ಗ್ರಾಮೀಣ ಪ್ರದೇಶದಲ್ಲಿ ಗುಣಮಟ್ಟದ ಶಿಕ್ಷಣ ಸಿಗಬೇಕು: ಶಾಸಕ ಕಾಶಪ್ಪನವರ

Upayuktha
0


ಹುನಗುಂದ: ಶಿಕ್ಷಣ ಎನ್ನುವುದು ನಿಂತ ನೀರಾಗಬಾರದು ಅದು ಸದಾ ಹರಿಯುತ್ತಿರುವ ನೀರಾಗಬೇಕು.ಎನ್ನುವ ದೂರದೃಷ್ಠಿಯಿಂದ 11 ವರ್ಷದ ಹಿಂದೆ ಆರಂಭವಾದ ಈ ಶಾಲೆ ಇಂದು ಸ್ವಂತ ಕಟ್ಟಡವನ್ನು ಹೊಂದಿ ಮಕ್ಕಳಿಗೆ ಒಳ್ಳೆಯ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಒಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.


ಶುಕ್ರವಾರ ತಾಲೂಕಿನ ಧನ್ನೂರ ಗ್ರಾಮದ ಶ್ರೀ ಧನೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಧನ್ನೇಶ್ವರ ಸಂಭ್ರಮವನ್ನು ಉದ್ಟಾಟಿಸಿ ಮಾತನಾಡಿದ ಅವರು,ಕಲಿಕೆಯ ಪ್ರಾರಂಭ ಹಂತವೇ ಪೂರ್ವ ಪ್ರಾಥಮಿಕ ಶಾಲೆಯಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು ಎನ್ನುವ ಉದ್ದೇಶದಿಂದ ಸ್ವಂತ ಹಣದಲ್ಲಿ ಶಾಲೆ ಕಟ್ಟಿ ಇವತ್ತು ಉತ್ತಮ ಶಿಕ್ಷಣ ನೀಡುತ್ತಿದ್ದು. ಇಲ್ಲಿನ ಶಿಕ್ಷಕರು ಕೂಡಾ ಮಕ್ಕಳ ಕಲಿಕೆಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದಾರೆ. ಪೂರ್ವ ಪ್ರಾಥಮಿಕ ಶಾಲೆ ಕಲಿಕೆ ಗಟ್ಟಿಯಾದರೆ ಮಾತ್ರ ಉನ್ನತ ಶಿಕ್ಷಣ ಸರಳವಾಗಲಿದೆ. ಈ ಒಂದು ಸಂಸ್ಥೆ ಮುಂದಿನ ದಿನಮಾನಗಳಲ್ಲಿ ಪೂರ್ವ ಪ್ರಾಥಮಿಕದಿಂದ ಪಿಯು ಶಿಕ್ಷಣ ಹಂತದವರೆಗೆ ಬೆಳವಣಿಗೆ ಹೊಂದಲಿ. ಈ ಸಂಸ್ಥೆ ಅಭಿವೃದ್ಧಿಗೆ ನಾನು ಕೂಡ ಸಹಾಯ ಸಹಕಾರ ಮಾಡುತ್ತೇನೆ ಎಂದರು.


ಚಿತ್ತರಗಿಯ ಗುರುಮಹಾಂತ ಶ್ರೀಗಳು ಸಾನಿಧ್ಯ ವಹಿಸಿ ಮಾತನಾಡಿ ಮನುಷ್ಯ ಪ್ರಬುದ್ದ ಜ್ಞಾನವನ್ನು ಹೊಂದಿ ಗಣತೆಯಿಂದ ಬದುಕಲು ಶಿಕ್ಷಣ ಬಹಳ ಮುಖ್ಯ. ಮಕ್ಕಳಿಗಾಗಿ ಆಸ್ತಿ ಮಾಡದೇ ಮಕ್ಕಳನ್ನೇ ಒಂದು ಆಸ್ತಿಯನ್ನಾಗಿ ಮಾಡಿ. ಸಾಲ ಮಾಡಿಯಾದರೂ ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನು ನೀಡಿ ಎಂದು ಪಾಲಕರಿಗೆ ಕಿವಿ ಮಾತು ಹೇಳುವ ಮೂಲಕ ಈಶ್ವರಚಂದ್ರ ವಿದ್ಯಾಸಾಗರ ಅವರ ಬಡತನದ ಜೀವನ,ತಾಯಿ ಮಗನ ಕಲಿಕೆಗೆ ತಾಳಿ ಮಾರಿದ ಪ್ರಸಂಗ, ತಾಯಿಯ ಕಷ್ಟದ ಜೀವನ ಅರಿತು ಮುಂದೆ ಉತ್ತಮ ಶಿಕ್ಷಣ ಪಡೆದು ವಿಶ್ವವಿದ್ಯಾಲಯದ ಕುಲಪತಿಗಳಾಗಿ ಮುಂದೆ ಶಿಕ್ಷಣ ಸಂಸ್ಥೆ ಕಟ್ಟಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿದಂತೆ ಇಂದು ಅಶೋಕ ಪಟ್ಟಣಶೆಟ್ಟಿ ಅವರು ಕೂಡಾ ಸ್ವಂತ ಹಣದಲ್ಲಿ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಉತ್ತಮ ಶಿಕ್ಷಣ ನೀಡುತ್ತಿದ್ದಾರೆ ಎಂದರು.


ಈ ಸಂದರ್ಭದಲ್ಲಿ ಶ್ರೀ ಧನೇಶ್ವರ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಕಲಿತು ಮುರಾರ್ಜಿ ದೇಸಾಯಿ, ಕಿತ್ತೂರು, ನವೋದಯ ಸೇರದಂತೆ ವಿವಿಧ ವಸತಿ ಶಾಲೆಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಸಂಸ್ಥೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ನಂತರ ಮಕ್ಕಳ ಸಾಂಸ್ಕೃತಿಕ ಚಟುವಟಿಕೆಗಳು ಜರುಗಿದವು.


ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಅಶೋಕ ಪಟ್ಟಣಶೆಟ್ಟಿ, ಪಂಚಾಕ್ಷರಯ್ಯ ಹಿರೇಮಠ, ಅರವಿಂದ ಕಟ್ಟಿಮನಿ, ಸಕ್ರಪ್ಪ ಹೂಗಾರ, ಈರಸಂಗಪ್ಪ ಅಂಗಡಿ, ಬಸವರಾಜ ಬೇವೂರ, ಬಸಯ್ಯ ಹಿರೇಮಠ,ವಾಯ್. ಎಚ್. ಹಿರೇಮಠ, ಸಂಗಮೇಶ ಬಂಡರಗಲ್ಲ, ಎಂ.ಎಸ್ ಪಾಟೀಲ, ಪಿಡಿಓ ಮಹಾಂತೇಶ ಕೋಟಿ, ವಸಂತ ಮೇಲಿನಮನಿ ಸೇರಿದಂತೆ ಅನೇಕರು ಇದ್ದರು.ಮುಖ್ಯೋಪಾಧ್ಯಾಯನಿ ವಿದ್ಯಾ ಪಟ್ಟಣಶೆಟ್ಟಿ ಶಾಲೆ ವಾರ್ಷಿಕ ವರದಿ ವಾಚಿಸಿದರು, ಪಿಡಿಓ ಗಿರಮಲ್ಲಪ್ಪ ಶಿರಗುಂಪಿ ಹಾಗೂ ಬಸವರಾಜ ಕಮ್ಮಾರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top