ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ 2026- ಪದ ಪ್ರದಾನ ಸಮಾರಂಭ

Upayuktha
0


ಬ್ರಹ್ಮಾವರ: ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ ಇದರ ನೂತನ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಪದ ಪ್ರಧಾನ ಸಮಾರಂಭ ಬ್ರಹ್ಮಾವರ ಸಿಟಿ ಸೆಂಟರ್ ಸಿಂಧೂರ ಹಾಲ್ ನಲ್ಲಿ ನಡೆಯಿತು.


ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಬಸವರಾಜ್ ಹುಬ್ಬಳ್ಳಿ, ಜಯಂಟ್ಸ್ ಸಂಸ್ಥೆಯು ಅನೇಕ ಜನೋಪಯೋಗಿ ಕಾರ್ಯಕ್ರಮಗಳ ಮೂಲಕ ಅತ್ಯುತ್ತಮವಾಗಿ ಸೇವೆ ನೀಡುತ್ತಿರುವುದು ಅಭಿನಂದನೀಯ ಎಂದರು. ಸೀನಿಯರ್ ಫಾರ್ಮಸಿ ಆಫೀಸರ್ ಯು ಆನಂದ್ ಜತ್ತನ್ ಶುಭ ಹಾರೈಸಿದರು.


ಜೆಂಟ್ಸ್ ವೆಲ್ಫೇರ್ ಫೌಂಡೇಶನ್ ಮುಂಬೈ ಸೆಂಟ್ರಲ್ ಕಮಿಟಿ ಮೆಂಬರ್ ದಿನಕರ್ ಕೆ ಅಮೀನ್ ಮಾತನಾಡಿ, ಬ್ರಹ್ಮಾವರ ಜಯಂಟ್ಸ್ ಸಂಸ್ಥೆಯು ಜನ ಔಷಧಿ ಕೇಂದ್ರಗಳ ಮೂಲಕ ಮತ್ತು ನಿರಂತರ ವೈದ್ಯಕೀಯ ತಪಾಸಣಾ ಶಿಬಿರಗಳ ಮೂಲಕ ಉತ್ತಮ ಕೆಲಸ ಮಾಡುತ್ತಿದೆ. ಇತ್ತೀಚಿಗೆ ನಡೆದ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಸಂಸ್ಥೆಗೆ ಹಲವಾರು ಪ್ರಶಸ್ತಿಗಳು ಬಂದಿವೆ ಎಂದರು.


ವೇದಿಕೆಯಲ್ಲಿ ಫೆಡರೇಶನ್ ಮಾಜಿ ಅಧ್ಯಕ್ಷರಾದ ತೇಜೇಶ್ವರ್ ರಾವ್, ಮಧುಸೂಧನ್ ಹೇರೂರು ಉಪಸ್ಥಿತರಿದ್ದರು. ಯೂನಿಟ್ ಡೈರೆಕ್ಟರ್ ಸುಂದರ ಪೂಜಾರಿ ನೂತನ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು. ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಅಣ್ಣಯ್ಯ ದಾಸ್ ಮತ್ತು ಆಡಳಿತ ಮಂಡಳಿಯ ಸದಸ್ಯರಿಗೆ ಅಧಿಕಾರ ಹಸ್ತಾಂತರಿಸಲಾಯಿತು. ಕಾರ್ಯಕ್ರಮದಲ್ಲಿ ಪದಾಧಿಕಾರಿಗಳಾದ ಪ್ರತಿಭಾ ರವರ ಹುಟ್ಟುಹಬ್ಬ ಅದೇ ರೀತಿ ಪೂರ್ವ ಅಧ್ಯಕ್ಷ ವಿವೇಕಾನಂದ ಕಾಮತ್ ದಂಪತಿಗಳ ವಿವಾಹ ವಾರ್ಷಿಕೋತ್ಸವ ಸಂಭ್ರಮ ನಡೆಯಿತು. ಸಂಸ್ಥೆ ಪೂರ್ವ ಅಧ್ಯಕ್ಷ ಸುಂದರ ಪೂಜಾರಿ ಅವರನ್ನು ಗೌರವಿಸಲಾಯಿತು.


ಸಂಸ್ಥೆಯ ಗ್ರಹ ಪತ್ರಿಕೆ ವನಸುಮ ಬಿಡುಗಡೆಗೊಳಿಸಲಾಯಿತು. ಕಾರ್ಯದರ್ಶಿ ಮೀಲ್ಟನ್ ಒಲಿವರ್ ವಂದಿಸಿದರು. ರಾಘವೇಂದ್ರ ಪ್ರಭು ಕವಾ೯ಲು ನಿರೂಪಿಸಿದರು. ನೂತನ ಪದಾಧಿಕಾರಿಗಳಾಗಿ ಸುಂದರ ಪೂಜಾರಿ, ಮಿಲ್ಟನ್ ಒಲಿವೇರಾ, ಶ್ರೀನಾಥ್ ಕೋಟ, ಪ್ರತಿಭಾ ಪೂಜಾರಿ, ರೋನಾಲ್ಡ್ ಡಯಾಸ್ ಆಯ್ಕೆಯಾದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top