ಪ್ರಾತಿನಿಧಿಕ ಚಿತ್ರ
ಮಂಗಳೂರು: ಮಂಗಳೂರು ನಗರದ ದೇರೆಬೈಲ್–ಕೊಂಚಾಡಿ ಪ್ರದೇಶದಲ್ಲಿರುವ ಶ್ರೀ ನಾಗಕನ್ನಿಕಾದ ದುರ್ಗಾಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ, ಕಟೀಲು ಮೇಳದ 'ಶ್ರೀದೇವಿ ಮಹಾತ್ಮೆ' ಯಕ್ಷಗಾನ ಸೇವಾ ಬಯಲಾಟವು ಫೆಬ್ರವರಿ 27ರಂದು (ಶುಕ್ರವಾರ) ನಡೆಯಲಿದೆ.
ಈ ಯಕ್ಷಗಾನ ಬಯಲಾಟವನ್ನು ಶ್ರೀಮತಿ ಡಿ. ಸೀತಾ ಮತ್ತು ಶ್ರೀ ಡಿ. ಚಂದ್ರಶೇಖರ ಜೋಗಿ ಇವರ ಸೇವಾರ್ಥವಾಗಿ ಅವರ ಪುತ್ರ, ಮಾಜಿ ಕಾರ್ಪೊರೇಟರ್ ರಾಜೇಶ್ ಅವರು ಪ್ರತಿ ವರ್ಷ ನಡೆಸಿಕೊಂಡು ಬರುತ್ತಿದ್ದಾರೆ.
ಸಂಜೆ ವೇಳೆಗೆ ದೇವಸ್ಥಾನ ಆವರಣದಲ್ಲಿ ನಡೆಯಲಿರುವ ಯಕ್ಷಗಾನ ಬಯಲಾಟದಲ್ಲಿ ಪ್ರಸಿದ್ಧ ಯಕ್ಷಗಾನ ಕಲಾವಿದರ ತಂಡದಿಂದ ಶ್ರೀದೇವಿ ಮಹಾತ್ಮೆಯ ಪೌರಾಣಿಕ ಕಥಾ ಭಾಗಗಳ ಮನೋಹರ ಪ್ರದರ್ಶನ ನಡೆಯಲಿದೆ. ಶುದ್ಧ ಸಂಪ್ರದಾಯ, ವೇಷಭೂಷಣ, ಸಂಗೀತ ಹಾಗೂ ನೃತ್ಯಗಳ ಸಮನ್ವಯದೊಂದಿಗೆ ಕಾರ್ಯಕ್ರಮವು ಪ್ರೇಕ್ಷಕರ ಮನಸೂರೆಗೊಳ್ಳಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಕಾರ್ಯಕ್ರಮವು ಸಂಜೆ 5.30 ಗಂಟೆಗೆ ಆರಂಭವಾಗಲಿದ್ದು, ಮಂಗಳೂರು ನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಿಂದ ಭಕ್ತರು ಹಾಗೂ ಯಕ್ಷಗಾನಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಭಕ್ತಾದಿಗಳು ಕುಟುಂಬ ಸಮೇತ ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನ ಆಡಳಿತ ಮಂಡಳಿ ಮತ್ತು ಸೇವಾರ್ಥಿಗಳು ಮನವಿ ಮಾಡಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


