ಬೆಂಗಳೂರು: ಬಿಎಂ ಶ್ರೀ ಪ್ರತಿಷ್ಟಾನ ಬೆಂಗಳೂರಿನಲ್ಲಿ ಲೇಖಕಿ ಪದ್ಮಲತಾ ಮೋಹನ್ ಇವರ ಎಲ್‌ಬಿಡಬ್ಲ್ಯೂ ಮತ್ತು ವಿದ್ಯಾಸಾರಥಿ ಮತ್ತು ಮನೋಸಾರಥಿ (ನಿರಂತರ ಸಂಸ್ಥೆ ಪ್ರಕಾಶಿಸಿದ) ಎರಡು ಪುಸ್ತಕಗಳು ಶನಿವಾರ (ಜ.24) ಲೋಕಾರ್ಪಣೆಗೊಂಡವು. ವಿದ್ಯಾಸಾರಥಿ ಮತ್ತು ಮನೋಸಾರಥಿ ಪುಸ್ತಕವನ್ನು ಉಪನ್ಯಾಸಕಿಯೂ ಆಗಿರುವ, ಲೇಖಕಿ ಪದ್ಮಲತಾ ಮೋಹನ್ ಅವರ ವಿದ್ಯಾರ್ಥಿಗಳ ಕೈಯಲ್ಲೇ ಬಿಡುಗಡೆ ಮಾಡಿಸಿದ್ದು ವಿಶೇಷವಾಗಿತ್ತು.
ಪುಸ್ತಕ ವಿಮರ್ಶೆ ಮಾಡಿದ, ಪತ್ರಕರ್ತ ನಾಗರಾಜ ಇಳೆಗುಂಡಿಯವರು ಎಲ್ ಬಿಡಬ್ಲೂ ಕಾದಂಬರಿ ಕೇವಲ ಕ್ರಿಕೆಟ್ ಆಟ ಮಾತ್ರವಲ್ಲದೇ ಬೇರೆ ಯಾವುದೇ ವೃತ್ತಿ ಇರಲಿ, ವೃತ್ತಿ ಜೊತೆಗೆ ವೈಯುಕ್ತಿಕ ಜೀವನವನ್ನು ಹೇಗೆ ಸಮತೋಲನದಲ್ಲಿ ತೆಗೆದುಕೊಂಡು ಹೋಗಬೇಕೆಂಬ ತತ್ವವನ್ನು ಹೇಳಿದೆ ಎಂದರು ವಿದ್ಯಾಸಾರಥಿ ಮತ್ತು ಮನೋಸಾರಥಿ ಇಂದಿನ ಬದಲಾಗುತ್ತಿರುವ ಶಿಕ್ಷಣದ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ಮಾತ್ರವಲ್ಲದೇ ಶಿಕ್ಷಕರು ಪೋಷಕರು ಓದಲೇಬೇಕಾದ ಪುಸ್ತಕವೆಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪತ್ರಕರ್ತ ಗೌರೀಶ್ ಅಕ್ಕಿಯವರು, ಎಐ ಯುಗದಲ್ಲಿ ಚ್ಯಾಟ್ ಜಿಪಿಟಿನೇ ಕವನ ಕಥೆಗಳನ್ನು ಬರೆಯುತ್ತಿರುವುದರಿಂದ ಇಂದಿನ ಬರಹಗಾರರರು ವಿಶೆಷವಾಗಿ ಎಐ ಗಿಂತಲೂ ಮೇಲ್ಮಟ್ಟದಲ್ಲಿ ಯೋಚಿಸುವ ಅಗತ್ಯ ಈಗಿನ ಕಾಲಘಟ್ಟದಲ್ಲಿ ಇದೆ. ಹಾಗೂ ಪೋಷಕರು ಮಕ್ಕಳನ್ನು ಓದಿಸಲು ಪ್ರೇರೇಪಿಸಲು ತಾವೇ ಪುಸ್ತಕ ಓದುವ ಮೂಲಕ ಮಾದರಿಯಾಗಬೇಕು ಎಂದು ಹೇಳಿದರು.
ಡಾ ಬೈರಮಂಗಲ ರಾಮೇಗೌಡರು ತಮ್ಮ ಅಧ್ಯಕ್ಷ ಭಾಷಣದಲ್ಲಿ ಬರಹಗಾರರು ತಮ್ಮ ಓದುಗರ ಮನಸ್ಥಿತಿ ಏನು ಅವರಿಗೆ ಏನು ಬೇಕು ?ಎಂಬ ಅರಿವಿನೊಂದಿಗೆ ಬರೆಯಬೇಕಾಗಿದೆ ಎಂದರು. ಹಾಗೇ ತಮ್ಮ ನೈಜ ಬಾಲ್ಯವನ್ನು ಕಳೆದುಕೊಳ್ಳುತ್ತಿರುವ ಇಂದಿನ ಮಕ್ಕಳ ಜೀವನ ಶೈಲಿ ಬಗ್ಗೆ ಖೇದ ವ್ಯಕ್ತಪಡಿಸಿದರು. ವಿದ್ಯಾಸಾರಥಿ ಮತ್ತು ಮನೋಸಾರಥಿಯಂತಹ ಪುಸ್ತಕ ಇಂದಿನ ವಿದ್ಯಾರ್ಥಿಗಳು ಅಗತ್ಯವಾಗಿ ಓದಲೇಬೇಕಾದ ಪುಸ್ತಕ ವೆಂದರು. ಲೇಖಕಿ ಪದ್ಮಲತಾ ಮೋಹನ್ ತಮ್ಮ ಬರಹಕ್ಕೆ ಓದುಗರೇ ಸ್ಪೂರ್ತಿ ಪುಸ್ತಕವನ್ನು ಕೊಂಡು ಓದುವ ಓದುಗರೇ ಲೇಖಕರ ಶಕ್ತಿ ಎಂದು ಉಲ್ಲೇಖಿಸಿದರು.
ನಿರಂತರ ಸಂಸ್ಥೆಯಿಂದ ಬಿಡುಗಡೆಯಾಗುತ್ತಿರುವ ಲೇಖಕಿಯ ನಾಲ್ಕನೇ ಮತ್ತು ಐದನೇ ಪುಸ್ತಕಗಳ ಈ ಸಂದರ್ಭದಲ್ಲಿ ಪದ್ಮಲತಾ ಮೋಹನ್ ರನ್ನು ಪ್ರಕಾಶಕರು ಗೌರವಿಸಿದರು.
ಕುಮಾರಿ ಅಭಿಜ್ಞಾ ಎಂ ಇವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಶ್ರೀಮತಿ ಅಂಬುಜಾಕ್ಷಿ ಬಿರೇಶ್ ರವರು ನಾಡಗೀತೆಯನ್ನು ಪ್ರಸ್ತುತ ಪಡಿಸಿದರು. ಲೇಖಕಿ ಮಾನಸ ಕೆ.ಕೆ ಸ್ವಾಗತಿಸಿದರು. ಪ್ರವೀಣ್ ಜಗಾಟ ವಂದಿಸಿದರು. ಬಾಲಮುರಳಿಕೃಷ್ಣ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


