ವಿವೇಕಾನಂದ ಮಹಾವಿದ್ಯಾಲಯದ ಸ್ನಾತಕೋತ್ತರ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಂದ ವಿಚಾರ ಮಂಡನೆ

Upayuktha
0


ಪುತ್ತೂರು: ದ್ವಾರಕ ಪ್ರತಿಷ್ಠಾನ (ರಿ) ಪುತ್ತೂರು ಇದರ ನೇತೃತ್ವದಲ್ಲಿ ನಡೆದ ‘ದ್ವಾರಕೋತ್ಸವ’ 2026ರ ಕಾರ್ಯಕ್ರಮದಲ್ಲಿ"ಸ್ವಾವಲಂಬನೆಗಾಗಿ ಆರ್ಥಿಕ ಹೂಡಿಕೆ" ಎಂಬ ವಿಷಯದ ಬಗ್ಗೆ ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ) ಇದರ ಸ್ನಾತಕೋತ್ತರ ಅಧ್ಯಯನಕೇಂದ್ರದ ಸ್ನಾತಕೋತ್ತರ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಸಂಶೋಧನಾ ಪ್ರಬಂಧವನ್ನು ಮಂಡಿಸಿದ್ದಾರೆ.


ವಿದ್ಯಾರ್ಥಿಗಳಾದ ನವೀನ ಕೃಷ್ಣ, ಪವನ್‍ರಾಜ್, ಅನನ್ಯ ಅಡಿಗ, ಪ್ರಿಯಾ ಹಾಗೂ ದೀಪಶ್ರೀ ಸಂಶೋಧನಾ ಪ್ರಬಂಧವನ್ನು ಮಂಡಿಸಿದರು. ಸ್ನಾತಕೋತ್ತರ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ವಿಜಯ ಸರಸ್ವತಿ ಬಿ. ಅವರ ಮಾರ್ಗದರ್ಶನದಲ್ಲಿ ದ್ವಿತೀಯ ಎಂಕಾಂ ವಿಭಾಗದ ಎಲ್ಲ ವಿದ್ಯಾರ್ಥಿಗಳು ಪುತ್ತೂರು, ಸುಳ್ಯ, ಬಂಟ್ವಾಳ ಹಾಗೂ ಬೆಳ್ತಂಗಡಿ ತಾಲೂಕಿನ ಸುಮಾರು 130 ರಷ್ಟು ಅಭ್ಯರ್ಥಿಗಳನ್ನ ವೈಯಕ್ತಿಕವಾಗಿ ಭೇಟಿ ಮಾಡಿ ಸಂಶೋಧನಾತ್ಮಕ ಪ್ರಬಂಧವನ್ನು ತಯಾರು ಮಾಡಿದ್ದಾರೆ. ಸ್ವಾವಲಂಬನೆಯ ಜೊತೆಗೆ ಬದುಕಿಗೆ ಅಗತ್ಯವಿರುವ ಆರ್ಥಿಕ ಹೂಡಿಕೆ ಮಾಡುವುದು ಎಷ್ಟು ಅವಶ್ಯ ಮತ್ತು ರಿಯಲ್‍ಎಸ್ಟೇಟ್ಸ್‍ ಉದ್ಯಮದಲ್ಲಿ ಹೂಡಿಕೆಯನ್ನು ಮಾಡಿ ಬದುಕನ್ನು ಯಾವ ರೀತಿ ಸುಸ್ಥಿರಗೊಳಿಸಲು ಸಾಧ್ಯ ಅನ್ನುವ ವಿಚಾರವನ್ನು ಮಧ್ಯಮ ವರ್ಗದ ಅಭ್ಯರ್ಥಿಗಳಿಂದ ತಿಳಿದು ಮಂಡಿಸಲಾಯಿತು. ಈ ಸಂಶೋಧನಾತ್ಮಕ ವಿಚಾರ ಮಂಡನೆಯು ವಿದ್ಯಾರ್ಥಿಗಳಲ್ಲಿ ಸಂಶೋಧನೆಯ ಮೇಲಿನ ಆಸಕ್ತಿಯನ್ನು ಹೆಚ್ಚಿಸುವಂತಹ ಚಟುವಟಿಕೆಯಾಗಿ ಮೂಡಿಬಂದಿದೆ ಎಂದು ಗಣ್ಯರ ಮೆಚ್ಚುಗೆಯನ್ನು ಸೂಚಿಸಿದರು.


ವಿಚಾರಗೋಷ್ಟಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕುಂಬ್ಳೆ ನರಸಿಂಹ ಪ್ರಭು, ಸಿ.ಇ.ಒ. ಮೆ|| ಕುಂಬ್ಳೆ ಸೋಲಾರ್‍ಎನರ್ಜಿ ಸೊಲ್ಯುಷನ್ ಪ್ರೈ.ಲಿ. ಹಾಗೂ ಡಾ. ವಿಜಯ ಸರಸ್ವತಿ ಬಿ,ಡೀನ್, ಸ್ನಾತಕೋತ್ತರ ಅಧ್ಯಯನ ಕೇಂದ್ರ ಇವರು ಸಮನ್ವಯಕಾರರಾಗಿ ಭಾಗವಹಿಸಿದರು.


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top