ಕಾಸರಗೋಡು: ಡಾ. ವಾಣಿಶ್ರೀ ಸಾರಥ್ಯದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯ 173 ನೆಯ ಸಾಹಿತ್ಯ ಗಾನ ನೃತ್ಯ ವೈಭವವನ್ನು ನಾರಂಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರದ ಪುಣ್ಯ ವೇದಿಕೆಯಲ್ಲಿ ಬಹಳ ವಿಶೇಷವಾಗಿ ಪ್ರಸ್ತುತ ಪಡಿಸಿದರು. ಸಾಹಿತ್ಯ ಪ್ರಸ್ತುತಿಯನ್ನು ಡಾ. ವಾಣಿಶ್ರೀ ಸಾದರ ಪಡಿಸಿದರು. ಈ ಕಾರ್ಯಕ್ರಮವು ಬಹಳ ಅಚ್ಚುಕಟ್ಟಾಗಿ ನಿರೂಪಿತವಾಗಿ ಸನ್ನಿಧಿಯ ಅನುಗ್ರಹಕ್ಕೆ ಪಾತ್ರವಾಯಿತು.
ಸುಂದರ ನೃತ್ಯಗಾತಿಯರಾದ ಭಾಗ್ಯಲಕ್ಷ್ಮಿ, ಅಮಿತ, ಶ್ರೀಜ ಮತ್ತು ರೇಷ್ಮ ಅವರು ತಮ್ಮ ಮೆಚ್ಚಿನ ನೃತ್ಯಗಳನ್ನು ಪ್ರದರ್ಶಿಸಿ ಜನರ ಮನಸೂರೆಗೊಂಡರು. ಅದ್ಭುತ ನೃತ್ಯಗಾತಿಯರಾದ ಶಿವಾನಿ, ಶ್ರೇಯ, ಮಾನ್ವಿ ಇವರು ತಮ್ಮ ನಾಟ್ಯಗಳಿಂದ ಪ್ರೇಕ್ಷಕರಿಂದ ಮೆಚ್ಚುಗೆಯನ್ನು ಪಡೆದರು. ಶರಣ್ಯ ಅವರ ಭರತನಾಟ್ಯವು ಜನರ ಮನಸೂರೆಗೊಂಡಿತು.
ಸುನೀತ, ಸರಸ್ವತಿ ಜನಪದ ಹಾಡುಗಳಿಗೆ ಹೆಜ್ಜೆ ಹಾಕಿದರು. ಈ ಮಧ್ಯೆ ಶಿವಭಕ್ತೆ ಡಾ. ವಾಣಿಶ್ರೀ ಅವರು ಸ್ವತಃ ಕನ್ನಡ ಹಾಡಿಗೆ ನೃತ್ಯಕ್ಕೆ ಹೆಜ್ಜೆ ಹಾಕಿ ಪ್ರೇಕ್ಷಕರ ಮನಕ್ಕೆ ಕನ್ನಡದ ಬೆಂಕಿಯನ್ನು ಪ್ರಚೋದಿಸಿದರು.
ಗಾನ ವೈಭವದ ಅಂಗವಾಗಿ ಸುಸ್ವರದ ಹಾಡುಗಳನ್ನು ದಿವಾಕರ ಹಾಗೂ ಸುನಿತಾ ಕಲಾವಿದರು ಹಾಡಿದರು. ಕಾರ್ಯಕ್ರಮದ ಕೊನೆಗೆ ಎಲ್ಲಾ ಕಲಾವಿದರನ್ನು ಸ್ಮರಣಿಕೆ ಕೊಟ್ಟು ಗೌರವಿಸಲಾಯಿತು. ಡಾ. ವಾಣಿಶ್ರೀ ಕಾಸರಗೋಡು ಅವರ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯ ಕಲಾ ಕಾರ್ಯಕ್ರಮಗಳನ್ನು ಪ್ರಶಂಸಿಸುತ್ತಾ ನಾರಂಪಾಡಿಯ ಪುಣ್ಯ ಶಿವ ಸನ್ನಿಧಿಯ ಹಿರಿಯ ಕಾರ್ಯಕರ್ತರು ಕಲಾವಿದೆಯನ್ನು ದೇವರ ಪ್ರಸಾದ ಫಲ ಪುಷ್ಪ ಕೊಟ್ಟು ಶಾಲು ಹೊದೆಸಿ ಸನ್ಮಾನಿಸಿದರು. ವೇದಿಕೆಯಲ್ಲಿ ಗಣ್ಯರಾದ ಬಾಲಕೃಷ್ಣ, ಕಲಾವತಿ, ಅಚ್ಯುತ ಭಟ್, ಶಶಿಕಲಾ ಉಪಸ್ಥಿತ ರಿದ್ದರು.
ವರದಿ: ಶ್ರೀಕೃಷ್ಣ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


