ಈ ಕಾಲಘಟ್ಟದಲ್ಲಿ ಮೊಬೈಲ್ ಇಲ್ಲದೆ ಒಂದು ಕ್ಷಣವೂ ಇರಲು ಬಹುತೇಕ ಯಾರಿಗೂ ಸಾಧ್ಯವಾಗುತ್ತಿಲ್ಲ. ಮೊಬೈಲ್ ಇಲ್ಲದೆ ಕಾಲೇಜಿಗೆ ಹೋಗುವುದೇ ಕಷ್ಟವೆನಿಸುವ ಸ್ಥಿತಿಗೆ ನಾವು ಬಂದಿದ್ದೇವೆ.
ಒಂದು ದಿನ ಮುಂಜಾನೆ ಹನಿಹನಿಯಾಗಿ ಬೀಳುತ್ತಿದ್ದ ಮಂಜು, ಚಳಿಯ ನಡುವೆಯೇ ಕಾಲೇಜಿಗೆ ಹೊರಡುವ ಅವಸರದಲ್ಲಿ ನಾನು ಮೊಬೈಲ್ ಅನ್ನು ಮನೆಯಲ್ಲೇ ಬಿಟ್ಟುಬಂದೆ. ಆ ಒಂದು ದಿನ ಹೇಗಿತ್ತು ಎಂದು ಕಲ್ಪನೆ ಮಾಡಿಕೊಳ್ಳುವುದೇ ಅಸಾಧ್ಯ. ಮೊಬೈಲ್ ಒಂದು ನಿಮಿಷ ಕೈಯಲ್ಲಿ ಇಲ್ಲ ಅಂದರೆ ಏನನ್ನೋ ಕಳೆದುಕೊಂಡಂತೆ ವರ್ತಿಸುವ ಈ ಪ್ರಪಂಚದಲ್ಲೇ ನಾವು ಇಂದು ಬದುಕುತ್ತಿದ್ದೇವೆ.
ಮೊಬೈಲ್ ಇಲ್ಲದೆ ಕಾಲೇಜಿಗೆ ಹೋಗುವ ಕ್ಷಣಗಳು ನನಗೆ ಬಹಳ ಅಮೂಲ್ಯವೆನಿಸಿತು. ನಮ್ಮ ಸುತ್ತಮುತ್ತಲಿರುವ ಪ್ರಕೃತಿಯ ಸೌಂದರ್ಯವನ್ನು ಗಮನಿಸುತ್ತಾ, ಗೆಳತಿಯೊಂದಿಗೆ ಮನಸಾರೆ ಮಾತಾಡುತ್ತಾ ಕಾಲೇಜಿಗೆ ಬರುವ ಆ ಅನುಭವ ನಿಜಕ್ಕೂ ಸುಂದರವಾಗಿತ್ತು.
ಮೊಬೈಲ್ ಅನ್ನು ಬಿಟ್ಟು ಒಂದು ದಿನವೂ ಇರದವರನ್ನು ಇಂದು ಪ್ರಪಂಚದಲ್ಲಿ ಕಾಣುವುದು ಅಪರೂಪ. ಪ್ರತಿಯೊಬ್ಬರ ಕೈಯಲ್ಲೂ ಮೊಬೈಲ್ ಇದ್ದೇ ಇರುತ್ತದೆ. ಪುಸ್ತಕವನ್ನು ಬಿಟ್ಟು ಕಾಲೇಜಿಗೆ ಬರಬಹುದು, ಆದರೆ ಮೊಬೈಲ್ ಅನ್ನು ಬಿಟ್ಟು ಬರಲು ಹಲವರಿಗೆ ಸಾಧ್ಯವಿಲ್ಲ. ಕಾರಣ, ಇಂದಿನ ದಿನಗಳಲ್ಲಿ ನಾವು ಮೊಬೈಲ್‌ಗೆ ಅತಿಯಾದ ಅವಲಂಬಿತರಾಗಿದ್ದೇವೆ.
ಈ ಕಾಲದಲ್ಲಿ ಹುಟ್ಟಿದ ಮಕ್ಕಳೂ ಕೂಡ ಫೋನ್ ನೋಡದೇ ಯಾವುದೇ ಚಟುವಟಿಕೆಯಲ್ಲಿ ತೊಡಗುವುದಿಲ್ಲ. ಅಷ್ಟು ಆಳವಾಗಿ ಮೊಬೈಲ್ ಅವರ ಜೀವನದ ಭಾಗವಾಗಿಬಿಟ್ಟಿದೆ. ಊಟಕ್ಕೆ ಮೊಬೈಲ್, ಮಲಗಲು ಮೊಬೈಲ್- ಹೀಗೆ ನಮ್ಮ ಜೀವನಶೈಲಿಯೇ ಬದಲಾಗಿದೆ. ಹಿಂದೆ ಕಥೆ ಕೇಳಿ ಮಲಗುತ್ತಿದ್ದ ಮಕ್ಕಳು, ಇಂದೀಗ ರೀಲ್ಸ್ ನೋಡುತ್ತಾ ನಿದ್ರೆಗೆ ಜಾರುವ ದೃಶ್ಯಗಳನ್ನು ನಾವು ಕಾಣುತ್ತಿದ್ದೇವೆ.
ಮೊಬೈಲ್ ಅನ್ನು ಬಿಟ್ಟು ಬದುಕುವುದು ನಿಜಕ್ಕೂ ಉತ್ತಮ. ಆದರೆ ಎಲ್ಲ ಸಂದರ್ಭಗಳಲ್ಲೂ ಅದಿಲ್ಲದೇ ಬದುಕುವುದು ಸಾಧ್ಯವಿಲ್ಲ. ಅಗತ್ಯ ಮತ್ತು ಅತಿಯಾದ ಬಳಕೆಯ ನಡುವೆ ಸಮತೋಲನ ಸಾಧಿಸುವುದೇ ಇಂದಿನ ಜೀವನಕ್ಕೆ ಅತ್ಯಂತ ಅಗತ್ಯವಾಗಿದೆ.
- ಶಿವಾನಿ ಕೊಡಂಗಾಯಿ
ಪ್ರಥಮ ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಕಾಲೇಜು ಮಹಾವಿದ್ಯಾಲಯ, ( ಸ್ವಾಯತ್ತ ) ಪುತ್ತೂರು
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


