ಮೆಸ್ಕಾಂ ಸಾಧನೆಗೆ ಕೆಇಆರ್‌ಸಿ ಅಧ್ಯಕ್ಷ ಪಿ. ರವಿಕುಮಾರ್ ಮೆಚ್ಚುಗೆ

Upayuktha
0

  • ಕೆಇಆರ್‌ಸಿ ವತಿಯಿಂದ ಮೆಸ್ಕಾಂ 2024-25ನೇ ಸಾಲಿನ ವಾರ್ಷಿಕ ಕಾರ್ಯನಿರ್ವಹಣಾ ಪರಿಶೀಲನೆ
  • ಪ್ರಗತಿ ಮತ್ತು ಸಾಧನೆಗಳ ವಿವರಣೆ ನೀಡಿದ ಮೆಸ್ಕಾ೦ ವ್ಯವಸ್ಥಾಪಕ ನಿರ್ದೇಶಕ ಜಯಕುಮಾರ್‌




ಮ೦ಗಳೂರು, ಫೆ.18, 2026: ಮಂಗಳೂರು ವಿದ್ಯುತ್ ಸರಬರಾಜು ಕಂಪನಿ (ಮೆಸ್ಕಾಂ)ಯ ಸಾಧನೆ ಮತ್ತು ಕಾರ್ಯನಿರ್ವಹಣೆಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ)ದ ಅಧ್ಯಕ್ಷ ಪಿ.ರವಿಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಮೆಸ್ಕಂ೦ನ ಕಾಪೋ೯ರೇಟ್‌ ಕಚೇರಿಯಲ್ಲಿ ಬುಧವಾರ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವರ್ಷ 2024-25ನೇ ಸಾಲಿಗೆ ಸಂಬಂಧಿಸಿದಂತೆ ಮೆಸ್ಕಾಂನ ವಾರ್ಷಿಕ ಕಾರ್ಯನಿರ್ವಹಣಾ ಪರಿಶೀಲನೆ ಅರ್ಜಿಯ ಬಗ್ಗೆ ನಡೆದ ಸಭೆಯಲ್ಲಿ ಅವರು ಈ‌ ಅಭಿಪ್ರಾಯ ವ್ಯಕ್ತಪಡಿಸಿದರು.


ಸಾರ್ವಜನಿಕ ವಿಚಾರಣೆ ಸಭೆಯಲ್ಲಿ 2024-25ನೇ ಸಾಲಿನಲ್ಲಿ ಮೆಸ್ಕಾಂ  ವತಿಯಿಂದ ನಡೆಸಲಾಗಿರುವ ವಿವಿಧ ಪ್ರಗತಿ ಕಾರ್ಯಗಳು ಮತ್ತು ಸಾಧನೆಗಳ ಕುರಿತು ವಿವರಿಸಲಾಯಿತು. ಅಲ್ಲದೆ, ಮೆಸ್ಕಾಂನ ಪ್ರಸ್ತಾವ ಹಾಗೂ ಗ್ರಾಹಕರ ಆಕ್ಷೇಪವನ್ನು ಕೆಇಆರ್‌ಸಿ ಅಧ್ಯಕ್ಷರು ಆಲಿಸಿದರು.


ಬಳಿಕ ಮಾತನಾಡಿ, ಗ್ರಾಹಕರಿಂದ ಉತ್ತಮ ರೀತಿಯ ಸಲಹೆ, ಅಹವಾಲು ಸ್ವೀಕಾರವಾಗಿದೆ. ಉಳಿದ ಎಸ್ಕಾಂಗಳಿಗೆ ಹೋಲಿಸಿದರೆ ಮೆಸ್ಕಾಂ ಉತ್ತಮ ಸಾಧನೆ ಮಾಡಿದೆ. ಈ ಬಾರಿ ದರ ಪರಿಷ್ಕರಣೆ ಇಲ್ಲ. ನಷ್ಟದ ಬಗ್ಗೆ ಮೆಸ್ಕಾಂ ಸಲ್ಲಿದಿರುವ ಪ್ರಸ್ತಾವನೆಯನ್ನು ಪರಿಶೀಲಿಸಲಾಗುವುದು ಎಂದರು. 


