ಬೇಳದ ಬ್ರಹ್ಮಬೈದರ್ಕಳ ಗರೋಡಿಯಲ್ಲಿ ಸಾಹಿತ್ಯಾಮೃತ ಗಾನಾಮೃತ ಕಾರ್ಯಕ್ರಮ

Upayuktha
0


ಕಾಸರಗೋಡು: ಗಡಿನಾಡ ಕನ್ನಡತಿ, ಡಾ. ವಾಣಿಶ್ರೀಯವರ ಸಾರಥ್ಯದ ಕಾಸರಗೋಡಿನ “ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ”ಯ 180 ನೇ ಸಾಂಸ್ಕೃತಿಕ ಕಾರ್ಯಕ್ರಮವನ್ನು, ಕಾಸರಗೋಡು ಜಿಲ್ಲೆಯ, ನೀರ್ಚಾಲಿನ ಬೇಳದ ಬ್ರಹ್ಮಬೈದರ್ಕಳ ಗರೋಡಿಯ ಬ್ರಹ್ಮ ಬಲಿ ಮತ್ತು ನೇಮೋತ್ಸವದ ಪ್ರಯುಕ್ತ ಅಂದವಾಗಿ ನೆರವೇರಿಸಿ ಕೊಡಲಾಯಿತು.


ಸಂಸ್ಥೆಯ ಸಂಗೀತ ಚೈತನ್ಯಗಳಾದ ಶ್ರೀ ಪ್ರದೀಪ್ ಆಚಾರ್ಯ ಹಾಗೂ ಮನೋಜ್ ರವರ ವಿಶೇಷ ಕಲೆಯಾದ ಸುಮಧುರ ಹೆಣ್ಣು ಸ್ವರದ ಭಕ್ತಿಗೀತೆಗಳು ಕಲಾಭಿಮಾನಿಗಳಿಗೆ ರಸದೌತಣ ನೀಡಿತು. ಅನುಪಮರವರು ತಮ್ಮ ಸುಮಧುರ ಕಂಠದ ಭಕ್ತಿಗೀತೆಗಳನ್ನು ಹಾಡಿ ವೇದಿಕೆಯನ್ನು ಸಂಪನ್ನಗೊಳಿಸಿದರು. ಕುಮಾರಿಯರಾದ ಬಿಂದು ತಮ್ಮ ಕೋಗಿಲೆ ಸ್ವರದ ಹಾಡುಗಳನ್ನು ಸುಶ್ರಾವ್ಯವಾಗಿ ಪ್ರಸ್ತುತಪಡಿಸಿದರು.


ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷರಾದ ಡಾ. ವಾಣಿಶ್ರೀಯವರು, ತಮ್ಮ ಶ್ರೀಮಂತ ಸಾಹಿತ್ಯದ ನುಡಿಗಳೊಂದಿಗೆ ಕಾರ್ಯಕ್ರಮ ಸಾದರಪಡಿಸಿದರು.


ಶ್ರೀ ಬೇಳದ ಬ್ರಹ್ಮಬೈದರ್ಕಳ ಗರೋಡಿಯ ವ್ಯವಸ್ಥಾಪನಾ ಸಮಿತಿ ವತಿಯಿಂದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷರು, ಡಾ. ವಾಣಿಶ್ರೀಯವರನ್ನು ಶ್ರೀ ಜೋಡು ದೈವಗಳ ಪ್ರಸಾದ ನೀಡಿ ಗೌರವಿಸಿದರು. ಭಕ್ತಿ ಗೀತೆಗಳ ಸುಮಧುರ ಕಾರ್ಯಕ್ರಮವನ್ನು ನೋಡಿ ಆಲಿಸಿದ ಜನರ ಅಭಿನಂದನೆಗಳನ್ನು ವ್ಯಕ್ತಪಡಿಸುತ್ತಾ, ಎಲ್ಲಾ ಕಲಾರತ್ನಗಳಿಗೆ ಗೌರವಧನ ಮತ್ತು ಪುಸ್ತಕವನ್ನು ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶ್ರೀ ನಾರಾಯಣ, ನಾರಾಯಣ ಗುರುಸ್ವಾಮಿ ಮಾನ್ಯ, ಶ್ರೀ ಮಹಾಲಿಂಗೇಶ್ವರ ಶ್ರೀಧರ್ ಮಾಸ್ಟರ್ ಬೇಳ ಮುಂತಾದ ಗಣ್ಯರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
To Top