ಎಸ್.ಡಿ.ಎಂ. ಕಲಾಕೇಂದ್ರಕ್ಕೆ ಅಮೇರಿಕಾದ ಹೃದ್ರೋಗ ತಜ್ಞ ಡಾ. ರಾಮಯ್ಯ ಗೌಡ ದಂಪತಿ ಭೇಟಿ, ಒಂದು ಲಕ್ಷ ರೂ. ದೇಣಿಗೆ

Upayuktha
0


ಚಿತ್ರ: ಅಮೇರಿಕಾದ ಹೃದ್ರೋಗತಜ್ಞ ಡಾ. ರಾಮಯ್ಯ ಗೌಡ ದಂಪತಿ ಎಸ್.ಡಿ.ಎಂ. ಕಲಾಕೇಂದ್ರಕ್ಕೆ ಶುಕ್ರವಾರ ಭೇಟಿ ನೀಡಿದರು.

ಉಜಿರೆ: ಅಮೇರಿಕಾದ ಖ್ಯಾತ ಹೃದ್ರೋಗ ತಜ್ಞ ಡಾ. ರಾಮಯ್ಯ ಗೌಡ ಮತ್ತು ನರ್ಸಿಂಗ್ ಕಾಲೇಜು ಪ್ರಾಧ್ಯಾಪಕಿ ಡಾ. ಕಾನಿ ಗೌಡ ಶುಕ್ರವಾರ ಉಜಿರೆಯಲ್ಲಿರುವ ಎಸ್.ಡಿ.ಎಂ. ಕಲಾಕೇಂದ್ರಕ್ಕೆ ಭೇಟಿ ನೀಡಿ ಸಂಗೀತ, ಯಕ್ಷಗಾನ, ನೃತ್ಯ ಹಾಗೂ ರಂಗ ತರಬೇತಿ ಬಗ್ಯೆ ಸವಿವರ ಮಾಹಿತಿ ಪಡೆದು ಮೆಚ್ಚುಗೆ  ವ್ಯಕ್ತಪಡಿಸಿ, ಅಭಿನಂದಿಸಿದರು.


ಕಲಾಕೇಂದ್ರದ ಆಡಳಿತ ಮಂಡಳಿಗೆ ಅವರು ಒಂದು ಲಕ್ಷ ರೂ. ದೇಣಿಗೆ ನೀಡಿದರು.


ಎಸ್.ಡಿ.ಎಂ. ಕಲಾಕೇಂದ್ರದ ವಿಭಾಗದ ಸಂಯೋಜಕ ತೃಪ್ತಕುಮಾರ್ ಜೈನ್, ವಸತಿನಿಲಯಗಳ ವಿದ್ಯಾರ್ಥಿಗಳ ಕ್ಷೇಮಪಾಲನಾಧಿಕಾರಿ ಯುವರಾಜ ಪೂವಣಿ, ತರಬೇತುದಾರರಾದ ಯಶವಂತ, ಬೆಳ್ತಂಗಡಿ, ಚೈತ್ರ ಧರ್ಮಸ್ಥಳ ಮತ್ತು ಅರುಣ್ ಹಾಗೂ ಕಲಾಕೇಂದ್ರದ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಪೂರಕ ಮಾಹಿತಿ ನೀಡಿದರು.


ಡಾ. ರಾಮಯ್ಯ ಗೌಡ ಮೂಲತಃ ಬೆಳ್ತಂಗಡಿ ತಾಲ್ಲೂಕಿನ ಕಡಿರುದ್ಯಾವರ ಗ್ರಾಮದ ವಳಂಬ್ರ  ನಿವಾಸಿಯಾಗಿದ್ದು, ಉಜಿರೆಯ ಎಸ್.ಡಿ.ಎಂ. ಸೆಕೆಂಡರಿ ಶಾಲೆಯ (ಅಂದಿನ ಡಿ.ಕೆ.ವಿ. ಹೈಸ್ಕೂಲ್) ಹಿರಿಯ ವಿದ್ಯಾರ್ಥಿಯಾಗಿದ್ದರು.



  ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top