ಲಕ್ಷ್ಮಣ ಮರಕಡ ಅವರಿಗೆ ಭಗವದ್ಗೀತಾಮೃತ ಪುರಸ್ಕಾರ, ಫೆ.12ರಂದು ಪ್ರದಾನ

Upayuktha
0


ಮಂಗಳೂರು: ಶ್ರೀ ಕಟೀಲು ಮೇಳದ ಕಲಾವಿದ, ಯಕ್ಷ ಗುರು ಲಕ್ಷ್ಮಣ ಕುಮಾರ್ ಮರಕಡ ಅವರಿಗೆ ಕದ್ರಿಯಲ್ಲಿ ಶ್ರೀ ಭಗವದ್ಗೀತಾಮೃತ ಪುರಸ್ಕಾರ ದೊಂದಿಗೆ "ಯಕ್ಷ ಸವ್ಯಸಾಚಿ" ಬಿರುದು ನೀಡಿ ಗೌರವಿಸಲಾಗುವುದು ಎಂದು ಸಂಘಟಕ ಕದ್ರಿ ನವನೀತ ಶೆಟ್ಟಿ ತಿಳಿಸಿದ್ದಾರೆ. ಫೆಬ್ರವರಿ 12 ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು.


ಲಕ್ಷ್ಮಣ ಅವರು ತನಿಯಪ್ಪ ಕೋಟ್ಯಾನ್ ಲಿಂಗಮ್ಮ ದಂಪತಿಗಳ ಸುಪುತ್ರರು. ಡ್ರಾಫ್ಟ್ ಮೆನ್ ಮೆಕಾನಿಕಲ್ ತಾಂತ್ರಿಕ ಶಿಕ್ಷಣ ಪಡೆದ ವಿದ್ಯಾವಂತ. 1992 ರಲ್ಲಿ ಶ್ರೀ ಶಿವರಾಮ ಪಣಂಬೂರು ಇವರ ಗುರುತ್ವದಲ್ಲಿ "ಫಲ್ಗುಣಿ ಯಕ್ಷರಂಗ ಮರಕಡ" ದಲ್ಲಿ ರಂಗಪ್ರವೇಶಗೈದ ಯಕ್ಷ ಪ್ರೇಮಿ. ಗಣೇಶ ಪುರ ಮೇಳ, ಮತ್ತು ಸುರತ್ಕಲ್ ಸದಾಶಿವ ಮಹಾಗಣಪತಿ ಮೇಳಗಳಲ್ಲಿ 4 ವರ್ಷ, ತಲಕಳ ಮೇಳದಲ್ಲಿ 4 ವರ್ಷ, ಬಪ್ಪನಾಡು ಮೇಳ 1 ವರ್ಷ, ಉಳ್ಳಾಲ ಚೀರುಂಭ ಭಗವತೀ ಮೇಳ 3 ವರ್ಷ, ಸಸಿಹಿತ್ಲು ಭಗವತಿ ಮೇಳ 1 ವರ್ಷ, ಎಡನೀರು ಮೇಳ 11 ವರ್ಷ, ಕಟೀಲು  ಮೇಳದಲ್ಲಿ ಈಗ 7ನೇ ವರ್ಷದ  ತಿರುಗಾಟ ಮಾಡುತ್ತಿರುವ ನಿಷ್ಠಾವಂತ ಕಲಾಸಾಧಕ.



2007 ರಲ್ಲಿ ಮರಕಡದಲ್ಲಿ ಶುಭವರ್ಣ ಯಕ್ಷ ಸಂಪದ (ರಿ.) ಎಂಬ ಸಂಸ್ಥೆಯನ್ನು ಸ್ಥಾಪಿಸಿ ಪ್ರಶಸ್ತಿ, ಸಂಮಾನ, ಗೌರವಾರ್ಪಣೆ, ಪ್ರತಿಭಾ ಪುರಸ್ಕಾರ, ಯಕ್ಷಗಾನ ತರಬೇತಿ ನೀಡುತ್ತಿರುವ ಯಕ್ಷಗಾನ ಸಂಘಟಕ.


ಕಾಸರಗೋಡು ಮತ್ತು ಮಂಗಳೂರು ಪರಿಸರದಲ್ಲಿ ಯಕ್ಷಗಾನ ಶಿಕ್ಷಕನಾಗಿ ತರಗತಿ ನಡೆಸಿ ಸಮೃದ್ಧ ಶಿಷ್ಯ ಗಡಣ ಹೊಂದಿರುವ ಯಕ್ಷ ಗುರು. ಅಮೇರಿಕಾ, ಮಸ್ಕತ್, ಆಸ್ಟ್ರೇಲಿಯಾ, ದುಬೈ ದೇಶಗಳಲ್ಲಿ ಪುಂಡು, ಸ್ತ್ರೀ, ರಾಜ ವೇಷ, ಹಾಸ್ಯ, ಎದುರು ವೇಷಗಳೆಲ್ಲ ವನ್ನೂ ಸಮರ್ಥವಾಗಿ ನಿರ್ವಹಿಸುತ್ತಿರುವ  ಅಪೂರ್ವ ಯಕ್ಷ ಕಲಾ ಸಾಧಕ. ಲಾಲಿತ್ಯಪೂರ್ಣವಾಗಿ ಶ್ರೀಕೃಷ್ಣನ ಪಾತ್ರ ನಿರ್ವಹಿಸುತ್ತಿರುವ ಯಕ್ಷಪಟು.


ಅವರಿಗೆ ಕತಾರ್ ನಲ್ಲಿ ಉದ್ಯೋಗಿಗಳಾಗಿರುವ ಕೊರಗಪ್ಪ ಸಸಿಹಿತ್ಲು ಮತ್ತು ಸವಿತಾ ಸಸಿಹಿತ್ಲು ಪರಿವಾರದ ಶ್ರೀ ಕಟೀಲು ಮೇಳದ "ಶ್ರೀ ದೇವೀ ಮಹಾತ್ಮೆ" ಸೇವೆ ಬಯಲಾಟದ ವೇದಿಕೆಯಲ್ಲಿ ವೇದಮೂರ್ತಿ ಕಟೀಲು ಶ್ರೀ ಲಕ್ಷ್ಮೀ ನಾರಾಯಣ ಆಸ್ರಣ್ಣರ ಉಪಸ್ಥಿತಿಯಲ್ "ಯಕ್ಷ ಸವ್ಯಸಾಚಿ" ಬಿರುದು ನೀಡಿ ಗೌರವಿಸಲಾಗುವುದು ಎಂದು ಸಂಘಟಕ ಕದ್ರಿ ನವನೀತ ಶೆಟ್ಟಿ ತಿಳಿಸಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top