ಉಪಾಧ್ಯ ರಂಗಾಚಾರ್ಯ ಸಂಸ್ಮರಣೆ, ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ

Upayuktha
0


ಬೆಂಗಳೂರು: ಮೈತ್ರೇಯಿ ಕನ್ನಡ ಮಹಿಳಾ ಹರಿದಾಸ ಟ್ರಸ್ಟ್‌ನ ವತಿಯಿಂದ ಸಿರಿಜಾನಕಿ ಪತಿ ವಿಠಲಾಂಕಿತರಾದ ಶ್ರೀ ಉಪಾಧ್ಯ ರಂಗಾಚಾರ್ಯ ಅವರ ಸಂಸ್ಮರಣೆ ಸೋಮವಾರ (ಫೆ. 23) ಫಾಲ್ಗುಣ ಶುದ್ಧ ಸಪ್ತಮಿಯಂದು ಭಕ್ತಿಭಾವದಿಂದ ಆಚರಿಸಲಾಯಿತು.


ಈ ಸಂದರ್ಭದಲ್ಲಿ, ತಮ್ಮ ತಂದೆಯ ಹೆಸರಿನಲ್ಲಿ ಪ್ರತಿವರ್ಷ ದಾಸರ ಆರಾಧನೆ ನಡೆಸುವ ಉದ್ದೇಶದಿಂದ ಸ್ಥಾಪಿಸಲಾದ ದತ್ತಿನಿಧಿಗೆ ಸಂಬಂಧಿಸಿ, ಹೊಗರೆ ರಂಗ ನರಸಿಂಗ ಅಂಕಿ ತರಾದ ಶ್ರೀ ಭಾರ್ಗವಿ ಗೋಪಾಲಾಚಾರ್ಯ ಅವರನ್ನು ದತ್ತಿನಿಧಿ ಮಹಾ ಪೋಷಕರು ಎಂದು ಟ್ರಸ್ಟ್‌ನ ಉಪಾಧ್ಯಕ್ಷರಾದ ಡಾ. ಶಾಂತಾ ರಘೋತ್ತಮ ಅವರು ಗೌರವಿಸಿದರು.


ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಕಾರ್ಯದರ್ಶಿ ಡಾ. ವಿದ್ಯಾ ಕಸ್ಟ್ ಹಾಗೂ ಖಜಾಂಚಿ ಡಾ. ವಿದ್ಯಾಶ್ರೀ ಕುಲ್ಕರ್ಣಿ ಉಪಸ್ಥಿತರಿದ್ದರು.


ಬೆಂಗಳೂರುನಲ್ಲಿ ನಡೆದ ಈ ಸಮಾರಂಭದಲ್ಲಿ ಹಿರಿಯ ಮಹಿಳಾ ಹರಿದಾಸರಾದ ಸುರಭೀಶ ವಿಠಲಾಂಕಿತರಾದ ಶ್ರೀಮತಿ ರಮಾಬಾಯಿ ಅವರಿಗೆ ಮೈತ್ರೇಯಿ ಕನ್ನಡ ಮಹಿಳಾ ಹರಿದಾಸ ಟ್ರಸ್ಟ್ ವತಿಯಿಂದ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.


ವಯೋವೃದ್ಧರಾಗಿರುವ ಶ್ರೀಮತಿ ರಮಾಬಾಯಿ ಅವರ ಪರವಾಗಿ, ಅವರ ಸಹೋದರರು ಡಾ. ಶಾಂತಾ ರಘೋತ್ತಮ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top