ರಾಷ್ಟ್ರೀಯ ಸೇವಾ ಯೋಜನೆಯು ನನಗೆ ಒಂದು ಕುಟುಂಬವನ್ನು ನೀಡಿದೆ. ಬೀರ್ನೆಹಿತ್ಲು ಶಾಲೆಯಲ್ಲಿ ನಡೆದ ಶಿಬಿರವು ನನಗೆ ಮೊದಲ ಅನುಭವವನ್ನು ನೀಡಿದೆ. ಎಲ್ಲರ ಜೊತೆ ಸೇರಿ ಒಂದೇ ಮನೆಯ ಸದಸ್ಯರ ರೀತಿ ಒಂಬತ್ತು ದಿನಗಳ ಕಾಲ ಕಳೆದೆವು. ಅದರಲ್ಲಿ ಐದು ಗ್ರೂಪ್‌ಗಳಾಗಿ ಮಾಡಿದರೂ ಒಂದೇ ಮನೆಯವರಾಗಿ ಬಾಳಿದೆವು. ಅದರಲ್ಲಿ ಸಿಂಧೂ, ನರ್ಮದಾ, ಶರಾವತಿ, ನೇತ್ರಾವತಿ, ಮತ್ತು ಕಾವೇರಿ ಎಂದು ಗುಂಪು ಮಾಡಿ ದೈನಂದಿನ ಚಟುವಟಿಕೆಗಳನ್ನು ಎಲ್ಲರೂ ಒಂದು ಗೂಡಿ ಮಾಡಿದೆವು. ನನಗೆ ಈ ಸೇವಾ ಯೋಜನೆಯೂ ಸುಂದರವಾದ ಕುಟುಂಬದ ಜೊತೆ ಪ್ರೀತಿ, ಕಾಳಜಿ, ಹಾಗೆಯೇ ಒಂದು ಸ್ಥಳವನ್ನು ಬಿಟ್ಟು ಇನ್ನೊಂದು ಸ್ಥಳದಲ್ಲಿ ಬದುಕುವ ಧೖರ್ಯವನ್ನು ನೀಡಿದೆ. ಎಲ್ಲರ ಜೊತೆ ಸೇರಿ ಮಾಡಿದ ಕೆಲಸ, ಆಡಿದ ಮಾತು, ಕೆಲವು ಕಾಮಿಡಿ ನಾಟಕಗಳು, ನಗು ಮತ್ತು ಅಳು ಈ ಎಲ್ಲಾ ಅನುಭವವನ್ನು ಶಿಬಿರವು ನೀಡಿದೆ.
ಈ ಶಿಬಿರದಲ್ಲಿ ನಮಗೆ ಉಳಿದುಕೊಳ್ಳಲು ವಸತಿ ವ್ಯವಸ್ಥೆಯನ್ನು ಮಾಡಿದ ದೀಕ್ಷಿತ್ ಮನೆಯವರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಎಲ್ಲರನ್ನೂ ಸ್ವಂತ ಮಕ್ಕಳಾಗಿ ಪ್ರೀತಿಯಿಂದ ಕ್ಷೇಮಸಮಾಚಾರವನ್ನು ವಿಚರಿಸುತ್ತಾ ಪ್ರೀತಿಯನ್ನು ನೀಡುತ್ತಿದ್ದರು. ಮನೆಯವರನ್ನು ಹಾಗೆಯೇ ಹಿರಿಯರಾದ ಅಜ್ಜಿಯನ್ನು ಬಿಟ್ಟು ಬರುವುದೆಂದರೆ ಒಂದು ದುಃಖದ ಸಂದರ್ಭವಾಗಿತ್ತು. ಆ ದುಃಖದ ಸಂದರ್ಭವು ಇಂದಿಗೂ ನೆನಪಿಸಲು ಬಹಳ ಕಷ್ಟವಾಗುತ್ತದೆ.
ಈ ಶಿಬಿರದಲ್ಲಿ ಬೆಳಗ್ಗೆ ಏಳುವುದರಿಂದ ಶುರುವಾದ ಚಟುವಟಿಕೆಗಳು ಧ್ವಜರೋಹಣ, ಅತಿಥಿಗಳನ್ನು ಸತ್ಕಾರ ಮಾಡುವುದು, ಕುಣಿತ ಭಜನೆ, ಬೆಳಗ್ಗಿನ ತಿಂಡಿಯ ನಂತರ ಶುಚಿತ್ವ ಶ್ರಮದಾನ ಮಾಡಿ ಎಲ್ಲರೂ ಜೊತೆಗೂಡಿ ಊಟಮಾಡಿದ ಸವಿ ನೆನಪು ಇಂದಿಗೂ ಹಾಗೆಯೇ ಇವೆ. ಒಬ್ಬರನ್ನೊಬ್ಬರು ಬಿಟ್ಟುಕೊಡದೆ ಎಲ್ಲರೂ ಒಂದೇಎನ್ನುವ ಭಾವನೆಯನ್ನು ಈ ಶಿಬಿರವು ತಿಳಿಸಿಕೊಟ್ಟಿದೆ. ನನಗಂತೂ ನನ್ನ ಕಾವೇರಿ ತಂಡವು ಬಹಳ ಸಹಾಯವನ್ನು ಮತ್ತು ಪ್ರೀತಿಯನ್ನು ಕೊಟ್ಟಿದೆ. ಅಣ್ಣ ತಂಗಿಯಾಗಿ, ಅಕ್ಕ ತಮ್ಮನಾಗಿ, ಅಕ್ಕ ತಂಗಿಯಾಗಿ, ಗೆಳೆಯ ಗೆಳತಿಯಾಗಿ, ಎಲ್ಲರೂ ಒಂದುಗೂಡಿ ಚಟುವಟಿಕೆಯಲ್ಲಿ ಪಾಲ್ಗೊಂಡ ನೆನಪು ಅವಿಸ್ಮರಣೀಯವಾದುದು.
