ಅಮೆತ್ತೋಡು ದೈವಸ್ಥಾನದಲ್ಲಿ ದೈವಕೋಲ, ಸ್ವರ ನಿನಾದ ಕಾರ್ಯಕ್ರಮ

Upayuktha
0


ಕಾಸರಗೋಡು: ಇಲ್ಲಿನ ಧೂಮಾವತಿ ದೇವಸ್ಥಾನ ಅಮೆತ್ತೋಡಿನ ದೈವಸ್ಥಾನದಲ್ಲಿ ನಡೆದ ಪುನಃ ಪ್ರತಿಷ್ಠಾ ಸಂದರ್ಭದಲ್ಲಿ ದೈವಕೋಲ ನಡೆಯಿತು. ಆ ಪ್ರಯುಕ್ತ, ಕಲಾ ವೇದಿಕೆಯಲ್ಲಿ ಡಾ. ವಾಣಿಶ್ರೀ ಕಾಸರಗೋಡು ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ, ಕಾಸರಗೋಡು ಅವರ ಕಲಾ ತಂಡದಿಂದ 174 ನೇ ಸಾಹಿತ್ಯಾಮೃತ ಗಾನಾಮೃತ ಕನ್ನಡ ಕೋಗಿಲೆಗಳ "ಸ್ವರ-ನಿನಾದ" ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಲಾಯಿತು.


ಸಂಸ್ಥೆಯ ಕಲಾವಿದರಾದ, ಅಮೃತ್, ದಿವಾಕರ, ಸೀತಾರಾಮ, ವಿಶ್ವನಾಥ, ಈಶ್ವರ, ಅಶ್ವತಿ ಹಾಗೂ ಅನುಪಮಾ ಇವರ ವಿವಿಧ ರೀತಿಯ ಗಾಯನಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮವು ಸಾಂಗವಾಗಿ ನೆರವೇರಿತು. ಭಾಗವಹಿಸಿದ ಎಲ್ಲಾ ಕಲಾವಿದರಿಗೆ ಸಂಸ್ಥೆಯ ವತಿಯಿಂದ ಗೌರವಧನ ಹಾಗೂ ಪುಸ್ತಕ ಗಳನ್ನು ನೀಡಿ ಗೌರವಿಸಲಾಯಿತು. ದೇವಸ್ಥಾನದ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಗೌರವಾಧ್ಯಕ್ಷೆ ಡಾ. ವಾಣಿ ಶ್ರೀ ಕಾಸರಗೋಡು ಇವರಿಗೆ ದೇವಸ್ಥಾನದ ವತಿಯಿಂದ ಫಲ ಪುಷ್ಪ ಪ್ರಸಾದ ನೀಡಿ ಗೌರವಿಸಲಾಯಿತು. ಸಂಸ್ಥೆಯ ಅಧ್ಯಕ್ಷರು ಎಲ್ಲರಿಗೂ ಶುಭಾಶಯ ತಿಳಿಸಿದರು. ವೇದಿಕೆಯಲ್ಲಿ ಕೃಷ್ಣ, ಅಚ್ಯುತ ಭಟ್, ಶಶಿಕಲಾ ಮುಂತಾದವರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top