ಭಾರತದ ಆರ್ಥಿಕತೆಯ ಅಭಿವೃದ್ಧಿಯಲ್ಲಿ ಖಾಸಗಿ ವಲಯದ ಪಾತ್ರ

Upayuktha
0




 - ಟಿ. ದೇವಿದಾಸ್ 

ಈ ದೇಶದ ಶ್ರೀಮಂತ ಹನ್ನೆರಡು ಕಂಪನಿಗಳು ಸರಿಸುಮಾರು ಇಪ್ಪತ್ತೈದು ಲಕ್ಷಕ್ಕೂ ಹೆಚ್ಚು ಭಾರತೀಯರಿಗೆ ಉತ್ತಮ ಶ್ರೇಣಿಯ ವೇತನದೊಂದಿಗೆ ಉದ್ಯೋಗವನ್ನು ನೀಡುತ್ತಿವೆ.‌ ಲಕ್ಷಕ್ಕೂ ಹೆಚ್ಚು ಉದ್ಯೋಗವನ್ನು ನೀಡುತ್ತಿರುವ ಕಂಪೆನಿಗಳ ಹೆಸರನ್ನು ಇಲ್ಲಿ ನಮೂದಿಸಿದ್ದೇನೆ. ಹಾಗಂತ ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ನೀಡುತ್ತಿರುವ ಈ ಕಂಪೆನಿಗಳನ್ನು ಹೊರತುಪಡಿಸಿ ಇನ್ನೂ ಕಂಪೆನಿಗಳು ಇವೆಯೆಂದು ಭಾವಿಸುತ್ತೇನೆ. ಹಾಗೆ, ನೀಡಿದ ಅಂಕಿ ಅಂಶಗಳ ವಿವರದಲ್ಲಿ ವ್ಯತ್ಯಾಸ ಇರಬಹುದು. ‌ಅಂದಾಜು ಬರೆದಿದ್ದೇನೆ. 

