ವೀರರಾಣಿ ಅಬ್ಬಕ್ಕನ ಸ್ಮರಣೆಯೇ ನಮಗೆ ಪ್ರೇರಣೆ: ಶೋಭಾ ಕರಂದ್ಲಾಜೆ

Upayuktha
0

ವಿವೇಕಾನಂದ ಕಾಲೇಜಿನಲ್ಲಿ ವೀರರಾಣಿ ಅಬ್ಬಕ್ಕ- ರಾಷ್ಟ್ರೀಯ ವಿಚಾರ ಸಂಕಿರಣ



ಪುತ್ತೂರು: ನಾವು ಅಗತ್ಯವಾಗಿ ತಿಳಿಯಬೇಕಿದ್ದ ಹಾಗೂ ಯುವಜನಾಂಗ ಅರಿಯಬೇಕಾದ ಚರಿತ್ರೆಯನ್ನು ಮರೆಯಾಗಿಸಿದ್ದು ವಿಪರ್ಯಾಸ. ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮೊದಲೇ ಪರಕೀಯರ ವಿರುದ್ಧ ಕೆಚ್ಚೆದೆಯ ಹೋರಾಟ ಪ್ರಾರಂಭಿಸಿದವಳು ಅಬ್ಬಕ್ಕ. ತಾನು ಒಬ್ಬನೇ ನಿಂತು ಬ್ರಿಟೀಷರಿಗೆ ಸವಾಲೆಸೆದ ಕಿತ್ತೂರು ಚೆನ್ನಮ್ಮನಂಥವರ ಉದಾಹರಣೆಯನ್ನು ನಾವು ಗಮನಿಸಬಹುದು. ನಮ್ಮ ಬದುಕಿಗೆ ಪ್ರೇರಣೆಯಾಗಬಲ್ಲ ನಮ್ಮ ಚರಿತ್ರೆಯನ್ನು ನಾವು ಅಗತ್ಯವಾಗಿ ತಿಳಿಯಬೇಕು ಎಂದುಕೇಂದ್ರ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ಯಮಗಳ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.


ಇವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು ಇಲ್ಲಿನ ಇತಿಹಾಸ ವಿಭಾಗ ಹಾಗೂ ಐಕ್ಯೂಎಸಿ,  ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ್ ಮಹಾಸಂಘ ಹಾಗೂ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ ಸಹಯೋಗದೊಂದಿಗೆ ನಡೆದ ಅಬ್ಬಕ್ಕ@ 500 ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.


ಕಾರ್ಯಕ್ರಮದಲ್ಲಿಅಧ್ಯಕ್ಷೀಯ ನುಡಿಗಳನ್ನಾಡಿದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಭಾರತದಲ್ಲಿ ಮಹಿಳೆಯರಿಗೆ ದೇವತೆಯ ಸ್ಥಾನ ನೀಡಿ ಮಹತ್ವವನ್ನು ಕಲ್ಪಿಸಿದ್ದೇವೆ. ದೇಶಕ್ಕಾಗಿ ಮಹಿಳೆಯರು ಹೋರಾಡಿದ ನಿದರ್ಶನ ನಮ್ಮ ದೇಶದಲ್ಲಿದೆ. ನಮ್ಮ ದೇಶದಲ್ಲಿ ನೆಲೆ ಕಂಡುಕೊಂಡು ಸಕಲ ಸೌಲಭ್ಯಗಳನ್ನು ಪಡೆದಾಗ ದೇಶಕ್ಕಾಗಿ ಏನಾದರೂ ಸಲ್ಲಿಸುವ ಮನಮಾಡಬೇಕು ಎಂದರು.


ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದ ದೆಹಲಿಯ ಯು.ಜಿ.ಸಿಯ ಸಹ ಕಾರ್ಯದರ್ಶಿ ಅಸೀಮಾ ಮಂಗಳ ಅಬ್ಬಕ್ಕ ಶತ್ರುಗಳನ್ನು ಎದುರಿಸಿದ್ದರಲ್ಲಿ ನಮ್ಮವರ ಮೇಲಿನ ಕಾಳಜಿಗಾಗಿ ಎಂದು ತಿಳಿಯುತ್ತದೆ. ಐತಿಹಾಸಿಕ ಕ್ಷಣಗಳನ್ನು ನೆನಪಿಸುವ ಅಬ್ಬಕ್ಕಳ ಕುರಿತಾದ ವಿಚಾರ ಗೋಷ್ಠಿಯಲ್ಲಿ ಭಾಗವಹಿಸುವುದರ ಬಗ್ಗೆ ಹೆಮ್ಮೆಇದೆ ಇಂತಹಾ ಕಾರ್ಯಕ್ರಮಗಳಿಂದ ನಾವು ನಡೆದ ಕ್ರಾಂತಿಗಳ ಬಗೆಗೂ ತಿಳಿಯುತ್ತೇವೆ. ಶಿಕ್ಷಣ ಸಂಸ್ಥೆಗಳು ದೇಶದ  ಹೆಮ್ಮೆಯ ಸಂಸ್ಕೃತಿಯನ್ನು ತಿಳಿಯಪಡಿಸುವ ಕೇಂದ್ರಗಳಾಗಬೇಕು ಎಂದು ನುಡಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮೂಡುಬಿದಿರೆಯ ಚೌಟರ ಅರಮನೆಯ ಕುಲದೀಪ್ ಎಂ ಚೌಟ ಪ್ರಜಾಪ್ರಭುತ್ವಇರುವ ಈ ಕಾಲದಲ್ಲೂ ರಾಜ ಮಹಾರಾಜರ ಹೆಸರು ಅಜರಾಮರವಾಗಿರಲು ಕಾರಣ ಅವರ ಸಾಧನೆ. ಅಬ್ಬಕ್ಕ ತುಳುನಾಡಿನ ರಾಣಿ ಎನ್ನುವುದು ಹೆಮ್ಮೆಯ ಸಂಗತಿ. ಅಬ್ಬಕ್ಕಳ ಹೆಸರು ಶಾಶ್ವತವಾಗಿ ಉಳಿಯುವಂತೆ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದರು.


ದೆಹಲಿಯ ಅಖಿಲ ಭಾರತೀಯ ಶೈಕ್ಷಿಕ್ ಮಹಾಸಂಘದ ರಾಷ್ಟ್ರೀಯ ಸಹಸಂಘಟನಾ ಕಾರ್ಯದರ್ಶಿ ಗುಂಟ ಲಕ್ಷ್ಮಣ್ ಮಾತನಾಡಿ ದೇಶದಲ್ಲಿ ಮಹಿಳಾ ಸಾಧಕರು ದೊಡ್ಡ ಸಂಖ್ಯೆಯಲ್ಲಿಇದ್ದಾರೆ. ನಮ್ಮದೇಶ ಸರ್ವತೋಮುಖ ಅಭಿವೃದ್ಧಿ ನಮ್ಮ ಆದ್ಯತೆಯಾಗಿರಬೇಕು. ಇತಿಹಾಸದಿಂದ ಕಲಿಯುವ ಪಾಠಗಳು ನಮ್ಮ ಭವಿಷ್ಯವನ್ನು ರೂಪಿಸಬಲ್ಲದು ಎಂದು ನುಡಿದರು. ಕಾಲೇಜಿನ ಸಂಚಾಲಕ ಮುರಳಿ ಕೃಷ್ಣಕೆ.ಎನ್‍ ಕಾರ್ಯಕ್ರಮಕ್ಕೆ ಶುಭಹಾರೈಸಿದರು.



ಈ ಸಂದರ್ಭದಲ್ಲಿ ಮಹಿಳಾ ಸಬಲೀಕರಣ- ಸುರೇಖಾ ಶೆಟ್ಟಿ, ಜಾನಪದ- ಸುಂದರಿ ನಲಿಕೆ, ಸಮಾಜ ಸೇವೆ ಹಾಗೂ ಸಂಘಟನೆ-ಡಾ.ಆಶಾಜ್ಯೋತಿರೈ, ರುದ್ರಭೂಮಿ ಸೇವೆ-ವನಜಾ ಪೂಜಾರ್ತಿ, ಪ್ರಕೃತಿಚಿಕಿತ್ಸೆ-ಡಾ.ಗ್ರೀಷ್ಮಾ ವಿವೇಕ್ ಆಳ್ವ, ಬಾಲ ಸಂಸ್ಕಾರ-ಸಂಘಟನೆ- ಗೀತಾ ಲಕ್ಮೀಶ್, ಭಾರತೀಯ ಕಲೆಗಳು-ವಿದುಷಿ ಸುಮಂಗಲ ರತ್ನಾಕರ್‍ರಾವ್, ಯಕ್ಷಗಾನ- ಪೂರ್ಣಿಮಾಯತೀಶ್‍ರೈ, ನಾಟಿ ವೈದ್ಯೆ- ಕೆ.ಬಿ ಅಮ್ಮಣ್ಣಿ, ಉದ್ಯಮ ಶೀಲತೆ- ಮಹಾಲಕ್ಷ್ಮಿ, ಅಂಬ್ಯುಲೆನ್ಸ್ ಚಾಲನೆ- ಸಿ.ಎಸ್ ರಾಧಿಕಾ, ತುಳು ಸಾಹಿತ್ಯ- ಯಶೋಧಾಕೇಶವ್, ಪರಿಸರ- ಸಂಧ್ಯಾ, ಯಕ್ಷಗಾನ ಪ್ರಸಂಗ ಸಾಹಿತ್ಯ-ಶುಭಾಶಯಜೈನ್, ಉದಯೋನ್ಮುಖಕಲಾವಿದೆ-ಕುಮಾರಿ ಸುಶ್ರಾವ್ಯಯು, ಸಮುದಾಯ ಅಭಿವೃದ್ಧಿ-ಭವ್ಯಾರಾಣಿ, ಆಯುರ್ವೇದ-ರೂಪಲೇಖಾ, ಭರತನಾಟ್ಯ-ವಿದುಷಿ ಶಾಲಿನಿ ಆತ್ಮ ಭೂಷಣ್, ತಾಳಮದ್ದಳೆ- ಶುಭಾಅಡಿಗ, ಪತ್ರಿಕೋದ್ಯಮ-ಕುಮಾರಿ ಶಹನಾ ಮುಮ್ತಾಜ್ ನೆಲ್ಯಡ್ಕ, ಯೋಗ-ಕುಮಾರಿಕೆ.ಎನ್ ದೀಪಿಕಾ ಇವರಿಗೆ ವೀರರಾಣಿ ಅಬ್ಬಕ್ಕಗೌರವ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.


