ಮೂಲ ವಿಜ್ಞಾನ ಅಧ್ಯಯನಕ್ಕೆ ವಿಶೇಷ ಆಸಕ್ತಿ ಅಗತ್ಯ: ಪ್ರೊ. ಬಿ.ಎಸ್. ಶೇರಿಗಾರ್

Upayuktha
0


ಉಡುಪಿ: ಮೂಲ ವಿಜ್ಞಾನ ಅಧ್ಯಯನದಲ್ಲಿ ವಿದ್ಯಾರ್ಥಿಗಳು ವಿಶೇಷ ಆಸಕ್ತಿವಹಿಸುವುದರ ಜೊತೆಗೆ ಸಂಶೋಧನಾ ಕಾರ್ಯದಲ್ಲಿ ತೊಡಗಿಕೊಂಡಾಗ ತಾವು ಬೆಳೆಯುವುದರ ಜೊತೆಗೆ ರಾಷ್ಟ್ರದ ತಾಂತ್ರಿಕ ಆರ್ಥಿಕ ಅಭಿವೃದ್ಧಿಗೂ ಕೊಡುಗೆ ನೀಡುವ ಸದಾವಕಾಶ ತಮದಾಗುತ್ತದೆ. ವಿಜ್ಞಾನ ಕಲಿಕೆಯ ವಿಧಾನದಲ್ಲಿ  ಕೂಡ ಬಹಳಷ್ಟು ಪರಿಷ್ಕರಣೆಗಳು ಆಗಬೇಕಾದ ಅನಿವಾರ್ಯತೆ ಇದೆ" ಎಂದು ಕುವೆಂಪು ವಿಶ್ವ ವಿದ್ಯಾಲಯದ ನಿವೃತ್ತ ಕುಲಪತಿ ಪ್ರೊ. ಬಿ.ಎಸ್. ಶೇರಿಗಾರ್ ಅಭಿಪ್ರಾಯಿಸಿದರು.


ಉಡುಪಿ ಎಂಜಿಎಂ. ಕಾಲೇಜಿನ ವಿಜ್ಞಾನ ಸಂಘ; ಐಕ್ಯೂಎ ಸಿ ಮತ್ತು ಹಳೆ ವಿದ್ಯಾರ್ಥಿ ಸಂಘದ ಸಹಭಾಗಿತ್ವದಲ್ಲಿ ಹಮ್ಮಿಕೊಂಡ "ಆಲ್ಕೆಮಿ ಟು ಕೆಮಿಸ್ಟ್ರಿ" ಅನ್ನುವ ವಿಷಯದ ಕುರಿತಾದ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ಅತಿಥಿಯಾಗಿ ಉಪನ್ಯಾಸವಿತ್ತರು. ಇನ್ನೇೂವ೯ ಮುಖ್ಯ ಸಂಪನ್ಮೂಲ ವ್ಯಕ್ತಿ ಪ್ರೊ. ಎಂ. ಆರ್. ನಾಗರಾಜ್ ಮಾಜಿ ಕಾರ್ಯದರ್ಶಿ ರಾಜ್ಯ ವಿಜ್ಞಾನ ಪರಿಷತ್ತು ಬೆಂಗಳೂರು ರಸಾಯನಶಾಸ್ತ್ರ ಅಧ್ಯಯನದ ಚಾರಿತ್ರಿಕ ಹಿನ್ನೆಲೆಯನ್ನು ರಸವತ್ತಾಗಿ ವಿವರಿಸಿದರು.


ಸಭೆಯ ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲೆ ಪ್ರೊ. ವನಿತಾ ಮಯ್ಯ ವಹಿಸಿದ್ದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ಕಾಲೇಜಿನ ಉಪಪ್ರಾಂಶುಪಾಲ ಡಾ ಎಂ. ವಿಶ್ವನಾಥ ಪೈ ಮಾತನಾಡಿ ಕಾರ್ಯಕ್ರಮಕ್ಕೆ ಶುಭಕೇೂರಿದರು.


ಪ್ರೊ. ಶೈಲಜಾ ಮುಖ್ಯ ಸಂಯೇೂಜಕಿ ಐಕ್ಯೂಎಸಿ, ಪ್ರೊ. ವೀರಾ ಇಡಾ ಪಿಂಟೊ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಚಾಲಕರಾದ ಉಮಾದೇವಿ, ಸಹ ಸಂಚಾಲಕರಾ ಪಿ. ವಾಸವಿ ಕಾರ್ಯಕ್ರಮ ಸಂಘಟಿಸಿದರು. ವಿದ್ಯಾರ್ಥಿನಿ ಕನ್ನಿಕಾ ಸ್ವಾಗತಿಸಿ ಚೈತ್ರಾ ವಂದಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top