ನೆತ್ತಿಯ ಮೇಲಿದೆ ಅರ್ಧ ಚಂದಿರನ ಬೆರಗು,
ಹಣೆಗಣ್ಣಿನಲಿ ಅಡಗಿದೆ ಜಗವ ಗೆಲ್ಲುವ ಸಿರಗು.
ಕೈಯಲಿ ಹಿಡಿದ ತ್ರಿಶೂಲವು ಅಧರ್ಮವ ಅಳಿಸಲಿ,
ನೆಲಸಿದ ಈ ರೂಪವು ಮನದ ಕತ್ತಲೆ ಓಡಿಸಲಿ ll೦೧ll
ಗಂಗೆಯ ಧರಿಸಿದ ಜಟಾಧಾರಿ ಇವನು,
ಸಕಲ ಜೀವರಾಶಿಗೆ ಆಸರೆಯಾದವನು.
ಸರಳತೆಯ ಸಾರುವ ಸ್ಮಶಾನವಾಸಿಯ ಮಾಯೆ,
ನಮ್ಮ ಮೇಲೆ ಇರಲಿ ಸದಾ ಈ ಶಂಭುವಿನ ಛಾಯೆ ll೦೨ll
ಬಾಹುವಿನ ಮೇಲಿನ ಈ ಕಲೆ ಕೇವಲ ಚಿತ್ರವಲ್ಲ,
ಭಕ್ತಿಯ ಪಥದಿ ಸಾಗುವ ಅಚಲವಾದ ಸಂಕಲ್ಪವಿದಲ್ಲ.
ಓಂಕಾರದ ನಾದದಲಿ ಈ ಜಗತ್ತು ಲಯವಾಗಲಿ,
ಶಿವನ ಪಾದದಲಿ ನಮ್ಮೆಲ್ಲರ ಬದುಕು ಧನ್ಯವಾಗಲಿ ll೦೩ll
- ಶರಣೆ: ಕುಮಾರಿ ರೂಪಾ ಬಿ. ನಾಟೀಕಾರ ಮುದ್ದೇಬಿಹಾಳ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


