ಕಾಸರಗೋಡು: ಅರಿಯಪ್ಪಾಡಿ ಮಾಡ ಶ್ರೀ ಈರ್ವರು ಉಲ್ಲಾಕುಳು ಹಾಗೂ ಪರಿವಾರ ದೈವಸ್ಥಾನದ ಪ್ರತಿಷ್ಠಾದಿನ ಮತ್ತು ಹಾಗೂ ದೈವಗಳ ನೇಮೋತ್ಸವದ ಸಂದರ್ಭದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದುವು.
ಶ್ರೀ ಧೂಮಾವತಿ ದೈವ, ಶ್ರೀ ಗುಳಿಗ ಮತ್ತು ಕೊರತಿ ದೈವಗಳ ನೇಮದ ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಡಾ. ವಾಣಿಶ್ರೀ ಕಾಸರಗೋಡು ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯ ವತಿಯಿಂದ 166 ನೇ ವೈವಿಧ್ಯಮಯ ನೃತ್ಯ ತರಂಗ ಕಾರ್ಯಕ್ರಮ ವೈಭವದಿಂದ ಜರಗಿತು. ಈ ಕಾರ್ಯಕ್ರಮವನ್ನು ಅರಿಯಪ್ಪಾಡಿ ಮಾಡದ ಶ್ರೀ ಈರ್ವರು ಉಲ್ಲಾಕುಳು ಗೆಳೆಯರ ಬಳಗದವರು ಪ್ರಾಯೋಜನೆ ಮಾಡಿದ್ದರು.
ಅತ್ಯಂತ ವಿಶಿಷ್ಟವಾದ ಈ ನೃತ್ಯ ತರಂಗವು ಸಾಹಸ, ರಾಗ, ತಾಳ ಮತ್ತು ನೃತ್ಯಗಳ ಸಮ್ಮಿಲನವಾಗಿತ್ತು. ವಿಶೇಷ ಆಕರ್ಷಣೆಯಾದ ಫಯರ್ ಡ್ಯಾನ್ಸ್ (ಅಗ್ನಿಯೊಂದಿಗೆ ನೃತ್ಯ) ಕರ್ನಾಟಕದ ವಿಜಯಪುರದ ವಿದುಷಿ ಲಕ್ಷ್ಮಿ ಅವರ ಕಲಾವಿದರು ಪ್ರಸ್ತುತ ಪಡಿಸಿದರು. ಇದರೊಂದಿಗೆ ಪ್ರದರ್ಶಿಸಿದ ಲಂಬಾಣಿ ನಾಟ್ಯವು ಸಭಿಕರಿಗೆ ವಿಶೇಷ ಅನುಭೂತಿಯನ್ನು ನೀಡಿತು. ಝೀ ಕನ್ನಡ ಡ್ಯಾನ್ಸ್ ಕರ್ನಾಟಕ ರಿಯಾಲಿಟಿ ಶೋ ಖ್ಯಾತಿಯ ಮಂಗಳೂರು ವಿಭಾಗದ, ಗುರುಪುರದ ಸಾಕ್ಷಿ ಮತ್ತು ಸಾನ್ವಿ ಅವರ ಮನೋಹರ ನೃತ್ಯಗಳಿಗೆ ಪ್ರೇಕ್ಷಕರು ಸಾಕ್ಷಿಯಾದರು. ಇದರ ಜತೆಗೆ ಪುತ್ತೂರು ವಿಭಾಗದ ಸಂಗಮ್ ಪ್ರಶಾಂತ್ ಬಳಗದ ನೃತ್ಯ ವೈವಿಧ್ಯ ಜರಗಿತು. ಒಟ್ಟಿನಲ್ಲಿ ಈ ಕಾರ್ಯಕ್ರಮವು ಕಾಸರಗೋಡು ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯ ಕಾರ್ಯಕ್ರಮದ ವಿವಿಧತೆಯನ್ನು ಒಂದೇ ವೇದಿಕೆಯಲ್ಲಿ ಪ್ರಸ್ತುತ ಪಡಿಸಿತು.
ಸಂದರ್ಭಾನುಸಾರ ಪ್ರದರ್ಶಿದ ಡಾ. ವಾಣಿಶ್ರೀ ಅವರ ಕನ್ನಡಾಂಬೆಯ ನೃತ್ಯವು ಸಭೆಯ ಮೆಚ್ಚುಗೆ ಪಡೆಯಿತು. ಈ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳು ಶ್ರೀ ಉಳ್ಳಾಕುಳು ದೈವಗಳ ನೇಮೋತ್ಸವವನ್ನು ಸಂಭ್ರಮಗೊಳಿಸಿದವು. ತಂಡದ ಪ್ರಮುಖರಿಗೆ ಗೌರವ ಸ್ಮರಣಿಕೆ ನೀಡಿ ಪುರಸ್ಕರಿಸಲಾಯಿತು. ನೇಮೋತ್ಸವದ ಸಂಘಟಕರು ಡಾ. ವಾಣಿಶ್ರೀ ಕಾಸರಗೋಡು ಅವರನ್ನು ಶಾಲು ಸ್ಮರಣಿಕೆಯೊಂದಿಗೆ ಸೂಕ್ತ ರೀತಿಯಲ್ಲಿ ಗೌರವಿಸಿದರು. ಕಾರ್ಯಕ್ರಮದಲ್ಲಿ ರಾಜೇಶ್ ರೈ, ಅಚ್ಯುತ ಭಟ್, ಶಶಿಕಲಾ, ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


