ಗ್ರಾಹಕರಿಗೆ ಆರ್ಥಿಕ ಭದ್ರತೆ: HDFC ಲೈಫ್ - ಮುತ್ತೂಟ್ ಫಿನ್ ಕಾರ್ಪ್ ಲಿಮಿಟೆಡ್ ಸಹಯೋಗ

Upayuktha
0


ಉಡುಪಿ: ಭಾರತದ ಪ್ರಮುಖ ಜೀವ ವಿಮಾ ಕಂಪನಿಗಳಲ್ಲಿ ಒಂದಾದ ಎಚ್ಡಿಎಫ್ಸಿ ಲೈಫ್ ಸಂಸ್ಥೆಯು ಕೇರಳದ ತಿರುವನಂತಪುರಂನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಮುತ್ತೂಟ್ ಪಾಪಚ್ಚನ್ ಗ್ರೂಪ್ ನ (ಮುತ್ತೂಟ್ ಬ್ಲೂ) ಪ್ರಮುಖ ಸಂಸ್ಥೆಯಾದ ಮುತ್ತೂಟ್ ಫಿನ್ ಕಾರ್ಪ್ ಲಿಮಿಟೆಡ್ ಜೊತೆ ಸಹಭಾಗಿತ್ವ ಮಾಡಿಕೊಂಡಿರುವುದಾಗಿ ಘೋಷಿಸಿದೆ.


ಈ ಪಾಲುದಾರಿಕೆಯು ಮುತ್ತೂಟ್ ಫಿನ್ಕಾರ್ಪ್ ಲಿಮಿಟೆಡ್ ನ ಗ್ರಾಹಕರಿಗೆ ಎಚ್ಡಿಎಫ್ಸಿ ಲೈಫ್ ನ ಸಮಗ್ರ ಶ್ರೇಣಿಯ ಗುಂಪು ವಿಮೆ ಮತ್ತು ವೈಯಕ್ತಿಕ ಜೀವ ವಿಮಾ ಪರಿಹಾರಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಇದರಲ್ಲಿ ಗ್ರಾಹಕರ ದೀರ್ಘಕಾಲದ ಆರ್ಥಿಕ ಗುರಿಗಳನ್ನು ತಲುಪಲು ಪೂರಕವಾದ ರಕ್ಷಣೆ ಮತ್ತು ದೀರ್ಘಕಾಲದ ಉಳಿತಾಯ ಉತ್ಪನ್ನಗಳು ಸೇರಿವೆ. ಮುತ್ತೂಟ್ ಫಿನ್ಕಾರ್ಪ್ ನ ಭಾರತದಾದ್ಯಂತ ಇರುವ 3,750ಕ್ಕೂ ಹೆಚ್ಚು ಶಾಖೆಗಳು ಮತ್ತು ಡಿಜಿಟಲ್ ಪ್ಲಾಟ್ಫಾರ್ಮ್ಗಳ ಮೂಲಕ ಈ ಸೇವೆಗಳು ಲಭ್ಯವಿರಲಿವೆ.


