ಸುರತ್ಕಲ್: ಹೊನ್ನೆಕಟ್ಟೆ ಫ್ರೆಂಡ್ಸ್ ಸರ್ಕಲ್ ಕುಳಾಯಿ ಇದರ 39ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯು ಶ್ರೀ ಸದಾಶಿವ ಮಯ್ಯರವರ ಪೌರೋಹಿತ್ಯದಲ್ಲಿ ಜರಗಿತು. ಭಜನೆ ಕಾರ್ಯಕ್ರಮವನ್ನು ಶ್ರೀಮಾತಾ ಮಹಿಳಾ ಭಜನಾ ಮಂಡಳಿ ಕುಳಾಯಿ ಹೊಸಬೆಟ್ಟು ಇದರ ಅಧ್ಯಕ್ಷೆ ಶ್ರೀಮತಿ ರಮಾ ವೆಂಕಟ್ರಾವ್ ರವರು ಉದ್ಘಾಟಿಸಿದರು. ಮಯೂರಿ ಮತ್ತು ತಂಡದವರಿಂದ ಕೊರೋಕೆ ಭಕ್ತಿ ಗೀತೆಗಳ ಗೀತಾ ಗಾಯನ ನಂತರ ಮಹಾಪೂಜೆ ಪ್ರಸಾದ ವಿತರಣೆ ಹಾಗೂ ಅನ್ನ ಪ್ರಸಾದ ವಿತರಣೆ ಜರಗಿತು.
ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಶ್ರೀ ಸುರೇಶ ಕೊಟ್ಟಾರಿ ಅಧ್ಯಕ್ಷರು ಪುರಾತನ ಕೋಟೆದ ಬಬ್ಬು ದೈವಸ್ಥಾನ ಕುಳಾಯಿ ವಹಿಸಿದ್ದು ತಮ್ಮ ಅಧ್ಯಕ್ಷ ಭಾಷಣದಲ್ಲಿ ಹೊನ್ನೆಕಟ್ಟೆ ಪ್ರೆಂಡ್ಸ್ ಸರ್ಕಲ್ ನ ಸಾಮಾಜಿಕ ಧಾರ್ಮಿಕ ಶೈಕ್ಷಣಿಕ ವೈದ್ಯಕೀಯ ಸೇವೆಗಳ ಬಗ್ಗೆ ಶ್ಲಾಘನೆ ವ್ಯಕ್ತ ಪಡಿಸಿ ಗೌರವ ನೀಡಿ ಗೌರವ ಪಡೆಯಿರಿ ತತ್ವವನ್ನು ಪಾಲನೆ ಮಾಡುತ್ತಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ First Abu Dhabi Bank Mumbai ಇದರ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶ್ರೀ ಅಜಿತ್ ಮೈರ್ಪಾಡಿ ರವರು ಭಾರತ ದೇಶದ ಪ್ರಧಾನ ಮಂತ್ರಿಗಳು ಕುಳಾಯಿ ಆಗಮಿಸುವಂತೆ ಪ್ರಯತ್ನಿಸಬೇಕು ಎಂದರು.
ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಕುಳಾಯಿ ವೈಧ್ಯಾಧಿಕಾರಿ ಶ್ರೀಮತಿ ಅಪರ್ಣಾ ರಾವ್ ರವರು ಸರಕಾರದ ವೈದ್ಯಕೀಯ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದ್ದರು. ಡಾ ಜಗದೀಶ ರಾವ್ ಕೆಎಂಸಿ, ಶ್ರೀ ಪದ್ಮನಾಭ ಯಸ್ ಕರ್ಕೇರ ವೀರಕೇಸರಿ ತಡಂಬೈಲ್, ಶ್ರೀಮತಿ ವಿನಯ ವಿಠ್ಠಲ್ ಸಾಲ್ಯಾನ್ ಯುವ ವಾಹಿನಿ ಮಹಿಳಾ ಘಟಕ ಮಂಗಳೂರು ಹೊನ್ನೆಕಟ್ಟೆ ಪ್ರೆಂಡ್ಸ್ ಸರ್ಕಲ್‌ನ ಕಾರ್ಯ ಚಟುವಟಿಕೆ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಈ ಸಂದರ್ಭದಲ್ಲಿ ಕುಳಾಯಿ ಗುತ್ತುವಿನ ಗುತ್ತಿನಾರ್ ಪಟೇಲ್ ಶಂಕರ ರೈ, ದ ಕ ಜಿಲ್ಲಾ ರಾಜ್ಯೋತ್ಸವ 2025 ಪುರಸ್ಕೃತೆ ಶ್ರೀಮತಿ ಪೂರ್ಣಿಮಾ ಯುತೀಶ್ ರೈ, ಹಿರಿಯ ನಾಗರಿಕ ಮಹಿಳೆ ಶ್ರೀಮತಿ ರಾಧಮ್ಮ ಪೂಜಾರಿ, ಹಿರಿಯ ಸದಸ್ಯರು ಸದಾನಂದ ದೇವಾಡಿಗ ಎಚ್, ಭಾರತದ ಕಬಡ್ಡಿ ತಂಡದ ಸದಸ್ಯರು ಕುಮಾರಿ ಧನಲಕ್ಷ್ಮೀ ಪೂಜಾರಿ ಇಡ್ಯಾ, IBR ಸಾಧಕರು ಶ್ರೀ ಹರ್ಷಿತ್ ಕುಳಾಯಿ ಮತ್ತು ಯಮ್ ಎ ರಾಂಕ್ ವಿಜೇತೆ ಶ್ರೀಮತಿ ಅಶ್ವಿನಿ ಐತಾಳ್ ಹೊಸಬೆಟ್ಟು ರವರುಗಳನ್ನು ಸನ್ಮಾನಿಸಲಾಯಿತು.