ನನಗೆ ಸಿಕ್ಕ ಈ ಒಂದು ಕುಟುಂಬವನ್ನು ಎಂದಿಗೂ ಮರೆಯಲಾರೆ. ಈ ಯೋಜನೆಯೂ ಕೇವಲ ಕೆಲಸವನ್ನು ಕಳಿಸುವುದಲ್ಲದೇ ಸಂಸ್ಕಾರ, ಆಚಾರ-ವಿಚಾರ, ಗೌರವವನ್ನು ಕಲಿಸಿಕೊಡುತ್ತದೆ. ಈ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಒಂಬತ್ತು ದಿನಗಳ ಕಾಲ ನಮಗೆ ರುಚಿಯಾದ ಅಡುಗೆಮಾಡಿದ ಕೇಶವಭಟ್ರು ಇವರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರ ಜೊತ ಕಳೆದ ಕ್ಷಣಗಳು ಬಹಳ ನೆನಪನ್ನು ನೀಡಿವೆ.
ಅಪ್ಪ, ಅಮ್ಮನ ಪ್ರೀತಿಯನ್ನು ಹಂಚಿರುವ ನನ್ನ ಸೇವಾ ಯೋಜನೆಯ ಅಧಿಕಾರಿ ಅರುಣ್ ಪ್ರಕಾಶ್ ಸರ್, ಧನಂಜಯ್ ಸರ್, ವಿದ್ಯಾ ಮೇಡಂ, ವಿನುತಾ ಮೇಡಂ ಹಾಗೂ ಭವ್ಯ ಮೇಡಂ ನಮ್ಮನ್ನು ಬಹಳ ಪ್ರೀತಿಯಿಂದ ಒಂಬತ್ತು ದಿನಗಳ ಕಾಲ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡಿದ್ದಾರೆ. ಪರಿಚಿತರನ್ನು ಪರಿಚಯಿಸಿದ ನನ್ನ ಈ ಕುಟುಂಬವನ್ನು ಎಂದಿಗೂ ಮರೆಯಲಾರೆ.
ಈ ಕುಟುಂಬದ ಜೊತೆ ಖುಷಿಯಿಂದ ಕಾಲ ಕಳೆದ ಸವಿನೆನಪು. ಮಧ್ಯರಾತ್ರಿ ಒಟ್ಟಿಗೆ ಕೂತು ಸಿಹಿತಿಂಡಿ ತಿಂದ ನೆನಪು. ಒಟ್ಟಿಗೆ ಮಲಗಿದ ನೆನಪು ಬಹಳ ಖುಷಿಯನ್ನು ನೀಡಿದೆ.
ರಾಷ್ಟ್ರೀಯ ಸೇವಾ ಯೋಜನೆಯ ಕೊನೆಯ ದಿನದಂದು ಬರುವಾಗ ಆ ಶಾಲೆಯ ವಾತಾವರಣವನ್ನು ಮಕ್ಕಳನ್ನು ಮತ್ತು ಅಲ್ಲಿಯ ಸವಿನೆನಪುಗಳನ್ನು ಬಿಟ್ಟು ಬರಲು ಬಳ ಕಷ್ಟ. ಹಾಗೆಯೇ ಒಂದು ಸವಾಲನ್ನು ಎದುರಿಸುತ್ತಿದ್ದೇವೆ ಎಂದು ಆ ಸಮಯದಲ್ಲಿಅನ್ನಿಸಿತು. ಎಲ್ಲರ ಜೊತೆ ತೆಗೆದ ಫೋಟೋ ಹಾಗೆಯೇ ಕೂಡಿ ಬಾಳಿದ ಒಂಬತ್ತು ದಿನಗಳ ನೆನಪು ಮರೆಯಲು ಸಾಧ್ಯವಿಲ್ಲ.
ಈ ಶಿಬಿರದ ಮೂಲಕ ಶಿಸ್ತು ಮತ್ತು ಗೌರವವನ್ನು ಕಲಿಸಿತು. ಈ ಯೋಜನೆಯ ಮೂಲಕ ನಾನು ಕೂಡಿ ಬಾಳಿದರೆ ಸ್ವರ್ಗ ಸುಖ ಎನ್ನುವ ನೀತಿಯನ್ನು ಕಲಿತೆನು.
- ಶಿವಾನಿ ಕೊಡಂಗಾಯಿ
ಪ್ರಥಮ ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಕಾಲೇಜು ಪುತ್ತೂರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