ಕಾರ್ಯಕ್ರಮದಲ್ಲಿ ಕೆಆರ್‍ಎಮ್‍ಎಸ್‍ಎಸ್‍ ಇದರ ಅಧ್ಯಕ್ಷ ಪ್ರೊ. ಗುರುನಾಥ್ ಬಡಿಗೇರ, ಸಂಚಾಲಕಿ ಡಾ. ಆಶಾಲತಾ, ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ ಭಟ್, ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಪ್ರಮೋದ್‍ಎಂ.ಜಿ ಉಪಸ್ಥಿತರಿದ್ದರು.


ಕಾರ್ಯಕ್ರಮವನ್ನು ಕೆಆರ್‍ಎಂಎಸ್‍ಎಸ್‍ ಇದರ ಜಂಟಿ ಕಾರ್ಯದರ್ಶಿ ಡಾ. ಮಾಧವಎಂ.ಕೆ ಪ್ರಸ್ತಾವನೆಗೈದು ಸ್ವಾಗತಿಸಿದರು. ಕೆಆರ್‍ಎಂಎಸ್‍ಎಸ್ ಮಂಗಳೂರು ಘಟಕದ ಅಧ್ಯಕ್ಷೆ ವಾಣಿ.ಯು ವಂದಿಸಿದರು.ಮಾಧ್ಯಮ ಪ್ರಮುಖ್ ಮಮತಾ ಶೆಟ್ಟಿ ನಿರ್ವಹಿಸಿದರು.


ವಿಚಾರ ಗೋಷ್ಟಿ

ಈ ಸಂದರ್ಭದಲ್ಲಿ ಸಮಕಾಲೀನ ಸಂದರ್ಭದಲ್ಲಿ ರಾಣಿ ಅಬ್ಬಕ್ಕಳ ಪ್ರಸ್ತುತತೆ ಇದರ ಕುರಿತು ವಾಗ್ಮಿ ಶ್ರೀಕಾಂತ್ ಶೆಟ್ಟಿ ಕಾರ್ಕಳ ಹಾಗೂ ಭಾರತದ ಇತಿಹಾಸ-ರಾಣಿ ಅಬ್ಬಕ್ಕಳ ಕೊಡುಗೆ ಇದರ ಬಗ್ಗೆ ರಾಣಿಅಬ್ಬಕ್ಕ ತುಳು ಅಧ್ಯಯನಕೇಂದ್ರ  ಸಂಚಯಗಿರಿ ಇದರ ಅಧ್ಯಕ್ಷ ಡಾ.ತುಕರಾಂ ಪೂಜಾರಿಗೋಷ್ಟಿಯನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಕಲಾ ಸಾರಥಿತೋನ್ಸೆ ಪುಷ್ಕಳ ಕುಮಾರ್‍ ಅವರಿಂದ ವೀರರಾಣಿ ಅಬ್ಬಕ್ಕ ಕಥಾಕೀರ್ತನೆ ನಡೆಯಿತು.


