ಸೇಂಟ್ ಅಲೋಶಿಯಸ್ ವಿವಿಯಲ್ಲಿ ಎರಡು ದಿನಗಳ ಸಂಗೀತ ಸಂಭ್ರಮ

Upayuktha
0

ಆಸ್ತಿತ್ವ ಮಂಗಳೂರು ಆಯೋಜನೆಯ ‘ಸುರೋನ್ ಕಿ ಮೆಹ್ಫಿಲ್’ ಹಾಗೂ ‘ಮಿಸ್ಟೀರಿಯಂ’



ಮಂಗಳೂರು: ಅಸ್ತಿತ್ವ ಮಂಗಳೂರು ಸಂಸ್ಥೆಯು ರಂಗ ಅಧ್ಯಯನ ಕೇಂದ್ರ, ಅರೆಹೊಳೆ ಪ್ರತಿಷ್ಠಾನ, ಕನ್ನಡ ವಿಭಾಗ ಹಾಗೂ ಭಾಷೆಗಳು ಮತ್ತು ಸಾಂಸ್ಕೃತಿಕ ಅಧ್ಯಯನ ಶಾಲೆ—ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ) ಇವರ ಸಹಯೋಗದಲ್ಲಿ ಎರಡು ದಿನಗಳ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದೆ. ‘ಸುರೋನ್ ಕಿ ಮೆಹ್ಫಿಲ್’ ಹಾಗೂ ‘ಮಿಸ್ಟೀರಿಯಂ’ ಎಂಬ ಶೀರ್ಷಿಕೆಯಡಿ ನಡೆಯುವ ಈ ಸಂಗೀತ ಸಂಭ್ರಮವು ಫೆಬ್ರವರಿ 19 ಮತ್ತು 20, 2026ರಂದು ಸಂಜೆ 6.30ಕ್ಕೆ ವಿಶ್ವವಿದ್ಯಾಲಯದ ಮದರ್ ತೆರೇಸಾ ಪೀಸ್ ಪಾರ್ಕ್‌ನಲ್ಲಿ ನಡೆಯಲಿದೆ. ಎಲ್ಲರಿಗೂ ಮುಕ್ತ ಪ್ರವೇಶವಿದೆ.


ಮನಸ್ಸಿಗೆ ಶಾಂತಿ, ಒಳಗುದಿಗೆ ಸಾಂತ್ವನ ನೀಡುವ ಉದ್ದೇಶದಿಂದ ರೂಪುಗೊಂಡಿರುವ ಈ ಕಾರ್ಯಕ್ರಮ, ಸಂಗೀತದ ಮೂಲಕ ಆತ್ಮಸ್ಥೈರ್ಯ ಮತ್ತು ಸೌಹಾರ್ದತೆಯ ಅನುಭವವನ್ನು ಪ್ರೇಕ್ಷಕರಿಗೆ ನೀಡಲಿದೆ. ಸಮುದಾಯದ ಎಲ್ಲ ವರ್ಗಗಳಿಗೂ ಇದು ಒಂದು ಮನಮುಟ್ಟುವ ಸಾಂಸ್ಕೃತಿಕ ವಿಶ್ರಾಂತಿ ಕ್ಷಣವಾಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.


ಫೆಬ್ರವರಿ 19: ‘ಸುರೋನ್ ಕಿ ಮೆಹ್ಫಿಲ್’

ಮೊದಲ ದಿನ ‘ಸುರೋನ್ ಕಿ ಮೆಹ್ಫಿಲ್ – ಭಾರತೀಯ ಶಾಸ್ತ್ರೀಯ ಸಂಗೀತದ ಪ್ರತಿಧ್ವನಿಗಳು’ ಕಾರ್ಯಕ್ರಮ ನಡೆಯಲಿದೆ. ಸೇಂಟ್ ಅಲೋಶಿಯಸ್ (ಡೀಮ್ಡ್ ಟು ಬಿ ಯೂನಿವರ್ಸಿಟಿ) ವಿದ್ಯಾರ್ಥಿ ಹಾಗೂ ಪ್ರಖ್ಯಾತ ವೃತ್ತಿಪರ ಗಾಯಕರಾದ ಕೀರ್ತನ್ ನೈಗಾ ಅವರ ಗಾಯನ ಕಾರ್ಯಕ್ರಮ ಈ ಸಂಭ್ರಮಕ್ಕೆ ಚಾಲನೆ ನೀಡಲಿದೆ. ಭಾರತೀಯ ಶಾಸ್ತ್ರೀಯ ಸಂಗೀತದ ಶಾಶ್ವತ ಸೌಂದರ್ಯ, ರಾಗಗಳ ಆಳ ಮತ್ತು ಭಾವಪೂರ್ಣತೆಯ ಅನಾವರಣ ಈ ಸಂಜೆ ನಡೆಯಲಿದೆ.



ಫೆಬ್ರವರಿ 20: ‘ಮಿಸ್ಟೀರಿಯಂ’

ಎರಡನೇ ದಿನ ‘ಮಿಸ್ಟೀರಿಯಂ – ಸಂಗೀತ ಮತ್ತು ನಾಟಕದ ಸಂಯೋಜನೆ’ ಕಾರ್ಯಕ್ರಮ ನಡೆಯಲಿದೆ. ಕೊಂಕಣಿ ಸಂಗೀತ ಲೋಕದಲ್ಲಿ ಹೆಸರು ಮಾಡಿರುವ ಯುವ ಗಾಯಕ-ಸಂಗೀತ ನಿರ್ದೇಶಕ ಜಾಸನ್ ಲೋಬೋ ಅವರ ನೇತೃತ್ವದಲ್ಲಿ ಈ ಸಂಜೆ ನಡೆಯಲಿದೆ. ಶಾಸ್ತ್ರೀಯ ತರಬೇತಿ ಪಡೆದಿರುವ ಜೇಸನ್ ಲೋಬೊ ಅವರು ಕಾವ್ಯ ಮತ್ತು ಸಂವೇದನಾಶೀಲ ಸಂಗೀತವನ್ನು ಒಗ್ಗೂಡಿಸುವ ತಮ್ಮ ವಿಶಿಷ್ಟ ಶೈಲಿಗೆ ಖ್ಯಾತರು. ಮನನಾತ್ಮಕ ಹಾಗೂ ಹೃದಯಸ್ಪರ್ಶಿ ಸಂಗೀತ ಪ್ರದರ್ಶನಗಳಿಗೆ ಹೆಸರಾದ ಅವರ ತಂಡದೊಂದಿಗೆ ಕಥನ ಮತ್ತು ಹಾಡಿನ ಮಿಶ್ರಣದ ಮೂಲಕ ಶಾಂತ, ಆಳವಾದ ಸಂಗೀತಾನುಭವವನ್ನು ಪ್ರೇಕ್ಷಕರಿಗೆ ನೀಡಲಿದ್ದಾರೆ.


ಸಂಗೀತವನ್ನು ಆತ್ಮಸ್ಪರ್ಶಿ ಅಭಿವ್ಯಕ್ತಿಯ ಮಾಧ್ಯಮವಾಗಿ ಸಂಭ್ರಮಿಸುವ ಈ ಎರಡು ದಿನಗಳ ಕಾರ್ಯಕ್ರಮ, ಮಂಗಳೂರಿನ ಸಾಂಸ್ಕೃತಿಕ ಬದುಕಿಗೆ ಹೊಸ ಚೈತನ್ಯವನ್ನು ನೀಡಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top