ಕಣಚೂರು ಆಯುರ್ವೇದ ಕಾಲೇಜು ಆಸ್ಪತ್ರೆಯಿಂದ ಬೃಹತ್ ಉಚಿತ ವೈದ್ಯಕೀಯ ಶಿಬಿರ

Upayuktha
0


ನಾಟೆಕಲ್: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಇದರ ಪ್ರಧಾನ ಕಚೇರಿ “ಆತ್ಮಶಕ್ತಿ ಸೌಧ” (ಬೈರಾಡಿಕೆರೆ ಹತ್ತಿರ, ಪಡೀಲು)ದಲ್ಲಿ ನಡೆದ ಆರೋಗ್ಯ ಸೇವಾ ಸಂಗಮ–100ನೇ ಬೃಹತ್ ಉಚಿತ ವೈದ್ಯಕೀಯ, ನೇತ್ರ, ದಂತ ಹಾಗೂ ರಕ್ತದಾನ ಶಿಬಿರ ಮತ್ತು ವೈದ್ಯ ಸೇವಾ ಸಾಧಕರ ಅಭಿನಂದನಾ ಕಾರ್ಯಕ್ರಮದ ಅಂಗವಾಗಿ, 2026 ಫೆಬ್ರವರಿ 1ರಂದು (ಆದಿತ್ಯವಾರ) ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1.00ರವರೆಗೆ ಕಣಚೂರು ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ, ನಾಟೆಕಲ್–ಮಂಗಳೂರು ವತಿಯಿಂದ ಉಚಿತ ವೈದ್ಯಕೀಯ ಶಿಬಿರವನ್ನು ಆಯೋಜಿಸಲಾಯಿತು.


ಶಿಬಿರದಲ್ಲಿ ವಿಶೇಷ ತಜ್ಞ ವೈದ್ಯರ ಸೇವೆಯೊಂದಿಗೆ ರಕ್ತದಾನ, ಸಾಮಾನ್ಯ ವೈದ್ಯಕೀಯ ತಪಾಸಣೆ, ರಕ್ತದ ಒತ್ತಡ ಮತ್ತು ಮಧುಮೇಹ ತಪಾಸಣೆ, ಸ್ತನ ಪರೀಕ್ಷೆ, ಗರ್ಭಕಂಠ ತಪಾಸಣೆ ಸೇರಿದಂತೆ ವಿವಿಧ ಆರೋಗ್ಯ ತಪಾಸಣೆಗಳನ್ನು ನಡೆಸಲಾಗಿದ್ದು, ಅಗತ್ಯವಿರುವವರಿಗೆ ಉಚಿತ ಔಷಧಿಗಳನ್ನು ವಿತರಿಸಲಾಯಿತು.


ಕಾರ್ಯಕ್ರಮವನ್ನು ಡಾ. ಸುರೇಶ್ ನೆಗಳಗುಳಿ ಅವರು ಮಾತಾ ಅಮೃತಾನಂದಮಯೀ ಆಶ್ರಮದ ಮಾತೆ, ಅಣ್ಣಯ್ಯ ಕುಲಾಲ್, ಡಾ. ರೋಷನ್, ಕೆಎಂಸಿ ಆಸ್ಪತ್ರೆಯ ಡಾ. ಪ್ರಶಾಂತ್, ಡಾ. ಮನೀಶ್ ಸೇರಿದಂತೆ ಇತರ ಗಣ್ಯರೊಂದಿಗೆ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.


ಈ ಸಂದರ್ಭದಲ್ಲಿ ಕಣಚೂರು ಆಯುರ್ವೇದ ವಿಭಾಗದ ವೈದ್ಯಕೀಯ ಅಧೀಕ್ಷಕ ಡಾ. ಕಾರ್ತಿಕೇಯ ಪ್ರಸಾದ್, ಡಾ. ಸಲೀಮಾ, ಡಾ. ರಾಜೇಶ್ ಚಂದ್ರ, ಡಾ. ನಿಯಾನಾ ಸೇರಿದಂತೆ ವೈದ್ಯರು ಹಾಗೂ ನರ್ಸಿಂಗ್ ಸಿಬ್ಬಂದಿಗಳಾದ ರಾಜಶ್ರೀ, ಕೃತಿಕಾ, ಫಾರ್ಮಸಿ ವಿಭಾಗದ ಪ್ರೀತಿ, ಸ್ವಾಗತ, ದೀಕ್ಷಾ ಶಿಬಿರದ ಯಶಸ್ಸಿಗೆ ಶ್ರಮಿಸಿದರು. ಕಾರ್ಯಕ್ರಮದ ಸಂಪೂರ್ಣ ಉಸ್ತುವಾರಿಯನ್ನು ರಿಕ್ಸನ್ ಅವರು ವಹಿಸಿಕೊಂಡಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top