ಕಾಸರಗೋಡು: ಶ್ರೀ ಮೂಕಾಂಬಿಕಾ ಸನ್ನಿಧಿಯಲ್ಲಿ ಸಾಂಸ್ಕೃತಿಕ ವೈವಿಧ್ಯ

Upayuktha
0


ಕಾಸರಗೋಡು: ಡಾ. ವಾಣಿಶ್ರೀ ಸಾರಥ್ಯದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯ ಕಲಾ ಮಾಣಿಕ್ಯಗಳು 172 ನೇ ಸಾಹಿತ್ಯ ಗಾನ ನೃತ್ಯ ವೈಭವವನ್ನು ಕಾಸರಗೋಡು ಉಳ್ಳೋಡಿಯಲ್ಲಿರುವ ಜಾಧವ್ ಮನೆತನದ ಕುಲದೇವರಾದ ಶ್ರೀ ಮೂಕಾಂಬಿಕಾ ದೇವರ ಸನ್ನಿಧಿಯಲ್ಲಿ ಬಹಳ ವಿಸ್ತಾರವಾಗಿ, ವಿಶೇಷವಾಗಿ ಪ್ರಸ್ತುತ ಪಡಿಸಿ ಮೆಚ್ಚುಗೆ ಪಡೆದರು.


ಇತ್ತೀಚೆಗೆ ಶ್ರೀ ಮೂಕಾಂಬಿಕಾ ಅಮ್ಮನವರಿಗೆ ಕಲಶಾಭಿಶೇಕ ಮತ್ತು ತದನಂತರ ನಡೆದ ಚಂಡಿಕಾ ಹೋಮವು ಬಲು ವಿಜೃಂಭಣೆಯಿಂದ ನಡೆದ ಸoದರ್ಭದಲ್ಲಿ ಈ ಕಾರ್ಯಕ್ರಮ ಅಚ್ಚುಕಟ್ಟಾಗಿ ಮೂಡಿಬಂತು. ಕಾರ್ಯಕ್ರಮದ ನಿರೂಪಣೆ ಸಂಗೀತ ಕಲಾರತ್ನ ರಾಜೇಶ್ ಶೆಟ್ಟಿ ಅವರಿಂದ ಮೂಡಿ ಬಂತು. ಸಾಹಿತ್ಯ ಪ್ರಸ್ತುತಿ ಡಾ. ವಾಣಿಶ್ರೀ ಸಾದರ ಪಡಿಸಿದರೆ ಮೋಹನ ಅವರು ಸ್ವಾಗತಿಸಿದರು.


ಆರಂಭದಲ್ಲಿ ವಿಸ್ಮಯ ವಿನೋದ್, ಸನುಷ ಸುನಿಲ್, ಶ್ರೇಯ ಸೂರ್ಯ, ಅಹನಾ ರಾವ್, ನವ್ಯಶ್ರೀ ಕುಲಾಲ್, ಜೀವಿತ, ದಾನ್ವಿಕ. ಸಾನಿಕ, ಶರಣ್ಯ ಶೆಟ್ಟಿ, ಅಮೃತ್, ತೇಜಸ್ವಿನಿ, ಐಶ್ವರ್ಯ. ಹಶ್ವಿನ್, ಖುಷಿ ಹಶ್ವಿಕ್. ಮಧುಲತಾ ಪುತ್ತೂರು, ಶ್ರೀನಂದ. ಆರ್ಯನಂದ ಪೂರ್ವಂಕ್, ಯೆಶಿಕ, ಹಂಶಿತ್ ಕುಲಾಲ್  ಅವರು ತಮ್ಮ ಸುಂದರ ನೃತ್ಯಗಳನ್ನು ವೇದಿಕೆಯಲ್ಲಿ ಪ್ರಸ್ತುತಪಡಿಸಿದರು.


