ಕೂಟ ಸಮುದಾಯದ ಕೇಂದ್ರ ಅಧಿವೇಶನ: ಕರಪತ್ರ ಬಿಡುಗಡೆ

Upayuktha
0


ಮಂಗಳೂರು: ಕೂಟ ಸಮುದಾಯದ ಮಹತ್ವದ ಕೇಂದ್ರ ಅಧಿವೇಶನವು ಸೆಪ್ಟೆಂಬರ್ ೨೭ರಂದು ಮಂಗಳೂರು ನಗರದ ಸಂಘನಿಕೇತನದಲ್ಲಿ ನಡೆಯಲಿದ್ದು, ಇದರ ಕರಪತ್ರವನ್ನು ಭಾನುವಾರ ಪಾಂಡೇಶ್ವರದಲ್ಲಿರುವ ಕೂಟ ಸಭಾ ಭವನದಲ್ಲಿ ಬಿಡುಗಡೆಗೊಳಿಸಲಾಯಿತು.


ವಿಶ್ವದ ನಾನಾ ಭಾಗಗಳಲ್ಲಿ ವಾಸಿಸುವ ಕೂಟ ಸಮುದಾಯದ ಸದಸ್ಯರನ್ನು ಒಂದೇ ವೇದಿಕೆಯಡಿಗೆ ತರಲು, ಪರಸ್ಪರ ಪರಿಚಯ ಮತ್ತು ವಿಚಾರ ವಿನಿಮಯದ ಮೂಲಕ ಸಾಂಘಿಕ ಬೆಳವಣಿಗೆ ಸಾಧಿಸುವ ಉದ್ದೇಶದಿಂದ ಈ ಅಧಿವೇಶನ ಆಯೋಜಿಸಲಾಗುತ್ತಿದೆ ಎಂದು ಕೇಂದ್ರ ಸಮಿತಿಯ ಅಧ್ಯಕ್ಷ ಸತೀಶ್ ಹಂದೆ ತಿಳಿಸಿದರು. ಮಂಗಳೂರು ಅಂಗ ಸಂಸ್ಥೆಯು ಈ ಬಾರಿ ಅಧಿವೇಶನದ ಜವಾಬ್ದಾರಿ ಹೊತ್ತು ಮುನ್ನಡೆಸುತ್ತಿರುವುದನ್ನು ಶ್ಲಾಘಿಸಿ, ಅಗತ್ಯವಿರುವ ಎಲ್ಲಾ ರೀತಿಯ ಸಹಕಾರವನ್ನು ಕೇಂದ್ರ ಸಮಿತಿ ನೀಡಲಿದೆ ಎಂದು ಅವರು ಭರವಸೆ ನೀಡಿದರು.


ಮಂಗಳೂರು ಅಂಗ ಸಂಸ್ಥೆಯ ಅಧ್ಯಕ್ಷ ಶ್ರೀಧರ ಹೊಳ್ಳ ಮಾತನಾಡಿ, “ಕೂಟ ಸಮಾಜದ ಇತಿಹಾಸಯಾತ್ರೆಯಲ್ಲಿ ಹೊಸ ಅಧ್ಯಾಯವನ್ನು ಬರೆಯುವ ದೃಢಸಂಕಲ್ಪದೊಂದಿಗೆ, ಪ್ರಥಮ ಬಾರಿಗೆ ಮಂಗಳೂರು ಘಟಕದ ನೇತೃತ್ವದಲ್ಲಿ ಕೇಂದ್ರ ಅಧಿವೇಶನವನ್ನು ಆಯೋಜಿಸುತ್ತಿದ್ದೇವೆ. ಇದು ಕೇವಲ ಒಂದು ಕಾರ್ಯಕ್ರಮವಲ್ಲ; ಸಂಘಟನೆಯ ಅಂತರಂಗ ಶಕ್ತಿ, ಏಕತಾ ಸ್ಫೂರ್ತಿ ಹಾಗೂ ಸಮಾಜಮುಖಿ ಬದ್ಧತೆಯನ್ನು ರಾಷ್ಟ್ರಮಟ್ಟದಲ್ಲಿ ಘೋಷಿಸುವ ಐತಿಹಾಸಿಕ ಹೆಜ್ಜೆಯಾಗಿದೆ,” ಎಂದರು.


ಸಂಘಟನೆಯ ಮೂಲ ಮೌಲ್ಯಗಳು, ಸಾಧನೆಗಳ ಶಿಖರಗಳು ಮತ್ತು ಭವಿಷ್ಯದ ದಿಕ್ಕುನಿರ್ದೇಶಗಳನ್ನು ದೇಶದಾದ್ಯಂತ ಪರಿಣಾಮಕಾರಿಯಾಗಿ ಸಾರಲು ಪ್ರತಿಯೊಬ್ಬ ಸದಸ್ಯರ ಸಕ್ರಿಯ ಪಾಲ್ಗೊಳ್ಳುವಿಕೆ, ಹೃದಯಪೂರ್ವಕ ಸಹಕಾರ ಹಾಗೂ ಅಚಲ ಬೆಂಬಲ ಅತ್ಯಾವಶ್ಯಕವೆಂದು ಅವರು ಮನವಿ ಮಾಡಿದರು.


ಉದ್ಯಮಿ ರಘುನಾಥ ಸೋಮಯಾಜಿ ಮಾತನಾಡಿ, “ಎಲ್ಲರನ್ನು ಒಂದೇ ವೇದಿಕೆಯಡಿಗೆ ತರಲು ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಇದು ಮಾದರಿ ಅಧಿವೇಶನವಾಗಿ ಹೊರಹೊಮ್ಮಲಿದೆ. ಇದಕ್ಕಾಗಿ ಸಮುದಾಯದ ಸಮಗ್ರ ಸಹಕಾರ ಅಗತ್ಯ,” ಎಂದು ಹೇಳಿದರು.


ಈ ಸಂದರ್ಭದಲ್ಲಿ ಉದ್ಯಮಿ ವಿಶ್ವೇಶ್ವರ ಬದೆವಿದೆ, ಕೇಂದ್ರ ಉಪಾಧ್ಯಕ್ಷ ನ್ಯಾಯವಾದಿ ಸದಾಶಿವ ಐತಾಳ್, ಕಾರ್ಯದರ್ಶಿ ಗೋಪಾಲಕೃಷ್ಣ ಮಯ್ಯ, , ಉಪಾಧ್ಯಕ್ಷ ಪ್ರಭಾಕರ ಐತಾಳ್ ಹಾಗೂ ಸದಸ್ಯರಾದ ಚಂದ್ರಮೋಹನ್, ರಂಗನಾಥ ಐತಾಳ್, ಗಣೇಶ ಎಮ್ಮೆಕೆರೆ, ಪ್ರಸನ್ನ ಇರುವೈಲು, ಪ್ರವೀಣ್ ಮಯ್ಯ  ವ್ಯವಸ್ಥಾಪಕ ಶಿವರಾಮ ರಾವ್, ಮಹಿಳಾ ಸಮಿತಿಯ ಪದಾಧಿಕಾರಿಗಳು ಸೇರಿದಂತೆ ವಿವಿಧ ಅಂಗ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top