ಪುತ್ತೂರು: ಕರ್ನಾಟಕ ರಾಜ್ಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆಯ ವತಿಯಿಂದ ಫೆಬ್ರವರಿ 11 ರಂದು ಪುತ್ತೂರಿನ ಸುದಾನ ವಸತಿಯುತ ಶಾಲೆಯಲ್ಲಿ 2025-26 ನೇ ಸಾಲಿನ ಜಿಲ್ಲಾ ಮಟ್ಟದ ತೃತೀಯ ಚರಣ ಕಬ್ ಮತ್ತು ಸುವರ್ಣ ಗರಿ ಬುಲ್ ಬುಲ್ ಪರೀಕ್ಷಾ ಶಿಬಿರದ ಎರಡನೇ ಹಂತದ ಪರೀಕ್ಷಾ ಶಿಬಿರವು ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮವನ್ನು ಸುದಾನ ವಸತಿಯುತ ಶಾಲೆ ಪ್ರಾಂಶುಪಾಲರಾದ ಶ್ರೀಮತಿ ಶೋಭಾ ನಾಗರಾಜ್ ರವರು ಉದ್ಘಾಟಿಸಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಪ್ರತೀಮ್ ಕುಮಾರ್,ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಭರತ್ ರಾಜ್ ಕೆ,ಕಬ್ ವಿಭಾಗದ ನಾಯಕಿ ಭವ್ಯ ಪಿ.ಎಸ್, ಬುಲ್ ಬುಲ್ ವಿಭಾಗದ ನಾಯಕಿ ಪವಿತ್ರ ಕೆ ರೈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪರೀಕ್ಷಾ ಶಿಬಿರ ಸಹಾಯಕರಾಗಿ ಕಬ್ ವಿಭಾಗದಲ್ಲಿ ರಶ್ಮಿ ಎಚ್ ಕೆ, ಅನುಷಾ ರೈ, ಕವಿತಾ ಬಿ, ಭವಿತಾ, ಬುಲ್ ಬುಲ್ ವಿಭಾಗದ ಸಹಾಯಕರಾಗಿ ಶ್ರೀಮತಿ ನೇಹಾ, ಜೀವಿತಾ ಎಸ್ ರೈ, ಪಲ್ಲವಿ, ಅಶ್ವಿನಿ ಪಿ ಆರ್, ಸುಮನಾ ಬಿ, ಸೌಮ್ಯಶ್ರೀ ಪಿ ಡಿ, ಸಂಧ್ಯಾ ಎ, ನಯನ ಸಹಕರಿಸಿದರು.
ಶಿಬಿರದಲ್ಲಿ 95 ಕಬ್ಸ್,101 ಬುಲ್ ಬುಲ್ಸ್ ಒಟ್ಟು 196 ಶಿಬಿರಾರ್ಥಿಗಳು ಭಾಗವಹಿಸಿದರು.
ಪರೀಕ್ಷಾ ಶಿಬಿರಕ್ಕೆ ಸಂಪೂರ್ಣ ಸಹಕಾರವನ್ನು ಸುದಾನ ವಸತಿಯುತ ಶಾಲೆ ಪುತ್ತೂರಿನ ಲೇಡಿ ಸ್ಕೌಟ್ ಮಾಸ್ಟರ್ ಗೀತಾ ಆಚಾರ್ಯ HWB(S), ಸೈಂಟ್ ಫಿಲೋಮಿನಾ ಪದವಿ ಪೂರ್ವ ಕಾಲೇಜು ಪುತ್ತೂರಿನ ರೋವರ್ ಸ್ಕೌಟ್ ಲೀಡರ್ ಚಂದ್ರಕ್ಷಾ, ಸೀನಿಯರ್ ಸ್ಕೌಟ್ ವಿದ್ಯಾರ್ಥಿ ಚಿಂತನ್ ಸಹಕರಿಸಿದರು.
ಸುದಾನ ವಸತಿಯುತ ಶಾಲೆ ಪುತ್ತೂರಿನ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


