ಧೀಮಂತ ಹಾಗೂ ಹಾಗೂ ಧೀಮಹಿ ವಸತಿಗೃಹದಲ್ಲಿ ಮಾಸಿಕ ಕಾರ್ಯಕ್ರಮ
ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಧೀಮಂತ ಹಾಗೂ ಧೀಮಹಿ ವಸತಿಗೃಹಗಳ ಸಹಭಾಗಿತ್ವದಲ್ಲಿ ಮಾಸಿಕ ಕಾರ್ಯಕ್ರಮವು ಮಂಗಳವಾರ ಸಂಜೆ 6 ಗಂಟೆಗೆ ದಿವ್ಯಾನ್ನ ಮೆಸ್ಸಿನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಡಾ. ಅಶ್ವಿತ್ ಜೈನ್ ಅವರು ಭಾಗವಹಿಸಿ “ಕೌಟುಂಬಿಕ ಮೌಲ್ಯಗಳು ಮತ್ತು ಸಾಮಾಜಿಕ ಜಾಲತಾಣಗಳ ಸಮತೋಲನ” ವಿಷಯವಾಗಿ ಉಪನ್ಯಾಸ ನೀಡಿದರು.
ತಮ್ಮ ಭಾಷಣದಲ್ಲಿ ಸಂವಹನ ಜೀವನದಲ್ಲಿ ಅತ್ಯಂತ ಮುಖ್ಯವಾಗಿದ್ದು, ಉತ್ತಮ ಸಂವಹನ ಕೌಶಲ್ಯವು ವ್ಯಕ್ತಿಯ ಜೀವನದ ಹಾದಿಯನ್ನು ಬದಲಾಯಿಸಬಲ್ಲದು ಎಂದು ಹೇಳಿದರು. ಸಂವಹನ ತಿಳಿದಿದ್ದರೆ ಜಗತ್ತಿನ ಯಾವುದೇ ಭಾಗದಲ್ಲೂ ಬದುಕಲು ಸಾಧ್ಯವೆಂದು ಅಭಿಪ್ರಾಯಪಟ್ಟರು. ಜೀವನದಲ್ಲಿ ಟೀಕೆ ಮಾಡುವವರು ಇರುತ್ತಾರೆ; ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸಿದರೆ ಅದು ನಮ್ಮ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು. ಹಲವಾರು ಭಾಷೆಗಳನ್ನು ಕಲಿಯುವುದರಿಂದ ಜಗತ್ತಿನ ಎಲ್ಲೆಡೆ ಅವಕಾಶಗಳನ್ನು ಪಡೆದುಕೊಳ್ಳಬಹುದು; ಭಾಷೆಗೆ ಯಾವುದೇ ತಡೆಗೋಡೆ ಇರುವುದಿಲ್ಲ ಎಂದರು.
ಜೀವನದಲ್ಲಿ “ಫೇಲ್” ಎನ್ನುವುದು “ಪಾಸ್” ಆಗುವ ದಾರಿಗೆ ಕರೆದೊಯ್ಯುವ ಪಾಠವಾಗಿದ್ದು, ತರಗತಿಯಲ್ಲಿ ವಿಫಲವಾದರೂ ಜೀವನದಲ್ಲಿ ಯಶಸ್ಸು ಸಾಧಿಸುವ ನಂಬಿಕೆ ಹೊಂದಿರಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಪರಿಶ್ರಮವೇ ಸದಾ ಯಶಸ್ಸಿನ ದಾರಿಯೆಂದು ಅವರು ಒತ್ತಿ ಹೇಳಿದರು. ಜೀವನದಲ್ಲಿ ಯಾವುದೇ ಕಷ್ಟಗಳು ಎದುರಾದರೂ ಕುಗ್ಗದೆ, ಬಗ್ಗದೆ ಧೈರ್ಯದಿಂದ ಮುಂದೆ ಸಾಗಬೇಕು; ಜೀವನವು ಸಕಾರಾತ್ಮಕ ಮನೋಭಾವದಿಂದ ನೋಡಿದರೆ ಸಂತೋಷಕರವಾಗಿರುತ್ತದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮವನ್ನು ವೈದೇಹಿ ನಿರೂಪಿಸಿದರು. ಧವಲ್ ವಂದಿಸಿದರು. ವಿದ್ಯಾರ್ಥಿಗಳು ಹಾಗೂ ವಸತಿಗೃಹದ ವಾರ್ಡನ್‌ಗಳು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

