ಹೊನ್ನಾವರದಲ್ಲಿ ಉಮೇಶ ಮುಂಡಳ್ಳಿ ಅವರಿಗೆ ಸನ್ಮಾನ

Upayuktha
0

ಹೊನ್ನಾವರ: ತಾಲೂಕಿನ ಸ.ಹಿ.ಪ್ರಾ. ಶಾಲೆ ಹೊನ್ನಾವರ ನಂ.2 ಶಾಲೆಯಲ್ಲಿ ಇಂದು ರಾಜ್ಯ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಾಯಕ ಉಮೇಶ ಮುಂಡಳ್ಳಿ  ಅವರನ್ನು ಸನ್ಮಾನಿಸಲಾಯಿತು.


ಮೂರು ದಿನಗಳ ಕಾಲ ಶಾಲೆಯಲ್ಲಿ ಸಮಗ್ರ ಶಿಕ್ಷಣ ಸಾಮಾಜಿಕ ಪರಿಶೋಧನೆ ನಡೆಯುತ್ತಿದ್ದು ಪರಿಶೋಧನೆ ಯ ಕೊನೆಯ ದಿನವಾದ ಮಂಗಳವಾರ ಪರಿಶೋಧನಾ ವಿಭಾಗದ ಕಾರ್ಯಕ್ರಮ ವ್ಯವಸ್ಥಾಪಕರು ಸಾಹಿತಿಗಳು ಗಾಯಕರಾದ ಉಮೇಶ ಮುಂಡಳ್ಳಿ ಅವರನ್ನು ಶಾಲೆಯ ಪಾಲಕರು ಹಾಗೂ ಶಿಕ್ಷಕ ವೃಂದದವರು ಸೇರಿ ಸನ್ಮಾನಿಸಿ ಗೌರವಿಸಿದರು.


ಪರಿಶೋಧನೆ ಅವದಿಯಲ್ಲಿ ಮುಂಡಳ್ಳಿ ಅವರು ಪಠ್ಯ ಪುಸ್ತಕದಲ್ಲಿ ಇರುವ ಅನೇಕ ಪದ್ಯಗಳಿಗೆ ಸ್ವರ ಸಂಯೋಜಿಸಿ ಹಾಡುವ ಮೂಲಕ ಮಕ್ಕಳಿಗೆ ಉತ್ತೇಜನ ನೀಡಿದರು. ಈ ಶಾಲೆಯ  ಶಿಕ್ಷಕರು ಸಾಹಿತಿಗಳು ಹಾಗೂ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಪಿ.ಆರ್.ನಾಯ್ಕ ಅವರು ಮುಂಡಳ್ಳಿ ಅವರ ಬಗ್ಗೆ ಅಭಿಮಾನದ ನುಡಿಗಳನ್ನು ಆಡುವ ಮೂಲಕ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಎಲ್ಲಾ ಶಿಕ್ಷಕರು ವಿದ್ಯಾರ್ಥಿಗಳು ಹಾಜರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top