105 ದೇಶಗಳನ್ನು ಬೈಕ್‌ನಲ್ಲಿ ಸುತ್ತಿದ ಕಾಣಿವತಾರನ್ ಸುಬರಾಯನ್ ಸುರತ್ಕಲ್‌ಗೆ

Upayuktha
0


ಸುರತ್ಕಲ್‌: ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಗಾರಿಕೆಯಾಗಿದ್ದು ಅದರ ಕುರಿತು ಜಾಗೃತರಾಗಿರಬೇಕು. ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆಯಿಂದ ಪರಿಸರದ ಪರಿಸ್ಥಿತಿ ಹದಗೆಡುತ್ತಿದೆ ಎಂದು 105 ದೇಶಗಳನ್ನು ಬೈಕ್‌ನಲ್ಲಿ ಸಂಚರಿಸಿ ಸುರತ್ಕಲ್‌ಗೆ ಆಗಮಿಸಿರುವ ಮಲೇಷಿಯಾದ ತಮಿಳು ಪರಂಪರೆ ಮತ್ತು ಜ್ಞಾನ ಫೌಂಡೇಶನ್‌ನ ಜಾಗತಿಕ ರಾಯಭಾರಿ ಕಾಣಿವತಾರನ್ ಸುಬರಾಯನ್ ನುಡಿದರು.


ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಫಿಶರೀಶ್ ಚಿತ್ರಾಪುರ ಕುಳಾಯಿಯ ಇಕೋ ಕ್ಲಬ್, ತಮಿಳು ಸಂಘ ಮಂಗಳೂರು, ಲಯನ್ಸ್ ಕ್ಲಬ್ ನವ ಮಂಗಳೂರು ಆಶ್ರಯದಲ್ಲಿ ಆಯೋಜಿಸಿದ್ದ ಪರಿಸರ ಅರಿವು ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದರು.


ಭಾರತೀಯ ತಮಿಳುನಾಡು ಮೂಲದ ಮಲೇಷಿಯಾದ ಪ್ರಜೆ ಎಲೆಕ್ಟ್ರಿಕಲ್ ಇಂಜಿನಿಯರ್ ಕಾಣಿವತಾರನ್ ಅವರು ನಿವೃತ್ತಿಯ ನಂತರ 2023 ರಲ್ಲಿ  ಜಾಗತಿಕ ತಾಪಮಾನ ಮತ್ತು ಹವಾಮಾನ  ಬದಲಾವಣೆ ಕುರಿತು ಜಾಗೃತಿ ಮೂಡಿಸುತ್ತಿದ್ದು ವಿದ್ಯಾರ್ಥಿಗಳಿಗೆ ಪರಿಸರ ಆಸಕ್ತಿ ಮೂಡಿಸುತ್ತಿದ್ದಾರೆ. ಉತ್ತರ ಮತ್ತು ದಕ್ಷಿಣ ಅಮೇರಿಕಾ, ಯುರೋಪ್, ಮಧ್ಯ ಪ್ರಾಚ್ಯ ದೇಶಗಳಿಗೆ ಭೇಟಿ ನೀಡಿದ್ದು ಇದೀಗ ಮುಂಬೈ, ಗೋವಾ, ಪುಣೆಯಿಂದ ಮಂಗಳೂರಿಗೆ ಆಗಮಿಸಿದ್ದಾರೆ. ಮುಂದೆ ತನ್ನ ಹಿರಿಯರ ಚೆನ್ನೈಗೆ ಭೇಟಿ ನೀಡಿ ಒರಿಸ್ಸಾ, ಕಲ್ಕತ್ತಾ ಮೂಲಕ ನೇಪಾಳಕ್ಕೆ ತೆರಳಿ ಮುಂದೆ ಚೀನಾಕ್ಕೆ ಭೇಟಿ ನೀಡಲಿದ್ದಾರೆ.



ಭೇಟಿ ನೀಡಿದ ಎಲ್ಲಾ ದೇಶಗಳಲ್ಲಿ ಆತ್ಮೀಯ ಸ್ವಾಗತ ನೀಡಿದ್ದು ಮಾನವೀಯತೆ ಧರ್ಮ ಎಲ್ಲೆಡೆ ಕಾಣಬಹುದಾಗಿದೆ ಎಂದು ನುಡಿಯುತ್ತಾರೆ.


ಮಕ್ಕಳು ನಮ್ಮ ದೇಶದ ಅಸ್ತಿ. ಶಿಸ್ತನ್ನು ಅಳವಡಿಸಿಕೊಂಡು ಹಿರಿಯರನ್ನು ಗೌರವಿಸಿ ಗಿಡಗಳನ್ನು ನೆಟ್ಟು ಪೋಷಿಸಬೇಕು. ಕಲಿಕೆ ಮತ್ತು ಜ್ಞಾನ ಪರಂಪರೆ ನಮ್ಮದಾಗಿದ್ದು ಎಲ್ಲಾ ದೇಶಗಳಲ್ಲೂ ಭಾರತೀಯ ಜ್ಞಾನವಂತ ಯುವ ಸಮುದಾಯವನ್ನು ಕಾಣಬಹುದಾಗಿದೆ. ತನ್ನ ಹಿರಿಯರ ನಾಡಿಗೆ ಭೇಟಿ ನೀಡಲು ಅತೀವ ಸಂತೋಷವಾಗುತ್ತಿದ್ದು ಶ್ರೇಷ್ಠ ಸಂಸ್ಕೃತಿಯ ನಾಡು ನಮ್ಮದು ಎಂಬ ರಾಷ್ಟ್ರ ಭಕ್ತಿ ಮೂಡಿಸಿಕೊಳ್ಳಬೇಕೆಂದರು.


ಲಯನ್ಸ್ ಕ್ಲಬ್ ಅಧ್ಯಕ್ಷ ಲಿಂಗ ರಾಜು, ತಮಿಳು ಸಂಘದ ಹರಿ ದೊರೆಸ್ವಾಮಿ, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಕೃಷ್ಣಮೂರ್ತಿ ಲಯನ್ಸ್ ಕ್ಲಬ್ ನ ಮನೋಜ್ ಕುಮಾರ್ ಶುಭ ಹಾರೈಸಿದರು.


ಲಯನ್ಸ್ ಕ್ಲಬ್ ನ ಕಾರ್ಯದರ್ಶಿ ಮುರಳಿಧರ್, ಕರುಣಾಕರ ಶೆಟ್ಟಿ, ತಮಿಳು ಸಂಘದ ಫ್ರಾನ್ಸಿಸ್, ಬಾಲಕೃಷ್ಣ, ಗಣೇಶ್ ಕುಮಾರ್, ಶಿಕ್ಷಕಿ ಸಿಂತಿಯ ರೂಪ ಉಪಸ್ಥಿತರಿದ್ದರು.


ಮುಖ್ಯ ಶಿಕ್ಷಕಿ ಶೋಭಾ ಸ್ವಾಗತಿಸಿದರು. ಇಕೋ ಕ್ಲಬ್ ಸಂಯೋಜಕಿ ನೀತಾ ತಂತ್ರಿ ವಂದಿಸಿದರು. ವಿದ್ಯಾರ್ಥಿಗಳ ಜೊತೆಗೆ ಗಿಡಗಳನ್ನು ನೆಡಲಾಯಿತು. ಕಾಣಿವತಾರನ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top