ವ್ಯಾಲೆಂಟೈನ್ ಡೇ: ನಮ್ಮದಲ್ಲದ ಆಚರಣೆ

Upayuktha
0


ಮ್ಮದು ಉತ್ತಮ ಸಂಸ್ಕಾರಗಳನ್ನು ಹೇಳಿಕೊಡುವ ಭಾರತೀಯ ಸಂಸ್ಕೃತಿ. ಉತ್ತಮ ರೀತಿ ನೀತಿಗಳನ್ನು ರೂಢಿ ಮಾಡಿ ಮಕ್ಕಳನ್ನು ಸರಿಯಾಗಿ  ಪೋಷಿಸಬೇಕೆಂಬ ಸುಂದರ ಸಂಸ್ಕೃತಿ... 


ವಿದೇಶ ಜನರ ರೀತಿ ನೀತಿಗಳು ಈಗೀಗ ನಮ್ಮ ಜನರಿಗೆ ಬಹಳ ಇಷ್ಟವಾಗುತ್ತಿವೆ. ಮದರ್ಸ್ ಡೇ, ಫಾದರ್ಸ್ ಡೇ, ರೋಜ್ ಡೇ, ಕಿಸ್ ಡೇ, ವ್ಯಾಲೆಂಟೈನ್ ಡೇ, ಹೀಗೇ ಒಂದೊಂದು ದಿನ, ಒಂದೊಂದು ಡೇ. 


ಮೊದಲು ಯಾಕೆ ಈ ಡೇ ಗಳ ಆಚರಣೆ ಬಂತು ಅಂತ್ ಯೋಚಿಸೋಣ.. ವಿದೇಶಗಳಲ್ಲಿ ಗಂಡ ಹೆಂಡತಿ ಮಗು ಹುಟ್ಟಿ 16 ವರ್ಷದ ಪ್ರಾಯವಾಗುವ ವರೆಗೆ ಮಗುವನ್ನು ಮನೆಯಲ್ಲಿ ಬೆಳೆಸುತ್ತಾರೆ, ಆಮೇಲೆ ಮಕ್ಕಳು ತಮ್ಮ ವಿದ್ಯಾಭ್ಯಾಸ, ಅನ್ನ, ತಾವೇ ಹುಡುಕಿಕೊಳ್ಳಬೇಕು. ತಮ್ಮ ಮದುವೆಗೆ ಹೆಣ್ಣು /ಗಂಡು, ತಾವೇ ಆಯ್ಕೆ ಮಾಡಿಕೊಳ್ಳಬೇಕು.. ಅವರಿಗೆ ನಮ್ಮ ದೇಶದಲ್ಲಿ ಇರುವಂತೆ ಹಿರಿಯರ ಮಾರ್ಗದರ್ಶನವಿಲ್ಲ. ಮದುವೆ ಮಾಡಿಕೊಳ್ಳೋಕೆ ಅವರು ಸರಿಯಾದ  ಹೆಣ್ಣನ್ನು ಆಯ್ಕೆ ಮಾಡಿಕೊಳ್ಳಬೇಕಾದ್ರೆ ಏನು ಮಾಡಬೇಕು? ಅವರ ವಯಸ್ಸು ಇನ್ನೂ ಅಂಥ ಅನುಭವ ಹೊಂದಿದ ವಯಸ್ಸು ಇರಲ್ಲ, ಅದಕ್ಕೆ ಅವರು ಹೆಣ್ಣು, ಗಂಡನ್ನು ಸೆಳೆಯಲು ಅಂಗ ಸೌಷ್ಟವವನ್ನು ಆಕರ್ಷಕವಾಗಿ ಕಾಣುವಂತೆ ತೋರಿಸಿಕೊಂಡು, ಗಮನ ಸೆಳೆಯೋಕೆ ಯತ್ನಿಸುತ್ತಾರೆ.