ಸುಬ್ರಹ್ಮಣ್ಯ ಐತಾಳ್ ಪ್ರಾರ್ಥನೆಗೈದು, ಪ್ರಕಾಶ್ ಎಂ ಸ್ವಾಗತಿಸಿದರು. ಶ್ರೀರಂಗ ಹೊಸಬೆಟ್ಟು ಪ್ರಾಸ್ತಾವಿಕ ಮಾತನಾಡಿ, ಶ್ರೀ ಶ್ರೀಧರ ಭಟ್ ಕೆ ಶುಭ ಹಾರೈಸಿದರು. ಕಾರ್ಯದರ್ಶಿ ಶ್ರೀಹರಿ ಎಂ ರವರು ವರದಿ ವಾಚಿಸಿದರು. ರಾಕೇಶ್ ಹೊಸಬೆಟ್ಟು ಧನ್ಯವಾದ ನೀಡಿದ್ದು ಪವನ್ ಮೈರ್ಪಾಡಿ ಮತ್ತು ಶ್ರೀಮತಿ ದೇವಿಕಾ ಸಾಮಗರವರು ನಿರೂಪಣೆ ಮಾಡಿದರು. ಯೋಗೀಶ ಸನಿಲ್ ಕುಳಾಯಿ, ಚಂದ್ರಶೇಖರ ಕೆ ಪಿ, ನಾಗರಾಜ ಎಚ್ ಪಿ, ರೋಹಿಣೇಶ ದೇವಾಡಿಗ, ಶ್ರೀಮತಿ ಪದ್ಮಾಕ್ಷಿ ಶ್ರೀಹರಿ ಎಂ, ಶ್ರೀಮತಿ ಶರ್ಮಿಳಾ ಕುಳಾಯಿ, ಶ್ರೀಮತಿ ದೇವಿಕಾ ಸಾಮಗ ರವರು ಅಭಿನಂದನಾ ಭಾಷಣ ಮಾಡಿದರು.
ರತನ್ ಕುಮಾರ್, ರವಿಚಂದ್ರ ಎಂ, ಶ್ರೀಮತಿ ಸ್ವಾತಿ ವಿಕ್ರಮ್ ಮೈರ್ಪಾಡಿ, ರಾಘವೇಂದ್ರ ಕೆ ಆರ್, ಶ್ರೀಮತಿ ಶೋಭಾ ರಮೇಶ್ ರಾವ್, ಶ್ರೀಮತಿ ಚಂದ್ರಿಕಾ ಪ್ರಸನ್ನ ಮೈರ್ಪಾಡಿ, ಗಿರೀಶ ಪಿ ವಿ ಅಭಿನಂದನಾ ಪತ್ರ ವಾಚಿಸಿದರು. ಸಂಘದ ಅಧ್ಯಕ್ಷ ವಾಸುದೇವ ದೇವಾಡಿಗ, ರಾಜೇಂದ್ರ ಎಚ್ ಯು, ರಾಮಚಂದ್ರ ಶೆಟ್ಟಿ, ಗಣೇಶ್ ಎಂ ಶಾಂಭಟ್, ಶ್ರೀನಿವಾಸ ಕುಳಾಯಿ, ಶ್ರೀಹರಿ ಎಂ, ಶ್ರೀ ಪ್ರಸನ್ನ ಮೈರ್ಪಾಡಿ ಮೊದಲಾದವರು ಉಪಸ್ಥಿತರಿದ್ದರು.
ವಿದುಷಿ ಶ್ರೀಮತಿ ಭಾರತಿ ಸುರೇಶ ರವರ ಶಿಷ್ಯೆ ವಿದುಷಿ ಕುಮಾರಿ ಶ್ರದ್ದಾ ರವರಿಂದ ಭರತ ನಾಟ್ಯ ಮತ್ತು ತೆಲಿಕೆದ ಬೊಳ್ಳಿ ಡಾ ದೇವದಾಸ ಕಾಪಿಕಾಡ್ ನಿರ್ದೇಶನದ ಚಾ ಪರ್ ಕ್ಕ ಕಲಾವಿದೆರ್ ಕುಡ್ಲ ದವರಿಂದ ತುಳು ಹಾಸ್ಯಮಯ ನಾಟಕ ಎನ್ನನೇ ಕಥೆ ಪ್ರದರ್ಶನಗೊಂಡಿತು. ಈ ಸಂದರ್ಭದಲ್ಲಿ ಪುರಾತನ ಕೋಟೆದ ಬಬ್ಬು ದೈವಸ್ಥಾನ ಕುಳಾಯಿ ಇದರ ನಿವೇಶನ ಖರೀದಿಗಾಗಿ 25,000 ರೂ ಧನಸಹಾಯ ನೀಡಲಾಯಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

