ಸಿರಿಜಾನಕಿಪತಿ ವಿಠಲದಾಸರ ಆರಾಧನೆ

Upayuktha
0


ಬೆಂಗಳೂರು: ಶ್ರೀ ರಾಘವೇಂದ್ರ ಸ್ವಾಮಿಗಳ ಪಟ್ಟಾಭಿಷೇಕ‌ ಸಪ್ತಾಹ ಸಮಾರಂಭದ ಪರ್ವಕಾಲದಲ್ಲಿ, ಭುವನಗಿರಿ ಆಶ್ರಮದಲ್ಲಿ ಜ್ಞಾನನಿಧಿಗಳಾದ  ಶ್ರೀಸುವಿದ್ಯೇಂದ್ರತೀರ್ಥರ ಸಮ್ಮುಖದಲ್ಲಿ ಸೋಮವಾರ (ಫೆ.23) ಬೆಳಿಗ್ಗೆ ಮೈತ್ರೇಯಿ ಕನ್ನಡ ಮಹಿಳಾ ಹರಿದಾಸ ಟ್ರಸ್ಟ್‌ ವತಿಯಿಂದ ಗುರು ಗೋವಿಂದ ವಿಠಲದಾಸರ ಶಿಷ್ಯರಾದ ಸಿರಿಜಾನಕಿಪತಿ ವಿಠಲದಾಸರ ಆರಾಧನೆ ಕಾರ್ಯಕ್ರಮ ನೆರವೇರಿಸಲಾಯಿತು.


ಈ ಕಾರ್ಯಕ್ರಮದಲ್ಲಿ ಜ್ಞಾನವೃದ್ಧರೂ, ವಯೋವೃದ್ಧರೂ ಆದ ಹಿರಿಯ ಚೇತನ‌ ಮಹಿಳಾ ಹರಿದಾಸರೆನಿಸಿದ, ಸುಮಾರು 2000ಕ್ಕೂ ಹೆಚ್ಚು ಕೀರ್ತನೆಗಳನ್ನು ಬರೆದ ಸುರಭೀಶ ವಿಠಲ ದಾಸರಿಗೆ ಗೌರವವನ್ನು ಸಮರ್ಪಿಸಲಾಯಿತು.


ವಯೋಮಾನದ ಕಾರಣದಿಂದಾಗಿ ಸುರಭೀಶ ವಿಠಲ ಅವರ ಅನುಪಸ್ಥಿತಿಯಲ್ಲಿ ಅವರ ಸಹೋದರರಾದ ಪ್ರಹ್ಲಾದ ಅವರು ಸನ್ಮಾನ ಸ್ವೀಕರಿಸಿದರು. ಸುರಭೀಶವಿಠಲರಿಗೆ ಅಭಿನಂದನಾ ಕಾರ್ಯಕ್ರಮ ಮಾಡಿ ಗೌರವಿಸಲಾಯಿತು. ಸಿರಿ ಜಾನಕಿ ಪತಿವಿಠಲದಾಸರು ಬರೆದಂತಹ ರಚನೆಯ ಕೃತಿಗಳನ್ನು ಸುರಭೀಶವಿಠಲರ ಸಹೋದರರಾದ ಪ್ರಹ್ಲಾದ ರವರು ಪ್ರಸ್ತಿತಪಡಿಸಿದರು. ಅವರ ಕುಟುಂಬದವರು, ಬಂಧು ಬಾಂಧವರು, ಆಧ್ಯಾತ್ಮ ಬಂಧುಗಳೆಲ್ಲ ಸೇರಿ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಶ್ರೀ ಸುವಿದ್ಯೇಂದ್ರತೀರ್ಥರ ಉಪಸ್ಥಿತಿ ಯಲ್ಲಿ ಸಿರಿ ಜಾನಕಿ ಪತಿ ವಿಠಲದಾಸರ' ದ್ವಾದಶ ಸ್ತೋತ್ರ ತಾತ್ಪರ್ಯ' ಪುಸ್ತಕ ಲೋಕಾರ್ಪಣೆಯಾಯಿತು.


ಭಾರ್ಗವಿ ಅವರು ತಮ್ಮ ತಂದೆಯಾದ ಸಿರಿ ಜಾನಕಿ ಪತಿ ವಿಠಲ ದಾಸರ ಆರಾಧನೆ ಪ್ರತಿ ವರ್ಷ ನಮ್ಮ ಮೈತ್ರೇಯಿ ಕನ್ನಡ ಮಹಿಳಾ ಹರಿದಾಸ ಟ್ರಸ್ಟನ ವತಿಯಿಂದ ಪ್ರತಿ ವರ್ಷವೂ ನಡೆಯಬೇಕೆಂಬ ಅಪೇಕ್ಷೆಯಿಂದಾಗಿ ನಮ್ಮ ಸಂಸ್ಥೆಗೆ 2 ಲಕ್ಷ ರೂಗಳ ದತ್ತಿ ನಿಧಿಯನ್ನು ದೇಣಿಗೆ ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಅವರ ಕುಟುಂಬದವರು ಹಾಗೂ ಆಧ್ಯಾತ್ಮ ಬಂದು ವರ್ಗದವರೆಲ್ಲ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದಂತಹ ಶ್ರೀಮತಿ ಡಾ. ಶಾಂತಾ ರಘೂತ್ತಮಾಚಾರ್ಯ ಅವರು ಆಧ್ಯಾತ್ಮ‌ಸಾಧಕರಾಧ ಭಾರ್ಗವಿ ಅವರ ಸಾಧನೆಯನ್ನು ಶ್ಲಾಘಿಸಿ, ಅವರು ನೀಡಿದ ದತ್ತಿನಿಧಿಯಿಂದಾಗಿ ಸಂಸ್ಥೆಗೆ ಮತ್ತಷ್ಟೂ ಜವಾಬ್ದಾರಿ ಹೆಚ್ಚಿರುವುದಷ್ಟೇ ಅಲ್ಲ ಒಳ್ಳೆಯ ಸೇವೆ ಮಾಡುವ ಅವಕಾಶ ಕಲ್ಪಿಸಿಕೊಟ್ಟು, ಸಂಸ್ಥೆಗೆ ಪ್ರೋತ್ಸಾಹ ಕೊಟ್ಟಿರುವುದಕ್ಕೆ ಸಂಸ್ಥೆಯ ಪರವಾಗಿ ಅವರನ್ನು ಅಭಿನಂದಿಸಿದರು.


ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದಂತಹ ಶ್ರೀಮತಿ ಡಾ. ವಿದ್ಯಾ ಕಸಬೆ ಉಪಸ್ಥಿತರಿದ್ದರು. ಖಜಾಂಚಿಗಳಾದ ವಿದ್ಯಾಶ್ರೀ ಕುಲಕರ್ಣಿ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು. ಉಪಾಧ್ಯಕ್ಷರಾದ ಶಾಂತ ರಘೂತ್ತಮಾಚಾರ್ಯ ಅವರ ಉಪಸ್ಥಿತಿಯಲ್ಲಿ ಹರಿದಾಸ ಬಂಧುಗಳಿಂದ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು. ಶ್ರೀಸುವಿದ್ಯೇಂದ್ರತೀರ್ಥರು ಎಲ್ಲರಿಗೂ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top