ನಮ್ಮ ದೇಶದಲ್ಲಿರುವಂತೆ ಜಾತಕ, ಅದು, ಇದು, ಅನ್ನೋ ಸಂಪ್ರದಾಯಗಳು ಇಲ್ಲವೇ ಇಲ್ಲ. ಅದಕ್ಕೆ ಅವರು ಇಷ್ಟ ಅನ್ನಿಸೋ ಹುಡುಗಿ ಹುಡುಗಿ ಜೊತೆಗೆ ಲಿವಿಂಗ್ ಟುಗೆದರ್ ರಿಲೇಶನ್ಶಿಪ್ ಇಟ್ಕೊಳ್ಳುತ್ತಾರೆ. ನಮ್ಮಲ್ಲಿರೋ ಹಾಗೇ ಕಟ್ಟುಪಾಡು, ಸಂಪ್ರದಾಯ, ಯಾವುದೂ ಇಲ್ಲದೇ ಇರೋದ್ರಿಂದ, use and throw ಅನ್ನೋ ರೀತಿ, ಜೊತೆಗೆ ಇದ್ದು ನೋಡಿಕೊಂಡು, ಸರಿ ಅನ್ನಿಸ್ತಾ ಮದುವೆಯಾಗು ಇಲ್ಲವ ಬಿಟ್ಟುಬಿಡು ಅನ್ನೋ ಕೆಟ್ಟ ಸಂಪ್ರದಾಯಕ್ಕೆ ಜೋತುಬೀಳುತ್ತಾರೆ. 


Mother, father, ಅವರ ಜೊತೆಗೆ ಇರೋದೇ ಇಲ್ಲ, ಆದ್ದರಿಂದ, mothers day, father's day ಆಚರಿಸುತ್ತಾರೆ. ಇದ್ರಲ್ಲಿ ಇನ್ನೂ ಒಂದು ವಿಚಾರ ಇದೆ. ಒಬ್ಬ ಮಗ ಇದ್ದಾನೆ ಅಂದುಕೊಳ್ಳಿ, ಅವನ ತಂದೆ ಅದೇ ತಾಯಿಯೊಡನೆ ಇನ್ನೂ ಇದ್ದಾನಾ? ಇಲ್ಲವಾ? ಗೊತ್ತಿರಲ್ಲ, ಅದಕ್ಕೆ ತಮ್ಮ ತಾಯಿ, ತಂದೇನ ಭೇಟಿ ಮಾಡೋ ವಿಶೇಷ ದಿನಗಳು ಅವು. 


ಪ್ರತಿದಿನ ನಮ್ಮ ಮನೆಯಲ್ಲಿ ಕಣ್ಣೆದುರೇ ಅಪ್ಪ ಅಮ್ಮನ ದರ್ಶನ ಭಾಗ್ಯ ಇರುತ್ತೆ, ನಮ್ಮ ದೇಶದಲ್ಲಿ ಮನೆಯಿಂದ ಹೊರಗೆ ಹೋಗಬೇಕಾದ್ರೆ ಅಪ್ಪ ಅಮ್ಮನ ಪಾದ ಮುಟ್ಟಿ ನಮಸ್ಕರಿಸಿ, ಆಶೀರ್ವಾದ ಪಡೆದು ಹೋಗುವ ಸಂಪ್ರದಾಯ ನಮ್ಮದು. 


ಇಂಥ ಒಳ್ಳೆಯ ಸಂಸ್ಕೃತಿ ಇರೋ ನಮ್ಮ ಸಂಪ್ರದಾಯಗಳು ನಮಗೇ ಇರಬೇಕಾದ್ರೆ ನಾವು ಯಾಕೆ ಅವರ ಸಂಪ್ರದಾಯಗಳನ್ನು ಆಚರಿಸಬೇಕು.

ಯಾಕೆ ಪ್ರೇಮಿಗಳ ದಿನಾಚರಣೆ ಮಾಡಬೇಕು. ಒಂದೇ ಹುಡುಗಿನ/ಹುಡುಗನ್ನ ಪ್ರೀತಿಸಿ, ಕೊನೆವರೆಗೂ ಅವಳನ್ನೇ /ಅವನನ್ನೇ ನಂಬಿ ಬದುಕುವ ನಿಷ್ಠೆಯುಳ್ಳ, ಪ್ರೇಮಿಗಳಿಗೆ, ಅದನ್ನು ತೋರಿಸಿಕೊಳ್ಳೋ ಅಗತ್ಯವಿಲ್ಲ. 


ಭಾರತೀಯ ಸಂಸ್ಕೃತಿಯನ್ನೇ ಆಚರಿಸೋಣ, ಕಣ್ಣಿದ್ದೂ ಕುರುಡರಂತೆ ವರ್ತಿಸೋದನ್ನು ಬಿಡೋಣ.


- ರೇಖಾ ಮುತಾಲಿಕ್


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top