ಜನವರಿ 24: ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ

Upayuktha
0


"ಹೆಣ್ಣು ಸಂಸಾರದ ಕಣ್ಣು"  "ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ" " ಬೇಟಿ ಬಚಾವೋ ಬೇಟಿ ಪಡಾವೋ " ಎಂಬ ಎಲ್ಲಾ ಘೋಷವಾಕ್ಯಗಳು ಹೆಣ್ಣುಮಕ್ಕಳ ಪ್ರಾಮುಖ್ಯತೆಯನ್ನು ಕುರಿತು ಹೇಳುತ್ತವೆ. ಹೆಣ್ಣು ಮಗುವಿನ ಸಬಲೀಕರಣವೇ ದೇಶದ ಪ್ರಗತಿಯಾಗಿರುತ್ತದೆ. ವಿಶ್ವದ ಅಧಿದೇವತೆ ಹೆಣ್ಣು, ವಿಶ್ವ ಮಾತೆ ಹೆಣ್ಣು. ಈ ಪ್ರಕೃತಿ ಮಾತೆ ಹೆಣ್ಣು. ಈ ಭೂಮಿ ಹೆಣ್ಣು. ನಮ್ಮ ಭಾರತ ಮಾತೆ ಹೆಣ್ಣು. ನಮ್ಮ ಕನ್ನಡ ಮಾತೆ ಹೆಣ್ಣು ಎಂದು ಹೋಲಿಕೆಗಳನ್ನು ಮಾಡಿ ಯಾವಾಗಲೂ ಹೇಳುತ್ತೇವೆ. ಆದರೆ ಮತ್ತೊಂದೆಡೆ ಇದೇ ಹೆಣ್ಣು ಮಗಳು ಸಂಕಷ್ಟದಲ್ಲಿದ್ದಾಳೆ. ಶೋಷಣೆಗೆ ಒಳಗಾಗುವವಳಿದ್ದಾಳೆ. ವಿವಿಧ ರೀತಿಯ ಕಿರುಕುಳಗಳನ್ನು ಅನುಭವಿಸುತ್ತಿದ್ದಾಳೆ. 


ಮುಖ್ಯವಾಗಿ ಸಮಾನತೆ ಸ್ವಾತಂತ್ರ‍್ಯ ಇದ್ದರೂ ಬಳಸಲು ಸಾಧ್ಯವಾಗದಿರುವುದು. ಹೆಣ್ಣು ಭ್ರೂಣ ಹತ್ಯೆ, ಲೈಂಗಿಕ ಕಿರುಕುಳ, ಹೆಣ್ಣಿನ ಮೇಲಾಗುತ್ತಿರುವ ಶೋಷಣೆಯನ್ನು ತಪ್ಪಿಸಲು ಭಾರತ ಸರಕಾರ 2008 ರಲ್ಲಿ ಜನವರಿ 24ನ್ನು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯನ್ನು ಆಚರಿಸುವ ಮೂಲಕ ಹೆಣ್ಣು ಮಕ್ಕಳಿಗಿರುವ ಸಮಸ್ಯೆಗಳ ನಿವಾರಣೆಯಲ್ಲಿ ಎಲ್ಲರೂ ಭಾಗವಹಿಸಿ ಪರಿಹಾರ ಒದಗಿಸುವ ಸಲುವಾಗಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಘೋಷಿಸಿ, ಉದ್ಘಾಟಿಸಿತು.

 ಅದಲ್ಲದೇ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು 2008ರಲ್ಲಿ ಈ ದಿನಾಚರಣೆಯನ್ನು ಜಾರಿಗೆ ತಂದಿತು. ಜನವರಿ 24ಕ್ಕೆ ಒಂದು ವಿಶೇಷವಾದ ಮಹತ್ವವಿದೆ; 1966ರಲ್ಲಿ ಭಾರತದ ಮೊದಲ ಮಹಿಳಾ ಪ್ರಧಾನಮಂತ್ರಿಯಾಗಿ ಇಂದಿರಾ ಗಾಂಧಿ ಅವರು ಪ್ರಮಾಣವಚನ ಸ್ವೀಕರಿಸಿದ ದಿನವಿದು. ಇದು ಮಹಿಳಾ ಶಕ್ತಿಯ ಸಂಕೇತವಾಗಿರುವುದರಿಂದ ಈ ದಿನವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅಂದಿನಿಂದ ಪ್ರತಿರ‍್ಷ ಜನವರಿ 24 ರಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. 


