ಏನಿಲ್ಲ ಬರಿ ಕಾಗದ ಅಷ್ಟೇ ಆದರೆ ಅದೇ ಕಾಗದ ಮನುಷ್ಯನ ಆಲೋಚನೆಗೆ ರೂಪ ಕೊಟ್ಟ ಸಾಗರ. ಕಾಗದ ಅಗಾಧವಾದ ಅಕ್ಷರಗಳನ್ನು ತುಂಬಿಕೊಂಡಿದ್ದರೆ ಮಾತ್ರ ಅದಕ್ಕೊಂದು ತೂಕ . ಖಾಲಿಯಾಗಿದ್ದರೆ ಒಣಗಿದ ಮರದ ಎಲೆಯ ಹಾಗೆ ನಿರುಪಯೋಗವಾಗಿಬಿಡುತ್ತದೆ.
ಒಂದು ಕಾಗದ ಏನು ಬೇಕಾದರೂ ಮಾಡಬಹುದು ಒಬ್ಬರನ್ನ ನೋಟಿಸ್ ಮೂಲಕ ದುಃಖಿಸಬಹುದು ಮತ್ತೊಬ್ಬರನ್ನ ಜಾಬ್ ಕಾಲ್ ಮೂಲಕ ನಗಿಸಬಹುದು, ಪ್ರಶ್ನೆ ಪತ್ರಿಕೆಯ ಮೂಲಕ ಭಯಪಡಿಸಬಹುದು..ಕೆಲವೊಂದು ಕಾಗದಗಳು ಆ ಕ್ಷಣಕ್ಕೆ ಮಾತ್ರ ನಮ್ಮ ಮೇಲೆ ಪರಿಣಾಮ ಬೀರಬಹುದು, ಆದರೆ ಕೆಲವೊಂದು ಕಾಗದಗಳು ಜೀವನದುದ್ದಕ್ಕೂ ನಮ್ಮ ಮೇಲೆ ಅಘಾತವಾದ ಪರಿಣಾಮ ಬೀರುತ್ತದೆ..
ಉದಾಹರಣೆಗೆ , ನಮ್ಮಂತ ವಿದ್ಯಾರ್ಥಿಗಳಿಗೆ ಕೆಲವು ಪ್ರಶ್ನೆ ಪತ್ರಿಕೆಗಳಂತಹ ಕಾಗದಗಳು ಪರೀಕ್ಷೆ ಶುರುವಾದಾಗಿನಿಂದ ಹಿಡಿದು ಮುಗಿಯುವವರೆಗೆ ಮಾತ್ರ ಮುಖ್ಯವಾಗುತ್ತದೆ, ಪರೀಕ್ಷೆ ಮುಗಿದ ನಂತರ ಆ ಕಾಗದ ಎಲ್ಲಿ ಹೋಗಿದೆ ಎನ್ನುವ ಗೋಜಿಗೆ ನಾವು ಹೋಗುವುದಿಲ್ಲ. ಆದರೆ ಅದೇ ಕಾಗದ ಒಂದು ಮುಖ್ಯ ಆಧಾರ ಆಗಿದ್ದಲ್ಲಿ ಕಳೆದು ಹೋದ ಗೊಂದಲ ತಪ್ಪಿದ್ದಲ್ಲ..
ಹೀಗೆ ಕಾಗದ ಒಂದು ಸಕಲಕಲಾವಲ್ಲಭ ಎನ್ನುವಂತೆ ನಮ್ಮ ಜೀವನದಲ್ಲಿ ಆಯಾ ಸಂದರ್ಭದಲ್ಲಿ ತಕ್ಕಂತೆ ಅದರ ಪಾತ್ರ ನಿರ್ವಹಿಸುತ್ತದೆ. ಬಾಲ್ಯದಿಂದ ಹಿಡಿದು ಆಯಸ್ಸು ಮುಗಿಯುವ ತನಕ ಕಾಗದ ನಮ್ಮ ಜೀವನದಲ್ಲಿ ನಟಿಸಿದ ಪಾತ್ರ ಅಪಾರವಾದದ್ದು..
ಸಣ್ಣವರಿದ್ದಾಗ ಕಾಗದವನ್ನೇ ಮಡಚಿ ರಾಕೆಟ್, ದೋಣಿ ಮಾಡುತ್ತಿದ್ದ ನಾವು ಈಗ ಜೀವನವೆಂಬ ದೋಣಿಯಲ್ಲಿ ಸಾಗುವ ಭರದಲ್ಲಿ ಕಾಗದವನ್ನೇ ಮರೆತಿದ್ದೇವೆ ಸದ್ಯಕ್ಕೆ ಕಾಗದದ ಬಗ್ಗೆ ಬರೆಯಲು ನನಗೆ ಕಾಗದ ಸಿಕ್ಕಿತೆಂಬ ಖುಷಿ ..
-ದೀಪಿಕಾ ಪ್ರಭು
ಕಕ್ಯಪದವು
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