ಇದಕ್ಕೂ ಮುನ್ನ ಮೆಸ್ಕಾಂ ಎದುರಿಸುತ್ತಿರುವ 83.12 ಕೋಟಿ ರೂ.ಗಳ ನಿವ್ವಳ ಆದಾಯ ಕೊರತೆ ಸರಿದೂಗಿಸಲು ಸೂಕ್ತ ಆದೇಶ ಹೊರಡಿಸುವಂತೆ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಜಯಕುಮಾರ್ ಆರ್. ಅವರು ಕೆಇಆರ್‌ಸಿ ಅಧ್ಯಕ್ಷರಿಗೆ ಪ್ರಸ್ತಾವನೆ ಸಲ್ಲಿಸಿದರು.


ಜತೆಗೆ ಪ್ರಗತಿ ಮತ್ತು ಸಾಧನೆಗಳ ವಿವರಣೆ ನೀಡಿ, “2024-25 ನೇ ಆರ್ಥಿಕ ವರ್ಷದಲ್ಲಿ ಕ೦ದಾಯ ಅಗತ್ಯದ 5913.50 ಕೋಟಿ ರೂ. ಬದಲಿಗೆ 5830.38  ಕೋಟಿ ರೂ. ಸಂಗ್ರಹವಾಗಿದೆ. ಇದರಿಂದಾಗಿ ಆದಾಯದಲ್ಲಿ 83.12 ಕೋಟಿ ರೂ. ವ್ಯತ್ಯಾಸವಾಗಿದೆ. ಇದನ್ನು ಭರಿಸಲು 11ರಿಂದ 12 ಪೈಸೆ ದರ ಏರಿಕೆ ಅಗತ್ಯ ಇದ್ದು, ಅದಕ್ಕೆ ಸಂಬಂಧಿಸಿ ಸೂಕ್ತ ಅದೇಶ ಹೊರಡಿಸುವ೦ತೆ ” ಮನವಿ ಮಾಡಿದರು.


ಮೆಸ್ಕಾಂನಲ್ಲಿ 27,61,530 ಗ್ರಾಹಕರಿದ್ದು 5830.38 ಕೋಟಿ ರೂ. ಸಂಗ್ರಹವಾಗಿದೆ. 2024-25ನೇ ಆರ್ಥಿಕ ವರ್ಷದಲ್ಲಿ ಕೆಇಆರ್‌ಸಿ 5969. 31 ಮಿಲಿಯನ್ ಯೂನಿಟ್‌ಗೆ ಅನುಮೋದನೆ ನೀಡಿದ್ದರೆ, 6647.77 ವಿದ್ಯುತ್ ಬಳಕೆಯಾಗಿದೆ.  685.43 ಮಿ.ಯೂನಿಟ್ ಹೆಚ್ಚಳವಾಗಿದೆ ಎ೦ದವರು ವಿವರಿಸಿದರು. 


ಹಲವರಿಂದ ಸಮಸ್ಯೆಗಳ ಪ್ರಸ್ತಾಪ

ಸಾರ್ವಜನಿಕ ವಿಚಾರಣೆ ಸಭೆಯಲ್ಲಿ ಪಾಲ್ಗೊಂಡಿದ್ದ, ರೈತ ಮುಖಂಡರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಮೆಸ್ಕಾ೦ಗೆ ಸಂಬಂಧಿಸಿದ ತಮ್ಮ ದೂರು, ಅಹವಾಲುಗಳನ್ನು ಕೆಇಆರ್‌ಸಿ ಅಧ್ಯಕ್ಷರ ಮುಂದಿಟ್ಟರು.  