ಭಾರತದಾದ್ಯಂತ ಹೆಣ್ಣು ಮಕ್ಕಳ ರಕ್ಷಣೆ, ಅಭಿವೃದ್ಧಿ, ಬೆಳವಣಿಗೆ ವಿಚಾರದಲ್ಲಿ ಹಲವು ಕರ‍್ಯಕ್ರಮಗಳನ್ನು ಹಮ್ಮಿಕೊಂಡು ಆಚರಿಸಲಾಗುತ್ತಿದೆ. ಈ ಕರ‍್ಯಕ್ರಮದ ಉದ್ದೇಶವನ್ನು ತಿಳಿಯವುದಾದರೆ  ಮೊದಲನೆಯದಾಗಿ ​ಜಾಗೃತಿ ಮೂಡಿಸುವುದು: ಹೆಣ್ಣು ಭ್ರೂಣ ಹತ್ಯೆಯಂತಹ ಸಾಮಾಜಿಕ ಪಿಡುಗನ್ನು ತಡೆಗಟ್ಟುವುದು ಮತ್ತು ಲಿಂಗಾನುಪಾತವನ್ನು ಸುಧಾರಿಸುವುದು. ಎರಡನೆಯದಾಗಿ ​ಶಿಕ್ಷಣಕ್ಕೆ ಒತ್ತು : 'ಬೇಟಿ ಬಚಾವೋ, ಬೇಟಿ ಪಢಾವೋ' ಯೋಜನೆಯಡಿ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ಸಿಗುವಂತೆ ಪ್ರೇರೇಪಿಸುವುದು. ಮೂರನೆಯದಾಗಿ ಹಕ್ಕುಗಳ ರಕ್ಷಣೆ : ಹೆಣ್ಣು ಮಕ್ಕಳಿಗೆ ಸಂವಿಧಾನಬದ್ಧವಾಗಿ ಸಿಗಬೇಕಾದ ಹಕ್ಕುಗಳು, ಪೌಷ್ಟಿಕ ಆಹಾರ ಮತ್ತು ಕಾನೂನು ರಕ್ಷಣೆಯ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸುವುದು. ನಾಲ್ಕನೆಯದಾಗಿ ಬಾಲ್ಯ ವಿವಾಹ ತಡೆ : ಚಿಕ್ಕ ವಯಸ್ಸಿನಲ್ಲಿಯೇ ಮದುವೆ ಮಾಡುವುದರಿಂದ ಆಗುವ ದೈಹಿಕ ಮತ್ತು ಮಾನಸಿಕ ಅನಾಹುತಗಳ ಬಗ್ಗೆ ಪೋಷಕರಲ್ಲಿ ಜಾಗೃತಿ ಮೂಡಿಸುವುದು. ಕೊನೆಯದಾಗಿ ಬದಲಾಗುತ್ತಿರುವ ಕಾಲಘಟ್ಟ : ​ಇಂದಿನ ದಿನಗಳಲ್ಲಿ ಹೆಣ್ಣು ಮಕ್ಕಳು ಕೇವಲ ನಾಲ್ಕು ಗೋಡೆಗಳ ಮಧ್ಯೆ ಸೀಮಿತವಾಗಿಲ್ಲ. ಶಿಕ್ಷಣ, ಕ್ರೀಡೆ, ವಿಜ್ಞಾನ, ರಾಜಕೀಯ ಮತ್ತು ಬಾಹ್ಯಾಕಾಶ ಸಂಶೋಧನೆಯಲ್ಲೂ ಪುರುಷರಿಗೆ ಸಮನಾಗಿ ಸಾಧನೆ ಮಾಡುತ್ತಿದ್ದಾರೆ. ಆದರೂ, ಗ್ರಾಮೀಣ ಭಾಗಗಳಲ್ಲಿ ಇಂದಿಗೂ ಹೆಣ್ಣು ಮಕ್ಕಳನ್ನು ಕೀಳಾಗಿ ನೋಡುವ ಮನಸ್ಥಿತಿ ಸಂಪೂರ್ಣವಾಗಿ ಅಳಿದಿಲ್ಲ. ಇದನ್ನು ಬದಲಾಯಿಸುವುದು ಈ ದಿನಾಚರಣೆಯ ಮುಖ್ಯ ಗುರಿಯಾಗಿದೆ. 


