ಕಾಸರಗೋಡು-ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ
ಕಾಸರಗೋಡು: ಕಾಸರಗೋಡು ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನವು ಭಾನುವಾರ 22 ಫೆಬ್ರವರಿ 2026 ರಂದು ಕಾಸರಗೋಡು ನುಳ್ಳಿಪ್ಪಾಡಿಯ ಕನ್ನಡ ಭವನದಲ್ಲಿ ವಿಜೃಂಭಣೆಯಿಂದ ನಡೆಯಿತು.
ಇದೇ ವೇಳೆ ಕಾಸರಗೋಡಿನ ಮುಳಿಯಾರು ಗ್ರಾಮದ ಪಾತನಡ್ಕ ನಿವಾಸಿ ಸುಶೀಲಾ ಎಸ್ ಎನ್ ಭಟ್ ಅವರಿಗೆ ಕನ್ನಡ ಪಯಸ್ವಿನಿ ಅಚೀವ್ಮೆಂಟ್ ಎವಾರ್ಡ್ ನೀಡಲಾಯಿತು.
ಇವರು ಸಾಹಿತ್ಯ ಕ್ಷೇತ್ರದಲ್ಲಿ ಸುಮಾರು 50 ವರ್ಷಗಳ ಸಾಧನೆ ಮಾಡಿದ್ದು ಹೂ ಹಣ್ಣು ಕೃಷಿಗಳಲ್ಲೂ ಸದಾ ನಿರತರು. ಮಾವು ಹಲಸು ಬಾಳೆಕಾಯಿ ಕುರಿತು ಪುಸ್ತಕ, ಕಾರ್ಯಾಗಾರ, ಆಕಾಶವಾಣಿ ಕಾರ್ಯಕ್ರಮ ನಡೆಸಿದ್ದಾರೆ. ಬಾಳೆಕಾಯಿಯ ಶ್ಯಾವಿಗೆ ಚಾಲ್ತಿಗೆ ಪ್ರಥಮ ಬಾರಿಗೆ 2000 ಇಸವಿ ಕಾಲದಲ್ಲಿಯೇ ತಂದವರು.
ಮಂಗಳೂರಿನ ವೈದ್ಯ ಹಾಗೂ ಮೂಲವ್ಯಾಧಿ ಚರ್ಮರೋಗ ತಜ್ಞ ಬರಹಗಾರ ಡಾ ಸುರೇಶ ನೆಗಳಗುಳಿಯವರು ಇವರ ಸೋದರರಾಗಿರುತ್ತಾರೆ
ಪ್ರಾಂಗಣದಲ್ಲಿ ಸುಸಜ್ಜಿತಗೊಂಡ 'ಚುಟುಕು ಯೋಗಾಚಾರ್ಯ ಡಾ ಎಂ ಜಿ ಆರ್ ಅರಸ್ ವೇದಿಕೆ'ಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಗಡಿನಾಡು ಪ್ರದೇಶದ ಶಕ್ತಿ ಕೇಂದ್ರ ವಾದ ಶ್ರೀಮದೆಡನೀರು ಮಠಾಧೀಶರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರು ಮತ್ತು ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಶ್ರೀ ಶ್ರೀ ರಮೇಶ ಮಹಾಸ್ವಾಮಿಗಳು ಉದ್ಘಾಟನೆ ಮಾಡಿದರು.
ಕಾಸರಗೋಡು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಜಯಪ್ರಕಾಶ್ ತೊಟ್ಟೆತ್ತೋಡಿಯವರು ಮೆರವಣಿಗೆಗೆ ಚಾಲನೆ ನೀಡಿದರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ನಾಡೋಜ ಡಾ ಕೃಷ್ಣ ಪ್ರಸಾದ್ ಕೂಡ್ಲು, ಅತಿಥಿಗಳ ಸ್ವಾಗತವನ್ನು ಡಾ ವಾಮನ ರಾವ್ ಬೇಕಲ್, ಪ್ರಸ್ತಾವನೆಯನ್ನು ಪ್ರದೀಪ್ ಬೇಕಲ್, ದೀಪ ಪ್ರಜ್ವಲನೆಯನ್ನು ಡಾ ಕೆ ಎನ್ ವೆಂಕಟರಮಣ ಹೊಳ್ಳ ನಡೆಸಿಕೊಟ್ಟರು.
ಡಾ ಗೋವಿಂದ ಭಟ್ ಹಾಗೂ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ ಉಪಸ್ಥಿತರಿದ್ದರು ಮತ್ತು ಕನ್ನಡ ಧ್ವಜಾರೋಹಣವನ್ನು ವಿಜಿ ಕುಮಾರ್ ಅವರು ಮತ್ತು ಕನ್ನಡ ಭುವನೇಶ್ವರಿ ಭಾವಚಿತ್ರಕ್ಕೆ ಹಾರಾರ್ಪಣೆಯನ್ನು ಸುರೇಶ್ ನೆಗಳಗುಳಿ ಅವರು ನಡೆಸಿಕೊಟ್ಟರು.
ಅನಂತರ ವಿರಾಜ್ ಅಡೂರ್ ಅಧ್ಯಕ್ಷತೆಯ ಚುಟುಕು ಕವಿಗೋಷ್ಠಿಯು ರೇಖಾಸುದೇಶ್ ನಿರ್ವಹಣೆಯಲ್ಲಿ ನಡೆಯಿತು. ಸ್ವಾಗತ ಸಮಿತಿಯ ಅಧ್ಯಕ್ಷರಾದ ಡಾ ಕೆ.ಎನ್ ವೆಂಕಟರಮಣ ಹೊಳ್ಳ ಮತ್ತು ರಾಜೇಶ್ ಕೋಟೆಕಣಿ ಸ್ವಾಗತ ಜವಾಬ್ದಾರಿ ನಿರ್ವಹಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