ಈ ಪಾಲುದಾರಿಕೆಯ ಬಗ್ಗೆ ಮಾತನಾಡಿದ ಎಚ್ಡಿಎಫ್ಸಿ ಲೈಫ್ನ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಸಿಇಓ ವಿಭಾ ಪಡಾಲ್ಕರ್, “ಮುತ್ತೂಟ್ ಫಿನ್ಕಾರ್ಪ್ ಲಿಮಿಟೆಡ್ ಜೊತೆಗಿನ ನಮ್ಮ ಪಾಲುದಾರಿಕೆಯು ವಿಮಾ ಕ್ಷೇತ್ರದ '2047ರ ವೇಳೆಗೆ ಎಲ್ಲರಿಗೂ ವಿಮೆ' ಎಂಬ ಗುರಿಯನ್ನು ಸಾಧಿಸುವತ್ತ ಒಂದು ಪ್ರಮುಖ ಹೆಜ್ಜೆಯಾಗಿದೆ. ಮುತ್ತೂಟ್ ಫಿನ್ಕಾರ್ಪ್ ನ ಹಾಲಿ ಮತ್ತು ಹೊಸ ಗ್ರಾಹಕರಿಗೆ ಅವರ ಆರ್ಥಿಕ ಗುರಿಗಳನ್ನು ಸಾಧಿಸಲು ಸಹಕಾರಿಯಾಗುವ ಪರಿಣಾಮಕಾರಿ ಜೀವ ವಿಮಾ ಪರಿಹಾರಗಳನ್ನು ನೀಡಲು ನಾವು ಬದ್ಧರಾಗಿದ್ದೇವೆ. ಅಲ್ಲದೆ, ನಮ್ಮ ಸುಲಭ ಪ್ರಕ್ರಿಯೆಗಳು ಮುತ್ತೂಟ್ ಫಿನ್ ಕಾರ್ಪ್ ನ ತಂಡಗಳಿಗೆ ಡಿಜಿಟಲ್ ಶಕ್ತಿಯನ್ನು ನೀಡಲಿದ್ದು, ಗ್ರಾಹಕರಿಗೆ ಉತ್ತಮ ಅನುಭವವನ್ನು ಒದಗಿಸಲಿವೆ. ಈ ಮೂಲಕ ದೇಶದಲ್ಲಿ ವಿಮೆಯ ವ್ಯಾಪ್ತಿಯನ್ನು ಹೆಚ್ಚಿಸಲು ಮತ್ತು ಆರ್ಥಿಕ ಒಳಗೊಳ್ಳುವಿಕೆಯನ್ನು ಉತ್ತೇಜಿಸಲು ನಾವು ಎದುರು ನೋಡುತ್ತಿದ್ದೇವೆ" ಎಂದು ಹೇಳಿದರು.


ಮುತ್ತೂಟ್ ಫಿನ್ ಕಾರ್ಪ್ ಲಿಮಿಟೆಡ್ನ ಸಿಇಒ ಶ್ರೀ ಶಾಜಿ ವರ್ಗೀಸ್ ಮಾತನಾಡಿ, “ಎಚ್ಡಿಎಫ್ಸಿ ಲೈಫ್ ಜೊತೆ ಕೈಜೋಡಿಸಲು ನಮಗೆ ಸಂತೋಷವಾಗಿದೆ. ಮುತ್ತೂಟ್ ಫಿನ್ ಕಾರ್ಪ್ ಮತ್ತು ಎಚ್ಡಿಎಫ್ಸಿ ಲೈಫ್ ಎರಡೂ ಗ್ರಾಹಕರ ನಂಬಿಕೆಯ ಮೇಲೆ ನಿರ್ಮಾಣವಾಗಿವೆ. ನಮ್ಮ 3,750ಕ್ಕೂ ಹೆಚ್ಚು ಶಾಖೆಗಳ ವ್ಯಾಪ್ತಿ, ಡಿಜಿಟಲ್ ಪ್ಲಾಟ್ ಫಾರ್ಮ್ ಗಳು ಮತ್ತು ಲಕ್ಷಾಂತರ ಗ್ರಾಹಕರೊಂದಿಗಿನ ನಮ್ಮ ಸಂಬಂಧವನ್ನು ಎಚ್ಡಿಎಫ್ಸಿ ಲೈಫ್ ನ ಉತ್ಪನ್ನ ಮತ್ತು ಅಪಾಯ ನಿರ್ವಹಣೆಯ ಪರಿಣತಿಯೊಂದಿಗೆ ಸಂಯೋಜಿಸಿ, ಭಾರತೀಯ ಕುಟುಂಬಗಳಿಗೆ ಅರ್ಥಪೂರ್ಣ ಆರ್ಥಿಕ ರಕ್ಷಣೆ ನೀಡುವುದು ಈ ಪಾಲುದಾರಿಕೆಯ ಉದ್ದೇಶವಾಗಿದೆ" ಎಂದು ತಿಳಿಸಿದರು.


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top