ಹೆಣ್ಣು ಅಂದರೆ ಯಾಕೆ ಅಷ್ಟೇ?

Upayuktha
0


ಹೆಣ್ಣು ಶಕ್ತಿಯ ದೇವತೆ. ಮನೆಯನ್ನು ಬೆಳಗುವ ದೇವತೆ. ಹೆಣ್ಣು ಎಂದರೆ ಕೇವಲ ಮನೆಯನ್ನು ನಡೆಸುವ ಆಳು ಅಲ್ಲ, ಅವಳು ಸಂಸಾರದ ಕಣ್ಣು.  ಪ್ರತಿಯೊಬ್ಬರ ತಾಯಿಯು ಕೂಡ ಹೆಣ್ಣೇ, ಆದರೆ ಸಮಾಜದಲ್ಲಿ ಹೆಣ್ಣು ಅಂದರೆ ಯಾಕೆ ಅಷ್ಟೇ!

  

ತಾಯಿಯೇ ಮೊದಲ ಗುರು, ಅವಳೇ ಸ್ನೇಹಿತೆ, ಶಕ್ತಿ ಶಾಂತಿ, ಸಹನೆ, ಸಂಸ್ಕೃತಿಗೆ ಹೆಸರಾದವಳು ಹೆಣ್ಣು. ಒಬ್ಬ ತಾಯಿ ನೂರು ಶಿಕ್ಷಕರಿಗೆ ಸಮಾನ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಗಾದೆ ಮಾತಿದೆ.

      

ಹೆಣ್ಣು ಸಮಾಜದ ಕಣ್ಣು, ಒಬ್ಬ ಪುರುಷನಿಗೆ ತಾಯಿಯಾಗಿ, ಹೆಂಡತಿಯಾಗಿ, ಸಹೋದರಿಯಾಗಿ, ಪ್ರೇಯಸಿಯಾಗಿ ಹೆಣ್ಣು ಬೇಕು. ಆದರೆ, ಮಗಳಾಗಿ  ಮಾತ್ರ ಯಾರಿಗೂ ಬೇಡ ಅಲ್ಲಾ!


ಹಿಂದಿನ ಕಾಲದಲ್ಲಿ ಹೆಣ್ಣು ಹುಟ್ಟಿದರೆ ಸಾಕು, ಹೆಣ್ಣಾ! ಗಂಡು ಮಗು ಅಲ್ವಾ ಎಂದು ಪ್ರಶ್ನಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಹೆಣ್ಣಿನ ಬಗ್ಗೆ ಗೌರವ ಅಂತೂ ಇಲ್ವೇ ಇಲ್ಲಾ. ಒಂದು ಗಂಡು ಮಗು ಆಗಲು ಹೆಣ್ಣು ಬೇಕು ತಾಯಿಯು ಕೂಡ ಹೆಣ್ಣೇ ತಾನೆ.


ಹೆಣ್ಣು ಕೇವಲ  ಹುಟ್ಟಿದ ಮನೆ ಮತ್ತು ಸೇರಿದ ಮನೆ ಎರಡನ್ನೂ ಬೆಳಗುವ ಜವಾಬ್ದಾರಿಯನ್ನು  ಪಡೆದಿರುತ್ತಾಳೆ. ಹೆಣ್ಣು ಕೇವಲ ಮಮತೆಯ ಮೂರ್ತಿಯಲ್ಲ, ಒಬ್ಬಳು ಹೋರಾಟಗಾರ್ತಿ.


ಹೆಣ್ಣಿನ ಭಾವನೆಗಳಿಗೆ ಸ್ಪಂದಿಸುವಂತಹ  ಮನಸ್ಸಿರಬೇಕು. ಅವಳನ್ನು ಗೌರವ ಮನೋಭಾವದಿಂದ ಕಾಣಬೇಕು. ಯಾವುದೇ ಹೆಣ್ಣನ್ನು ಅಗೌರವದಿಂದ ಕಾಣಬೇಡಿ. ಪ್ರತಿಯೊಂದು ಹೆಣ್ಣಲ್ಲೂ ತಾಯಿಯನ್ನು ಕಾಣಿರಿ. ಹೆಣ್ಣು ದೇವತೆಗೆ ಸಮಾನ.


ಪ್ರತಿಯೊಂದು ಕಡೆಯಲ್ಲೂ ಭ್ರೂಣಹತ್ಯೆ, ಅತ್ಯಾಚಾರ, ಲಿಂಗ ತಾರತಮ್ಯ, ಈ ಎಲ್ಲಾ ಸಮಸ್ಯೆಯನ್ನು ಅನುಭವಿಸುವುದು ಹೆಣ್ಣು. ಆಕೆಯನ್ನು ಗೌರವಿಸುವುದು ಎಂದರೆ ಸಂಸ್ಕೃತಿಯನ್ನು ಗೌರವಿಸಿದಂತೆ. ತನ್ನ ಆಸೆಗಳನ್ನು ಮರೆತು ಕುಟುಂಬಕ್ಕಾಗಿ ತ್ಯಾಗ ಮಾಡುವ ಗುಣ ಅವಳದ್ದು. ಅವಳೇ ಹೆಣ್ಣು.


- ಶಿವಾನಿ ಕೊಡಂಗಾಯಿ

ಪ್ರಥಮ ಬಿ. ಎ ಪತ್ರೀಕೋದ್ಯಮ ವಿಭಾಗ

ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top