು ಸಂಪತ್ತನ್ನು ಮನಸೆಳೆಯುವ ರೀತಿಯಲ್ಲಿ ಸೌಂದರ್ಯ ಮತ್ತು ಸ್ವಚ್ಛತೆಯನ್ನು ಕಾಪಾಡಿಕೊಂಡು ಬರುವ ನಿಟ್ಟಿನಲ್ಲಿ ರಸ್ತೆಗಳ ಅಕ್ಕಪಕ್ಕದಲ್ಲಿ ಪುಷ್ಪಾಲಂಕೃವಾದ ಹಸಿರು ಇಡಿ ಚಂಡೀಗಢನ್ನು ಸಂಪದ್ಭರಿತವಾಗಿ ಪ್ರವಾಸಿಗರನ್ನು  ಆಕಷಿ೯ಸುತ್ತದೆ. ಮಾತ್ರವಲ್ಲ ಅತೀ ಮುಖ್ಯವಾಗಿ ರಸ್ತೆ ಸುರಕ್ಷಿತ ರಸ್ತೆ ಸಂಚಾರ ವ್ಯವಸ್ಥೆ. ಸುಮಾರು 2000ಕ್ಕೂ ಹೆಚ್ಚು ಸಿ.ಸಿ. ಕ್ಯಾಮರಾಗಳ ಕಣ್ಗಾವಲು. ಪ್ರತಿ ಕ್ಷಣವುಾ ರಸ್ತೆ ಸಂಚಾರಿ ವ್ಯವಸ್ಥೆಯನ್ನು ಪರಿಶೀಲಿಸುವ ಪೊಲೀಸ್ ಕಂಟ್ರೋಲಿಂಗ್‌ ನಿರ್ವಹಣೆ ನಿಜಕ್ಕೂ ಬೇರೆ ಎಲ್ಲಾ ರಾಜ್ಯಗಳಿಗೂ ಮಾದರಿಯಾಗಬೇಕು.


ಚಂಡೀಗಢ ಸಂಪದ್ಭರಿತವಾದ ಕೇಂದ್ರಾಡಳಿತ ಪ್ರದೇಶ. ಮಾತ್ರವಲ್ಲ ಪಂಜಾಬ್‌ ಹರಿಯಾಣ ಎರಡು ರಾಜ್ಯಗಳಿಗೆ ರಾಜಧಾನಿ ಅನ್ನುವ ಕೀರ್ತಿ ಚಂಡೀಗಢ ಕೇಂದ್ರಾಡಳಿತ ಪ್ರದೇಶಕ್ಕೆ ಸಂದಾಯವಾಗಿದೆ. ಇಲ್ಲಿನ ವಿಶೇಷತೆ ಅಂದರೆ ಈ ಎರಡು ರಾಜ್ಯಗಳ ವಿಧಾನ ಸಭೆಗಳು ಮತ್ತು ಸೆಕ್ರೆಟೇರಿಯೆಟ್ ಇದೇ ಚಂಡೀಗಢದಲ್ಲಿ ತಳವೂರಿವೆ. ಆದರೆ ಅವುಗಳಿಗೆ ಚಂಡೀಗಢಕ್ಕೆ ಸಂಬಂಧಿಸಿದ ಯಾವುದೇ ನಿರ್ಧಾರವಾಗಲಿ ಕೆಲಸವಾಗಲಿ ಮಾಡಲು ಸಾಧ್ಯವಿಲ್ಲ. ಚಂಡೀಗಢಿಕ್ಕೆ ಸಂಬಂಧಿಸಿದ ಸಂಪೂರ್ಣವಾದ ಜವಾಬ್ದಾರಿಯನ್ನು ನೇೂಡಿಕೊಳ್ಳಲು ಬಹು ಸುಸಜ್ಜಿತವಾದ ಸೆಕ್ರೆಟೇರಿಯಟ್ ಚಂಡೀಗಢ ಪ್ರಧಾನ ಸ್ಥಳದಲ್ಲಿ ತಲೆ ಎತ್ತಿ ನಿಂತಿದೆ. ಇಲ್ಲಿನ ಮುಖ್ಯ ಜವಾಬ್ದಾರಿಯನ್ನು ರಾಜ್ಯಪಾಲರು ಮತ್ತು ಮುಖ್ಯ ಕಾರ್ಯದರ್ಶಿಗಳೇ ನೇೂಡಿಕೊಳ್ಳುತ್ತಾರೆ. ಅವರು ನೇರವಾಗಿ ಕೇಂದ್ರ ಸರಕಾರಕ್ಕೆ ಜವಾಬ್ದಾರಿತನ ಹೊಂದಿರುತ್ತಾರೆ. ಪ್ರಸ್ತುತ ಪಂಜಾಬ್‌ ರಾಜ್ಯಪಾಲರು ಮತ್ತು ಮುಖ್ಯ ಕಾರ್ಯದರ್ಶಿ ಗಳಾಗಿ ನಮ್ಮೂರಿನ ಎಚ್.ರಾಜೇಶ್ ಪ್ರಸಾದ್‌ ಕಾರ್ಯ ನಿವ೯ಹಿಸುತ್ತಿರುವುದು ಕನ್ನಡಿಗರಿಗೂ ಹೆಮ್ಮೆ.


ಚಂಡೀಗಢ ನೇೂಡ ಬೇಕು ಅನ್ನುವವರು ನೇೂಡಲೇ ಬೇಕಾದದ್ದು ಅಲ್ಲಿನ ಸ್ವಚ್ಛತೆ ಪ್ರಕೃತಿ ಸಂಪತ್ತು ಚಾರಿತ್ರಿಕ ಆಡಳಿತ ಸೌಧಗಳು. ಅವರ ಶಿಸ್ತುಬದ್ಧ ಆಡಳಿತ ಕಾರ್ಯವೈಖರಿ ಪ್ರಮುಖವಾಗಿ ಪ್ರವಾಸಿಗರ ಗಮನಸೆಳೆಯುತ್ತದೆ.


- ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top