ಮಂಗಳೂರು: ನಮ್ಮ ಸನಾತನ ಧರ್ಮದ ಭದ್ರ ತಳಹದಿಯೇ ಸಂಸ್ಕೃತಿ; ಅದನ್ನು ಲೋಕಕ್ಕೆ ಪರಿಚಯಿಸುವ ಶ್ರೇಷ್ಠ ಭಾಷೆಯೇ ಸಂಸ್ಕೃತ. ದೇವ–ಸಂತ–ಮಹಂತರ ಪುರಾತನ ಭಾಷೆಯಾದ ಸಂಸ್ಕೃತವು ಆಧುನಿಕ ಕಂಪ್ಯೂಟರ್ ಯುಗದಲ್ಲಿಯೂ ಸಹ ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಳ್ಳದೆ, ಯಂತ್ರ ಭಾಷೆಗಳಿಗೂ ಸೂಕ್ತವಾಗಿ ಹೊಂದಿಕೊಳ್ಳುತ್ತಿರುವುದು ಅದರ ವೈಶಿಷ್ಟ್ಯವಾಗಿದೆ ಎಂದು ವೇದಮೂರ್ತಿ ಕೆ. ಸುಬ್ರಹ್ಮಣ್ಯ ತಂತ್ರಿ ಹೇಳಿದರು.
ಅವರು ಕೋಡಿಕಲ್ ವಿಪ್ರ ವೇದಿಕೆಯ ದಶಮಾನೋತ್ಸವ ಸರಣಿಯ ನವಮ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾದ ವಿಷ್ಣು ಸಹಸ್ರನಾಮ ಪಠಣ ಸ್ಪರ್ಧೆಯಲ್ಲಿ ಸಂದೇಶ ನೀಡಿದರು. ಸರ್ವಮಾನ್ಯ ಭಾಷೆಯಲ್ಲಿ ರಚಿತವಾದ ವಿಷ್ಣು ಸಹಸ್ರನಾಮ ಪಠಣ ಇಂದು ಎಲ್ಲೆಡೆಯೂ ವ್ಯಾಪಕವಾಗಿ ನಡೆಯುತ್ತಿದ್ದು, ಎಲ್ಲಾ ಧಾರ್ಮಿಕ ಕಾರ್ಯಗಳಲ್ಲಿ ಹಾಗೂ ಮನೆಮನೆಗಳಲ್ಲಿಯೂ ಪಠಣ ನಡೆಯುತ್ತಿರುವುದು ಸಂತಸದ ವಿಚಾರ. ಅದರ ಅಗತ್ಯತೆಯನ್ನು ಅರಿತು ಜನರು ನಿತ್ಯವೂ ಅಭ್ಯಾಸ ಮಾಡುತ್ತಿರುವುದು ಹರ್ಷಕರ ಸಂಗತಿ ಎಂದು ಹೇಳಿದರು. “ಲೋಕಕ್ಕೆ ವಿಷ್ಣುವಿನ ಅನುಗ್ರಹ ಪ್ರಾಪ್ತಿಯಾಗಲಿ” ಎಂದು ಅವರು ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷರೂ ಹಿರಿಯ ನ್ಯಾಯವಾದಿಗಳೂ ಆದ ಜಯರಾಮ ಪದಕಣ್ಣಾಯರು ಹಾಗೂ ವಿದ್ಯಾ ಗಣೇಶ್ ತೀರ್ಪುಗಾರರಾಗಿ ಸಹಕರಿಸಿದರು. ಸ್ಪರ್ಧೆಯಲ್ಲಿ ಮೇಘನಾ ಮಡಿ, ಸುರೇಶ್ ಉಡುಪ ಹಾಗೂ ಉಷಾ ಭಟ್ ಅವರು ಪ್ರಥಮ ಬಹುಮಾನ ಪಡೆದರೆ, ಪ್ರಭಾವತಿ ಮಡಿ ಮತ್ತು ವಾಣಿ ಭಟ್ ದ್ವಿತೀಯ ಬಹುಮಾನ ಗಳಿಸಿದರು. ಉದಯ ಕುಮಾರ್ ಮತ್ತು ರಾಮಚಂದ್ರ ಭಟ್ ಅವರು ಸಮಾಧಾನಕರ ಬಹುಮಾನಗಳಿಗೆ ಪಾತ್ರರಾದರು.
ಕಾರ್ಯದರ್ಶಿ ದುರ್ಗಾದಾಸ್ ಕಟೀಲ್ ಹಾಗೂ ಕೋಶಾಧಿಕಾರಿ ಕಿಶೋರ ಕೃಷ್ಣ ಕಾರ್ಯಕ್ರಮವನ್ನು ನಿರ್ವಹಿಸಿದರು. ಸದಸ್ಯ ಜಗದೀಶ ಅಧಿಕಾರಿಗಳು ಧನ್ಯವಾದ ಅರ್ಪಿಸಿದರು. ಕಾರ್ಯಕ್ರಮದ ಅಂತ್ಯದಲ್ಲಿ ವಿಷ್ಣು ಸಹಸ್ರನಾಮದ ಕುರಿತು ಉಪನ್ಯಾಸ ಹಾಗೂ ಸಾಮೂಹಿಕ ಪಠಣ ಜರಗಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


