ಫೆ.15: 'ಪ್ರಗೀತ' ಪುಸ್ತಕ ಬಿಡುಗಡೆ

Upayuktha
0


ಪುತ್ತೂರು: ಮುಕ್ಕೂರಿನ ಶಾಲಾ ವಠಾರದಲ್ಲಿ ಫೆಬ್ರವರಿ 15ರಂದು ನಡೆಯಲಿರುವ ನೇಸರ ದಶಪ್ರಣತಿ ಕಾರ್ಯಕ್ರಮದ ಅಂಗವಾಗಿ, ಅಂತರ್‌ಜಿಲ್ಲಾ ಮಟ್ಟದ ಕವಿಗೋಷ್ಠಿ ಹಾಗೂ ಯುವ ಕವಯಿತ್ರಿ ಅನನ್ಯ ಎಚ್. ಸುಬ್ರಹ್ಮಣ್ಯ ಅವರ ಎರಡನೇ ಕೃತಿ  ‘ಪ್ರಗೀತ’ ಲೋಕಾರ್ಪಣೆಗೊಳ್ಳಲಿದೆ.


ನೇಸರ ಯುವಕ ಮಂಡಲ ಹಾಗೂ ನೇಸರ ಯುವತಿ ಮಂಡಲ ಮುಕ್ಕೂರು ಇವರ ನೇತೃತ್ವದಲ್ಲಿ, ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಸಹಕಾರದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕವಿಗೋಷ್ಠಿಯಲ್ಲಿ ವಿವಿಧ ಜಿಲ್ಲೆಗಳ 52 ಕವಿಗಳು ಭಾಗವಹಿಸಿ ಕಾವ್ಯಪಠಣ ಮಾಡಲಿದ್ದಾರೆ.


ಅನನ್ಯ ಎಚ್. ಸುಬ್ರಹ್ಮಣ್ಯ ಅವರು ವಿವೇಕಾನಂದ ಕಾಲೇಜು, ಪುತ್ತೂರು ಇದರ ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿಯಾಗಿದ್ದು, ಈಗಾಗಲೇ ಸಾಹಿತ್ಯ ವಲಯದಲ್ಲಿ ಭರವಸೆಯ ಯುವ ಕವಯಿತ್ರಿಯಾಗಿ ಗುರುತಿಸಿಕೊಂಡಿದ್ದಾರೆ. ಇವರ ಮೊದಲ ಕವನ ಸಂಕಲನ ‘ಅಭಿಶಸ್ತಿ’ ಕಳೆದ ಫೆಬ್ರವರಿ 21ರಂದು ಬಿಡುಗಡೆಯಾಗಿ ಉತ್ತಮ ಸ್ಪಂದನೆ ಪಡೆದಿತ್ತು.


ಅನನ್ಯ ಅವರು ಗಂಗಾಧರ ಮತ್ತು ಜಯಶ್ರೀ ದಂಪತಿಯ ಪುತ್ರಿಯಾಗಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top