1. ಟಾಟಾ ಗ್ರೂಪ್- 11 ‌ಲಕ್ಷ 15 ಸಾವಿರ 

2. ಲಾರ್ಸನ್ & ಟರ್ಬೋ- 3 ಲಕ್ಷ, 48 ಸಾವಿರ 

3. ಇನ್ಫೋಸಿಸ್ - 3 ಲಕ್ಷ, 37 ಸಾವಿರ

4. ಮಹೀಂದ್ರಾ ಮತ್ತು ಮಹೀಂದ್ರಾ- 3 ಲಕ್ಷ, 24 ಸಾವಿರ 

5. ರಿಲಯನ್ಸ್ ಇಂಡಸ್ಟ್ರೀಸ್- 4 ಲಕ್ಷ, 3 ಸಾವಿರ

6. ವಿಪ್ರೋದಲ್ಲಿ- 2 ಲಕ್ಷ 33 ಸಾವಿರ

7. ಕಾಗ್ನಿಜೆಂಟಲ್ಲಿ- 2 ಲಕ್ಷ 50 ಸಾವಿರ

8. ಎಚ್ ಸಿಎಲ್- 1 ಲಕ್ಷ, 71 ಸಾವಿರ

9. ಎಚ್ ಡಿ ಎಫ್ ಸಿ ಬ್ಯಾಂಕ್‌ ಲಿಮಿಟೆಡ್- 2 ಲಕ್ಷ, 14 ಸಾವಿರ

10. ಐಸಿಐಸಿಐ ಬ್ಯಾಂಕ್- 1 ಲಕ್ಷ 30 ಸಾವಿರ 

11. ಅಕ್ಸೆಂಚರ್- ಮೂರು ಲಕ್ಷ

12. ಡೆಲಾಯ್ಟ್- 1 ಲಕ್ಷ 20-50 ಸಾವಿರ

13. ಎಚ್ ಸಿಎಲ್ ಟೆಕ್- 2 ಲಕ್ಷ 9 ಸಾವಿರ

14. ಕ್ಯಾಪ್ ಜೆಮಿನಿ- 1 ಲಕ್ಷ, 75 ಸಾವಿರ

15. ಐಬಿಎಂ- 1 ಲಕ್ಷ, 30 ಸಾವಿರ

16. ಆಕ್ಸಿಸ್ ಬ್ಯಾಂಕ್- 1 ಲಕ್ಷ, 5 ಸಾವಿರ

17. ಪಂಜಾಬ್ ನ್ಯಾಷನಲ್ ಬ್ಯಾಂಕ್- 8.1 ಲಕ್ಷ, 2 ಸಾವಿರ


ನೇರ ವೇತನ ಪಟ್ಟಿಯಲ್ಲಿರುವ ಈ ದಾಖಲೆ ಮಾತ್ರವಲ್ಲದೆ ಆಫ್‌ರೋಲ್ ಉದ್ಯೋಗಿಗಳು, ಸಹಾಯಕ ಸಂಸ್ಥೆಗಳು, ಡೀಲರ್‌ಗಳು, ಏಜೆಂಟ್‌ಗಳು, ಆಯಾ ಉತ್ಪನ್ನಗಳಿಗೆ ಸಂಬಂಧಿಸಿದ ಪ್ಯಾಕೇಜಿಂಗ್ ಕಂಪನಿಗಳು, ಸಾರಿಗೆ ವಲಯ ಮತ್ತು ಇನ್ನೂ ಹತ್ತಾರು ವಿಭಾಗಗಳು ಈ ಕಂಪೆನಿಗಳ ಮೇಲೆ ಅವಲಂಬಿತವಾಗಿವೆ. ಹಾಗೆ ನೋಡಿದರೆ ಪರೋಕ್ಷವಾಗಿ ಉದ್ಯೋಗ ಒದಗಿಸುವ ಪಟ್ಟಿ ತುಂಬಾ ದೊಡ್ಡದಿದೆ.


ಒಂದು ಕಂಪನಿಯಲ್ಲಿ ಸರಿಸುಮಾರು ಒಂದು ಲಕ್ಷ ಉದ್ಯೋಗಿಗಳಿದ್ದರೆ ಆ ಕಂಪನಿಯಿಂದಲೇ ಕನಿಷ್ಠ ಅಂದರೂ ಮೂರು ಲಕ್ಷ ಮನೆಗಳ ಬದುಕು ನಡೆಯುತ್ತದೆ. ಈ‌ ಹತ್ತು ದೊಡ್ಡ ಕಂಪನಿಗಳಲ್ಲದೆ ದೇಶದಲ್ಲಿ ಸಾವಿರಾರು ಖಾಸಗಿ ಸಣ್ಣ, ಮಧ್ಯಮ ಮತ್ತು ದೊಡ್ಡ ಕಂಪನಿಗಳು, ಇಂಡಸ್ಟ್ರಿಗಳು, ಫ್ಯಾಕ್ಟರಿಗಳು, ಫರ್ಮ್ಗಳು, ಎಲ್ಲ ಬಗೆಯ ಮೀಡಿಯಾಗಳು, ಹೊಟೆಲ್ ಉದ್ಯಮಗಳು, ಯಂತ್ರ ಮತ್ತು ಇಲೆಕ್ಟ್ರಾನಿಕ್, ಗೃಹೋಪಯೋಗಿ ಮುಂತಾದ ಅನ್ಯಾನ್ಯ ಸಾವಿರಾರು ಲಕ್ಷ ಬಗೆಯ ಉತ್ಪಾದಕಾ ಘಟಕಗಳು, ಗೃಹ ಕೈಗಾರಿಕೆಗಳು, ಕೃಷಿ ಘಟಕಗಳು, ಖಾಸಗಿ ಬ್ಯಾಂಕುಗಳು, ಹೊಟೆಲ್ ಉದ್ಯಮಗಳು, ಗಾರ್ಮೆಂಟ್ಸ್, ಟೆಕ್ಸ್ ಟೈಲ್ಸ್ ಉದ್ಯಮಗಳು, ಮಠ, ಮಂದಿರಗಳು, ಖಾಸಗಿ ಶಾಲಾ ಕಾಲೇಜುಗಳು, ವಿವಿಗಳು, ಇತ್ಯಾದಿಯೆಲ್ಲವೂ ಪ್ರತಿ ವರ್ಷ ಸಾಕಷ್ಟು ಉದ್ಯೋಗಗಳನ್ನು ಸೃಷ್ಟಿಸುತ್ತಲೇ ಇರುತ್ತವೆ.


ಈ ಬಗೆಯ ಖಾಸಗಿ ವಲಯವು ಸೃಷ್ಟಿಸಿದ ಉದ್ಯೋಗಗಳು ಕಳೆದ ಎಪ್ಪತ್ತೈದು ವರ್ಷಗಳಲ್ಲಿ ಭಾರತದಲ್ಲಿ ಸೃಷ್ಟಿಯಾದ ಕೇಂದ್ರ ಸರ್ಕಾರಿ ಉದ್ಯೋಗಗಳ ಒಟ್ಟೂ ಸಂಖ್ಯೆ ಅಂದಾಜು 48.34 ಲಕ್ಷಕ್ಕಿಂತ ಹೆಚ್ಚು ಎಂಬ ವರದಿಯಿದೆ. ಕರ್ನಾಟಕದಂಥ ದೊಡ್ಡ ರಾಜ್ಯದಲ್ಲಿ ಕಳೆದ ಎಪ್ಪತ್ತೈದು ವರ್ಷಗಳಲ್ಲಿ ಸೃಷ್ಟಿಯಾದ ಒಟ್ಟೂ ಸರ್ಕಾರಿ ಉದ್ಯೋಗಗಳಿಗಿಂತ ಸರಿಸುಮಾರು ಐದು ಪಟ್ಟು ಹೆಚ್ಚಿದೆ.



