ಹೊಸಬೆಟ್ಟು ಹಿಂದೂ ಸಂಗಮ: ಬೃಹತ್ ಶೋಭಾಯಾತ್ರೆ

Upayuktha
0


ಹೊಸಬೆಟ್ಟು: ಹಿಂದೂ ಆಯೋಜನಾ ಸಮಿತಿ ಸುರತ್ಕಲ್ ನಗರ ಹೊಸಬೆಟ್ಟು ವಸತಿಯಿಂದ ಹಿಂದೂ ಸಂಗಮ ಗೋಪಾಲಕೃಷ್ಣ ಭಜನಾ ಮಂದಿರದಿಂದ ಶೋಭಾಯಾತ್ರೆ ಮೂಲಕ ಶ್ರೀ ಕೃಷ್ಣ ಭಜನಾ ಮಂದಿರ ಗ್ರಾಮ ಸಂಘದವರೆಗೆ ಅನೇಕ ಕಲಾ ತಂಡಗಳು, ಕುಣಿತ ಭಜನೆಯ ಮೂಲಕ ಸಾವಿರಕ್ಕೂ ಮಿಕ್ಕಿದ ದೇಶಾಭಿಮಾನಿಗಳು ಭಾಗವಹಿಸಿದರು. ನಂತರ ಶಾರದಾ ನಾಟ್ಯಾಲಯ ಹೊಸಬೆಟ್ಟು ಇವರ ತಂಡದವರು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು.


ಅತಿಥಿ ಗಣ್ಯರು ಎಲ್ಲರ ಜೊತೆಯಲ್ಲಿ ಗೋಪೂಜೆ ಮಾಡಲಾಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀಮತಿ ಅನುರಾಧ ರಾಜೀವ್ ಮತ್ತು ಸಾಮಾಜಿಕ ಕಾರ್ಯಕರ್ತ ಶ್ರೀನಿವಾಸ್ ಕುಳಾಯಿ ಮುಖ್ಯ ಅತಿಥಿಯಾಗಿದ್ದರು. ರಾಜೇಶ್ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಐ. ಮೋನಪ್ಪ ಮತ್ತು ಲಕ್ಷ್ಮಣ್ ಅಮೀನ್ ಕೋಡಿಕಲ್ ಉಪಸ್ಥಿತರಿದ್ದರು.



ಶಾರದಾ ನಾಟ್ಯಾಲಯದ ಭಾರತಿ ಸುರೇಶ್ ಮತ್ತು ಸುದರ್ಶನ್ ಹೊಸಬೆಟ್ಟು ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಮಾಧವ ಎಂ. ಕೆ. ದಿಕ್ಸೂಚಿ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ವಿಠ್ಠಲ್ ಸಾಲ್ಯಾನ್, ದಿನೇಶ್ ದೇವಾಡಿಗ, ರಾಜೇಶ್ ಸಾಯಿಜ್ಯೋತಿ, ಅಂಕುಶ್, ಜಯರಾಮ್, ಕೇಶವ, ರಾಜೇಶ್ ಶಿವಗಿರಿನಗರ, ಬಾಲಕೃಷ್ಣ ಉಪಸ್ಥಿತರಿದ್ದರು. ವರುಣ್ ಚೌಟ ಸ್ವಾಗತಿಸಿ, ಪ್ರಜ್ವಲ್ ಶೆಟ್ಟಿ ವಂದಿಸಿದರು. ವಿಜೆ. ಸುರೇಶ್ ಮತ್ತು ಸಂಜೀವ ಸುವರ್ಣ ನಿರೂಪಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top