ಶಾಸಕ ಆರಗ ಜ್ಞಾನೇಂದ್ರ, ಕೆನರಾ ವಾಣಿಜ್ಯ ಮತ್ತು ಕೈಗಾರಿಕ ಸ೦ಘದ ಅಧ್ಯಕ್ಷ  ಪಿ.ಬಿ.ಅಬ್ದುಲ್‌ ಮುದಾಸ್ಸಿರ್‌, ಭಾರತೀಯ ಕಿಸಾನ್‌ ಸಭಾದ  ಸತ್ಯನಾರಾಯಣ ಉಡುಪ ಸೇರಿದಂತೆ ಹಲವರು  ಸಮಸ್ಯೆಗಳನ್ನು ಸಭೆಯಲ್ಲಿ  ವಿವರಿಸಿದರು.


ಸಭೆಯಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಸದಸ್ಯರಾದ ಎಚ್.ಕೆ. ಜಗದೀಶ್, ಮೆಸ್ಕಾMನ ಅಧ್ಯಕ್ಷ ಕೆ. ಹರೀಶ್‌ ಕುಮಾರ್‌, ಮೆಸ್ಕಾಂ ತಾಂತ್ರಿಕ ನಿರ್ದೇಶಕ ವಿ. ಹರೀಶ್‌ ಕುಮಾರ್‌ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

=====================

ಮೆಸ್ಕಾಂ ಅಳವಡಿಸಿಕೊಂಡಿರುವ ಪ್ರಮುಖ ಮೌಲ್ಯಗಳಾದ ಗ್ರಾಹಕ ಕೇಂದ್ರೀಕೃತ ಸ್ಪಂದನೆ ಮತ್ತು ಫಲಿತಾಂಶ ಆಧಾರಿತ ದೃಷ್ಟಿಕೋನದಿಂದ  ಮಾರ್ಗದರ್ಶಿತಗೊ೦ಡು ತನ್ನ ಕಾರ್ಯಚಟುವಟಿಕೆಗಳನ್ನು ಮುಂದುವರಿಸುತ್ತಿದೆ. ಗ್ರಾಹಕರಿಗೆ ಉತ್ತಮ ಗುಣಮಟ್ಟದ ಮತ್ತು ಅಡಚಣೆ ರಹಿತ ವಿದ್ಯುತ್ ಸರಬರಾಜು ಮಾಡುವ ನಿಟ್ಟಿನಲ್ಲಿ ಮೆಸ್ಕಾಂ ಬದ್ದತೆಯಿಂದ ಕಾರ್ಯ ನಿರ್ವಹಿಸಿದೆ.

- ಜಯಕುಮಾರ್‌ ಆರ್.‌

ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು

=====================


ಸಭೆಯಲ್ಲಿ ದರ ಏರಿಕೆ ಪ್ರಸ್ತಾಪವಿಲ್ಲ 

ವಿದ್ಯುತ್ ದರ ಪರಿಷ್ಕರಣೆಯ ಮೆಸ್ಕಾಂನ ಮೂರು ವರ್ಷದ ಪ್ರಸ್ತಾವನೆಗೆ ಕಳೆದ ವರ್ಷವೇ ಕರ್ನಾಟಕ ವಿದ್ಯುಚ್ಚಕ್ತಿ ನಿಯಂತ್ರಣ ಆಯೋಗ ಅನುಮೋದನೆ ನೀಡಿದೆ . ಆದ್ದರಿಂದ ಇದು ದರ ಏರಿಕೆಗೆ ಸಂಬಂಧಿಸಿದ ಸಭೆಯಲ್ಲ. ಕಾರ್ಯನಿರ್ವಹಣಾ ಪರಿಶೀಲನಾ ಅರ್ಜಿ ಕುರಿತು ಸಾರ್ವಜನಿಕ ವಿಚಾರಣೆ ನಡೆದಿದೆ. ಅದಾಯ ವ್ಯತ್ಯಾಸ  ಭತಿ೯ ಕುರಿತ೦ತೆ 11ರಿಂದ 12 ಪೈಸೆ ದರ ಏರಿಕೆ ಕೋರಿಕೆಯನ್ನು ಮೆಸ್ಕಾಂ ಮಂಡಿಸಿದೆ. ಇದನ್ನು ಆಯೋಗ ಪರಿಶೀಲಿಸಲಿದೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷರಾದ ಪಿ. ರವಿಕುಮಾರ್ ಅವರು ತಿಳಿಸಿದರು.



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top