ದುಷ್ಟ ಅಧಿಕಾರ ರಾಜಕೀಯ ಅಜೆಂಡಾ ಮತ್ತು ವೈಯಕ್ತಿಕ ಅಸಮಾಧಾನದ ಕಾರಣದಿಂದ ದೇಶದ ಅಭಿವೃದ್ಧಿಗೆ ದೊಡ್ಡ ಪಾತ್ರವಹಿಸಿರುವ ಕಂಪೆನಿಗಳನ್ನು ಅಪಹಾಸ್ಯ ಮಾಡೋದು‌ ದೇಶದ್ರೋಹವೆನಿಸದೆ? ಕೋಟ್ಯಂತರ ಭಾರತೀಯರ ನಿತ್ಯ ಬದುಕಿಗೆ ಆಧಾರವಾಗಿದ್ದ ಈ ಕಂಪೆನಿಗಳು ದೇಶದ‌ ಆರ್ಥಿಕತೆಯ ಅಭಿವೃದ್ಧಿಯನ್ನು ಎತ್ತರಕ್ಕೆ ಒಯ್ಯುವಲ್ಲಿ ಗಮನಾರ್ಹ ಪಾತ್ರವನ್ನು ನಿರ್ವಹಿಸುತ್ತಿವೆ.


ಎರಡು-ಮೂರು ಪೀಳಿಗೆಯ ಆರ್ಥಿಕ ಸಾಮರ್ಥ್ಯವನ್ನು ಹಾಳುಮಾಡಿದ ಸಮಾಜವಾದಿ ರಾಜಕಾರಣಿಗಳ ಮಾತುಗಳನ್ನು ಕೇಳಿ ಮುಂದಿನ ತಲೆಮಾರಿನ ಭವಿಷ್ಯವನ್ನು ಹಾಳು‌ಮಾಡುವುದು ದೇಶಹಿತವಲ್ಲ. ಜಾತ್ಯತೀತತೆ, ಉದಾರವಾದದ ಸೋಗಿನಲ್ಲಿ ದೇಶ ಕಂಡ ಅಭಿವೃದ್ಧಿಯ ಪ್ರಮಾಣವನ್ನು ೧೯೪೭ರಿಂದಲೂ ನೋಡುತ್ತಿದ್ದೇವೆ.


ರಾಜಕೀಯಕ್ಕಿಂತ ದೇಶ ಮುಖ್ಯ. ದೇಶದ ಭವ್ಯ ಭವಿಷ್ಯ ಮುಖ್ಯ. ನಮ್ಮ‌ ಮಕ್ಕಳಿಗೆ ಒಳ್ಳೆಯ ಕಂಪೆನಿಯಲ್ಲಿ ಪ್ಲೇಸ್ ಮೆಂಟ್ ದೊರೆಯಲಿ ಎಂದು ಹಪಹಪಿಸುವ ನಾವು ಇಂಥ ಖಾಸಗಿ ಕಂಪೆನಿಗಳ ಅಸ್ತಿತ್ವವನ್ನು ಗೌರವಿಸಲೇಬೇಕಾಗುತ್ತದೆ. ದುಡಿದು ತಿನ್ನುವ ಶ್ರಮಸಂಸ್ಕೃತಿಯನ್ನು ಬೆಳೆಸುವ ಈ ಖಾಸಗಿ ವಲಯದ ವಿಸ್ತಾರ ಮತ್ತು ವ್ಯಾಪ್ತಿ ಬಹುದೊಡ್ಡ ಪ್ರಮಾಣದ ಜನಸಂಖ್ಯೆಯುಳ್ಳ ಭಾರತದಂಥ ದೇಶಕ್ಕೆ ಅಗತ್ಯವೂ ಅನಿವಾರ್ಯವೂ ಎಂಬುದು ಸಾರ್ವಕಾಲಿಕ ಸತ್ಯ!


ಇನ್ನೊಂದು ಮುಖ್ಯವಾದ ಸಂಗತಿಯೇನೆಂದರೆ, ಈ ಎಲ್ಲ ಕಂಪೆನಿಗಳು ಮಾಡುವ ಸಮಾಜಸೇವೆ ಇದೆಯಲ್ಲ, ಅದು ಬೇರೆಯದೇ ದೊಡ್ದ ಪಟ್ಟಿಯಾಗುತ್ತದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top