ಅಪ್ರತಿಮ ದೇಶಭಕ್ತ ಶಿವಾಜಿ

Upayuktha
0




ಹಲೋ ಹೇಗಿದ್ದೀರಾ? ಇಂದು ಎಲ್ಲ ಕಡೆಗೆ ಶಿವಾಜಿ ಜಯಂತಿ ಆಚರಿಸಲಾಗುತ್ತಿದೆ. ಶಿವಾಜಿ ಒಬ್ಬ ಹುಟ್ಟು ಹೋರಾಟಗಾರ. ಬ್ರಿಟಿಷರು ಬರುವುದಕ್ಕಿಂತ ಮುಂಚೆಯೇ ಸ್ವಾತಂತ್ರ್ಯದ ಕಿಡಿ ಹತ್ತಿಸಿದ ವ್ಯಕ್ತಿ. ತನ್ನ ತಾಯಿಯ ಕಡೆಯಿಂದ ಕಲಿತ ಸಂಸ್ಕಾರದಿಂದ ಹಿಂದೂ ಧರ್ಮದ ಉಳಿವಿಗೆ ಪಣ ತೊಟ್ಟನು.


ಒಮ್ಮೆ ಎಲ್ಲಿಯೂ ಓದಿದ ನೆನಪು. ಒಬ್ಬ ವಿದ್ಯಾರ್ಥಿಗೆ ಶಿಕ್ಷಕರು ಶಿವಾಜಿ ಇರಲಿಲ್ಲ ಎಂದರೆ ಏನಾಗುತ್ತಿತ್ತು ಎಂದು ಕೇಳಿದರೆ ಆಗ ವಿದ್ಯಾರ್ಥಿ ಕೊಟ್ಟ ಉತ್ತರ ನಮ್ಮೆಲ್ಲರನ್ನೂ ಚಿಂತನೆಗೆ ಹಚ್ಚುತ್ತದೆ. ಅವನು ಹುಟ್ಟಲಿಲ್ಲ ಎಂದರೆ ನಾವೆಲ್ಲರೂ ನಮ್ಮ ಪರೀಕ್ಷೆಯನ್ನು ಉರ್ದುವಿನಲ್ಲಿ ಬರೆಯಬೇಕಾಗಿತ್ತು.


ಶಿವಾಜಿ ಅಖಂಡ ಹಿಂದೂ ಸಾಮ್ರಾಜ್ಯದ ಕನಸು ಕಂಡವನು. ಔರಂಗಜೇಬನಿಗೆ ತಲೆ ನೋವಾಗಿದ್ದವನು.  ಚಿಕ್ಕವನಿದ್ದಾಗ ಸಮರ್ಥ ರಾಮದಾಸರ ಶಿಷ್ಯನಾಗಿ ಶ್ರೇಷ್ಟ ತತ್ವಗಳನ್ನು ಮೈಗೂಡಿಸಿ ಕಂಡವನು. ಸಮರ್ಥ ರಾಮದಾಸರ ಆಜ್ಞೆಯಂತೆ ಒಬ್ಬರು ಇನ್ನೊಬ್ಬರನ್ನು ಬೆಟ್ಟಿ ಆದಾಗ ರಾಮ ರಾಮಾ ಅನ್ನುವಂತೆ ಆಜ್ಞೆ ವಿಧಿಸಿದ. ಅದು ಈಗಲೂ ಇದೆ.


ತಾನು ಯುದ್ಧ ಗೆದ್ದಾಗಲು ಸಹ ಶತ್ರು ಪಕ್ಷದ ಸ್ತ್ರೀಯರನ್ನು ಗೌರವ ರೀತಿಯಿಂದ ನಡೆಸಿಕೊಳ್ಳುವಂತೆ ಆಜ್ಞೆ ವಿಧಿಸಿ ತಾನು ಹಾಗೆಯೇ ನಡೆದು ತೋರಿಸಿದ. ಒಮ್ಮೆ ಸಂಚಾರದಲ್ಲಿದ್ದ್ದಾಗ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳನ್ನು ಕಂಡು ಅವರ ಕಡೆಯಿಂದ ಆಶೀರ್ವಾದ ಪಡೆದು ಹಿಂದೂ ಧರ್ಮದ ಉಳಿವಿಗೆ ತನ್ನ ಜೀವನವನ್ನು ಮುಡುಪಾಗಿಟ್ಟ.


ಮಹಾರಾಷ್ಟ್ರದ ಆರಾಧ್ಯ ದೇವತೆ ಎಂದೇ ಪ್ರಸಿದ್ಧವಾಗಿದ್ದಾನೆ. ತುಲಾಜಾಪುರದ ತುಳಜಾ ಭವಾನಿ ಆಶೀರ್ವಾದ ಪಡೆದು ತನ್ನ ಸೈನಿಕರಿಗೆ ಜೈ ಭವಾನಿ. ಎಂಬ ನುಡಿ ಕೊಟ್ಟು ತನ್ನ ಸೈನಿಕರಲ್ಲಿ ಸ್ಪೂರ್ತಿ ತುಂಬಿದ ವ್ಯಕ್ತಿ. ಇತ್ತೀಚೆಗೆ. ಬಂದ ಹಿಂದಿ ಚಲನಚಿತ್ರ "ಚಾವಾ" ಅವನ ಮಗನಾದ ಸಂಭಾಜಿಯ ಜೀವನ ಕುರಿತು ಮಾಡಲಾಗಿದೆ. ಇತ್ತೀಚೆಗೆ ಮಹಾರಾಷ್ಟ್ರ ಸರ್ಕಾರ ಔರಂಗಾಬಾದ್ ಹೆಸರನ್ನು ಬದಲಿಸಿ ಛತ್ರಪತಿ ಸಂಭಾಜಿ ಎಂದು ನಗರಕ್ಕೆ ನಾಮಕರಣ ಮಾಡಲಾಗಿದೆ.


ಬನ್ನಿ, ಈ ಅಪ್ರತಿಮ ಹೋರಾಟಗಾರ ನ ನೆನೆಯೋಣ. ಏನಂತೀರಾ?


- ಗಾಯತ್ರಿ ಸುಂಕದ, ಬದಾಮಿ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
To Top