ಫಿಲೋಮಿನಾ ಎನ್.ಎಸ್.ಎಸ್. ಶಿಬಿರದಲ್ಲಿ ಯಕ್ಷರೂಪಕ "ಸುದರ್ಶನ"

Upayuktha
0


ಪುತ್ತೂರು: ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ) ಪುತ್ತೂರು, ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದ ಪಾಪೆಮಜಲು ಪ್ರೌಢಶಾಲೆಯ ಸಾಂಸ್ಕೃತಿಕ ವೇದಿಕೆಯ ಯಕ್ಷಕಲಾ ಕೇಂದ್ರ (ಭಾರತೀಯ ಶಾಸ್ತ್ರೀಯ ಮತ್ತು ಜಾನಪದ ಕಲೆಗಳ ಅಧ್ಯಯನ ಕೇಂದ್ರ) ಪ್ರಸ್ತುತಿಯಲ್ಲಿ ಯಕ್ಷರೂಪಕ "ಸುದರ್ಶನ" ಪ್ರದರ್ಶನಗೊಂಡಿತು.


ಯಕ್ಷಕಲಾ ಕೇಂದ್ರದ ಸಾಂಸ್ಕೃತಿಕ ವಿಸ್ತರಣೆಯ ಯೋಜನೆಯಡಿಯಲ್ಲಿ ವಿದ್ಯಾರ್ಥಿ ಕಲಾವಿದರಿಂದ ಯಕ್ಷರೂಪಕವು ಸಂಪನ್ನಗೊಂಡಿತು.


ಸುದರ್ಶನೋಪಾಖ್ಯಾನ ಪ್ರಸಂಗದ "ಸುದರ್ಶನ" ಪಾತ್ರ ಚಿತ್ರಣವನ್ನು ವಿದ್ಯಾರ್ಥಿ ಕಲಾವಿದ ಮಿಥುನ್ ಪ್ರೌಢ ಅಭಿನಯದ ಮೂಲಕ ಅಪೂರ್ವವಾಗಿ ಚಿತ್ರಿಸಿದರು.


ಹಾಡುಗಾರಿಕೆಯಲ್ಲಿ ಯಕ್ಷಕಲಾ ನಿರ್ದೇಶಕ ಪ್ರಶಾಂತ್ ರೈ , ಮೃದಂಗದಲ್ಲಿ ಬಾಲಸುಬ್ರಹ್ಮಣ್ಯ , ಚೆಂಡೆಯಲ್ಲಿ ಆಯುಷ್, ವಯಲಿನ್ ನಲ್ಲಿ ಮೀಹೀರ್ ಭಟ್ಟ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು.


ಪ್ರಾಂಶುಪಾಲರಾದ ರೆ|ಡಾ| ಆಂಟೋನಿ ಪ್ರಕಾಶ್ ಮೊಂತೇರೊರವರ ಪ್ರೋತ್ಸಾಹ ಮತ್ತು ಯೋಜನಾಧಿಕಾರಿಗಳಾದ ಡಾ| ಚಂದ್ರಶೇಖರ ಕೆ ಮತ್ತು ಪುಷ್ಪ ಎನ್ ರವರ ಸಹಕಾರದಿಂದ ಕಾರ್ಯಕ್ರಮವು ಯಶಸ್ವಿಯಾಗಿ ಮೂಡಿಬಂತು.


ಹಿರಿಯರಾದ ಅಮ್ಮಣ್ಣ ರೈ ದೇರ್ಲ ಕಲಾವಿದರನ್ನು ಗೌರವಿಸಿದರು. ಸಹಶಿಬಿರಾಧಿಕಾರಿ ಹರ್ಷಿತ್ ಆರ್ ಧನ್ಯವಾದ ಸಮರ್ಪಿಸಿದರು. ಅರಿಯಡ್ಕ ಗ್ರಾಮದ ಜನತೆ ವಿದ್ಯಾರ್ಥಿ ಕಲಾವಿದರ ಪ್ರದರ್ಶನವನ್ನು ಸವಿದರು.


  ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top