ನಂತರ ಮಾನ್ವಿ ಸಾಗರ್ ಅವರು ತಮ್ಮ ಯೋಗ ಡ್ಯಾನ್ಸ್ ಪ್ರದರ್ಶಿಸಿ ಸಭಿಕರ ಮೆಚ್ಚುಗೆಯ ಚಪ್ಪಾಳೆಗಳನ್ನು ಗಿಟ್ಟಿಸಿಕೊಂಡರು. ಭಾಗ್ಯಲಕ್ಷ್ಮಿ ನೃತ್ಯ ತಂಡವು ತಮ್ಮ ಮೆಚ್ಚಿನ ನೃತ್ಯಗಳನ್ನು ಪ್ರದರ್ಶಿಸಿ ಜನರ ಮನಸೂರೆಗೊಂಡರು. ಸರಸ್ವತಿ, ಸುನಿತಾ ಹಾಗೂ ಲಾವಣ್ಯ ಅವರ ಸಮೂಹ ಯಕ್ಷನೃತ್ಯ ವೇದಿಕೆಗೆ ಕಳೆ ಕೊಟ್ಟಿತು.


ಈ ಮಧ್ಯೆ ಡಾ. ವಾಣಿಶ್ರೀ ಅವರು ಸ್ವತಃ ಕನ್ನಡಾಂಬೆಯ ಕೊಂಡಾಡುವ ಕನ್ನಡ ಹಾಡಿಗೆ ಹೆಜ್ಜೆ ಹಾಕಿ ಪ್ರೇಕ್ಷಕರ ಮನಕ್ಕೆ ಕನ್ನಡದ ಸ್ಪೂರ್ತಿಯನ್ನು ಹಂಚಿದರು.


ಗಾನ ವೈಭವದ ಅಂಗವಾಗಿ ಸುಸ್ವರದ ಹಾಡುಗಳನ್ನು ವಿವಿಧ ಸುಮಧುರ ಗಾಯಕರು ಹಾಡಿದರು. ಕನ್ನಡ ಸಂಸ್ಥೆಯ ಅನರ್ಘ್ಯ ರತ್ನಗಳಾದ  ದಿವಾಕರ ಕಾಸರಗೋಡು, ಸುರೇಶ್ ಪೈಕ, ಸೀತಾರಾಮ್ ಮಲ್ಲ, ಮುರಳಿ ನೀರ್ಚಾಲ್, ವಿಶ್ವನಾಥ ಪುತ್ತಿಗೆ,ಅಮೃತ್, ಸುನಿತಾ, ರೇಖಾಮಧು ಮಲ್ಲ, ಮೇಘರಾಜ್ ಆಚಾರ್ಯ ಮತ್ತು ರಾಜೇಶ್ ರೈ ಎಂಬವರು ಈ ಗಾನವೈಭವದ ವೇದಿಕೆಯಲ್ಲಿ ಸಂದರ್ಭೋಚಿತವಾಗಿ ತಮ್ಮ ಸಿರಿಕಂಠದ ನಿನಾದವನ್ನು ವೇದಿಕೆಯಿಂದ ಮೊಳಗಿಸಿದರು.


ಕಾರ್ಯಕ್ರಮದ ಕೊನೆಗೆ ಎಲ್ಲಾ ಕಲಾವಿದರನ್ನು ದೇವಸ್ಥಾನದ ವತಿಯಿಂದ ಶಾಲು ಸ್ಮರಣಿಕೆ, ದೇವರ ಪ್ರಸಾದ ನೀಡಿ ಗೌರವಿಸಲಾಯಿತು. ಡಾ. ವಾಣಿಶ್ರೀ ಕಾಸರಗೋಡು ಅವರ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯ ಕಲಾ ಕಾರ್ಯಕ್ರಮಗಳನ್ನು ಪ್ರಶಂಸಿಸುತ್ತಾ ಮುಂಡೋಡಿನ ಹಿರಿಯ ಕಾರ್ಯಕರ್ತರು ಹಾಗೂ ದೇವಸ್ಥಾನದ ಪದಾಧಿಕಾರಿಗಳು  ಸೂಕ್ತವಾಗಿ ಶಾಲು ಹೊದಿಸಿ ಸ್ಮರಣಿಕೆ ಫಲ ಪುಷ್ಪ ಪ್ರಸಾದ ನೀಡಿ ಸನ್ಮಾನಿಸಿದರು. ವೇದಿಕೆಯಲ್ಲಿ ಪದ್ಮನಾಭ ರಾವ್, ಮೋಹನ, ಅಚ್ಯುತ ಭಟ್, ಶಶಿಕಲಾ ಮುಂತಾದ ಗಣ್ಯರಿದ್ದರು.


ವರದಿ: ಶ್ರೀಕೃಷ್ಣ ಕಾಸರಗೋಡು


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top