ಸಮಾರೋಪ ಸಮಾರಂಭ

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಎ.ಬಿ.ಆರ್.ಎಸ್.ಎಂ ನವದೆಹಲಿ ಲಕ್ಷ್ಮಣಗುಂಟ ಮಾತಾಡಿ, ಇಂತಹ ಕಾರ್ಯಕ್ರಮಗಳಿಂದ ನಾವುಗಳು ಹಲವಾರು ವಿಷಯಗಳನ್ನು ತಿಳಿದುಕೊಳ್ಳಬಹುದು. ಕೇವಲ ಶಿಕ್ಷಣಕ್ಕೆ ಮಾತ್ರ ನಮ್ಮನ್ನು ಸೀಮಿತವಾಗಿರಿಸದೆ ಹೊರಗಿನ ಶೈಕ್ಷಣಿಕೇತರ ಕಾರ್ಯಗಳಲ್ಲಿ ನಾವು ತೊಡಗಿಸಿಕೊಳ್ಳಬೇಕಿದೆ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ (ರಿ )ಪುತ್ತೂರು ಇದರ ಕಾರ್ಯದರ್ಶಿ ಹಾಗೂ ಇಂದಿನ ಕಾರ್ಯಕ್ರಮದಅಧ್ಯಕ್ಷತೆ ವಹಿಸಿದ್ದ ಡಾ. ಕೆ. ಎಂ.ಕೃಷ್ಣ ಭಟ್ ಮಾತನಾಡಿ, ಇತಿಹಾಸದ ಪುಟದಿಂದ ವಿಸ್ಮೃತಿಗೊಂಡ ಅಬ್ಬಕ್ಕನನ್ನು ನೆನಪಿಸಿಕೊಳ್ಳುವಂತಹ ಈ ಕಾರ್ಯಕ್ರಮ ವಿಶೇಷವಾದದ್ದು ಎಂದು ಹೇಳಿದರು.


ಈ ಸಂದರ್ಭದಲ್ಲಿಯೋಗ ಮತ್ತು ಧ್ಯಾನ ಇದರಲ್ಲಿ ಸಾಧನೆಗೈದ ಶಾರ್ಟ್‍ಆಫ್ ಲಿವಿಂಗ್, ಮಂಗಳೂರು ಇಲ್ಲಿನ ಶಿಕ್ಷಕಿ ಕುಮಾರಿ ಕೆ.ಎನ್ ದೀಪಿಕಾ, ಕರ್ನಾಟಕ ಶಿಕ್ಷಕ ಸಂಘದ ಪ್ರತಿನಿಧಿ ಮತ್ತು ಜಂಟಿ ಕಾರ್ಯದರ್ಶಿ ಮಾಧವ.ಕೆ ಅವರನ್ನು ಸನ್ಮಾನಿಸಲಾಯಿತು.


ಶಿವಪೂಜಿ ಕೋಟಿ ಸಂಚಾಲಕ ಎಬಿಆರ್‍ಎಸ್ ಎಂ ಕರ್ನಾಟಕ, ಪ್ರೊ.ರೋಹಿಣಿಕುಮಾರ್ ಹಿಲ್ಲಿ ಪ್ರಧಾನ ಕಾರ್ಯದರ್ಶಿ ಕೆಆರ್‍ಎಂಎಸ್‍ಎಸ್ ಬೆಂಗಳೂರು, ಡಾ.ಸಿ,ವಿ ಮರಿದೇವರ ಮಠ ಸಂಘಟನಾ ಕಾರ್ಯದರ್ಶಿ ಕೆಆರ್‍ಎಂಎಸ್‍ಎಸ್ ಬೆಂಗಳೂರು, ಪ್ರೊ. ಸುರೇಂದ್ರ ಶೆಟ್ಟಿ, ಅಧ್ಯಕ್ಷರು ಕೆ ಆರ್ ಎಮ ಎಸ್‍ಎಸ್‍ ಉಡುಪಿ, ಪ್ರೊ.ವಾಣಿ ಅಧ್ಯಕ್ಷರು ಮಂಗಳೂರು, ಡಾ. ಆಶಾಲತಾ ಕಾರ್ಯಕ್ರಮ ಸಂಯೋಜಕಿ ಉಪಸ್ಥಿತರಿದ್ದರು.

 

ಈ ಸಂದರ್ಭದಲ್ಲಿಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ರೂಪಿಸಿದ 'ವಿಕಸನ' ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.


ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ ರಾಜೇಶ್  ವಂದಿಸಿ, ಮಂಗಳಗಂಗೋತ್ರಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಶಿಕ್ಷಕಿ ಕಾಜಲ್  ನಿರೂಪಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top