ಇಪ್ಪತ್ತೊಂದನೇ ಶತಮಾನದಲ್ಲಿ ಹೆಣ್ಣು ಕಾಲಿಡದ ಕ್ಷೇತ್ರಗಳೇ ಇಲ್ಲವೆನ್ನಬಹುದು. ಸಾಮಾಜಿಕ, ರ‍್ಥಿಕ, ಶೈಕ್ಷಣಿಕ, ಸಾಂಸ್ಕೃತಿಕ, ರಾಜಕೀಯ, ವೈಜ್ಞಾನಿಕ, ವೈಮಾನಿಕ ಕ್ಷೇತ್ರಗಳಲ್ಲಿ ತನ್ನದೇ ಆದ ಚಾಪನ್ನು ಮೂಡಿಸಿದ್ದಾಳೆ. ಸೈನಿಕಳಾಗಿ, ಆರಕ್ಷಕಳಾಗಿ, ಅಧಿಕಾರಿಯಾಗಿ, ಚಾಲಕಳಾಗಿ, ಮಾಧ್ಯಮ ಮಿತ್ರಳಾಗಿ, ಶಿಕ್ಷಕಿಯಾಗಿ, ವೈದ್ಯಳಾಗಿ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ದುಡಿಯುತ್ತಿದ್ದಾಳೆ. ಅಷ್ಟೇ ಅಲ್ಲದೆ ಮನೆಯಲ್ಲಿ ಸಹಧರ್ಮಿಣಿಯಾಗಿ, ಮಗಳಾಗಿ, ಸೊಸೆಯಾಗಿ, ಅತ್ತಿಗೆ-ನಾದಿನಿಯಾಗಿ, ಅಕ್ಕ-ತಂಗಿಯಾಗಿ, ಎಲ್ಲರನ್ನೂ, ಎಲ್ಲವನ್ನೂ ಸಹಿಸುವ ಅಮ್ಮನಾಗಿ ಅಭೂತಪೂರ್ವ ಜವಾಬ್ದಾರಿಯುತ ಪಾತ್ರವನ್ನು ನಿರ್ವಹಿಸುತ್ತಿರುವ ಹೆಣ್ಣು ಸರ್ವಶ್ರೇಷ್ಠಳು. ಒಂದು ದೇಶದ ಪ್ರಗತಿ ಆ ದೇಶದ ಮಹಿಳೆಯರ ಸ್ಥಿತಿಗತಿಯ ಮೇಲೆ ಅವಲಂಬಿತವಾಗಿರುತ್ತದೆ.  


ಹೆಣ್ಣು ಮಗುವಿಗೆ ಪ್ರೀತಿ, ರಕ್ಷಣೆ ಮತ್ತು ಶಿಕ್ಷಣ ನೀಡಿದರೆ ಆಕೆ ಇಡೀ ಕುಟುಂಬ ಹಾಗೂ ಸಮಾಜದ ದಾರಿದೀಪವಾಗುತ್ತಾಳೆ. "ಹೆಣ್ಣು ಜಗತ್ತಿನ ಕಣ್ಣು" ಎಂಬ ಮಾತನ್ನು ನಾವೆಲ್ಲರೂ ಅಕ್ಷರಶಃ ಪಾಲಿಸಬೇಕಿದೆ. ಹೆಣ್ಣು ಮಕ್ಕಳನ್ನು ಹೊರೆಯೆಂದು ಭಾವಿಸದೆ, ಶಕ್ತಿಯೆಂದು ಗೌರವಿಸೋಣ. ಇಂತಹ ಹೆಣ್ಣಿಗೆ ವರ್ಷದಲ್ಲಿ ಒಂದು ದಿನವೇನು, ವರ್ಷ ಪೂರ್ತಿ ಮೀಸಲಿಟ್ಟರೂ ತಪ್ಪಲ್ಲ. ಆದ್ದರಿಂದಸರ್ಕಾರವು ಪ್ರತೀ ವರ್ಷ ಜನವರಿ 24ನ್ನು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನಾಗಿ ಆಚರಿಸಲು ಘೋಷಿಸಿರುವುದು ಅರ್ಥಪೂರ್ಣ ವಿಚಾರವಾಗಿದೆ. ಈ ನಿಟ್ಟಿನಲ್ಲಿ ಹೆಣ್ಣು ಮಕ್ಕಳ ಆರೋಗ್ಯ ಸುಧಾರಣೆಗೆ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸಿ, ವಿವಿಧ ರೀತಿಯ ಕಲ್ಯಾಣ ಕರ‍್ಯಕ್ರಮಗಳನ್ನು ರೂಪಿಸಲು ಸಮಾಜದ ಸರ್ವರೂ ಕೈಜೋಡಿಸೋಣ. ಎಲ್ಲಿ ಹೆಣ್ಣು ಪೂಜಿಸಲ್ಪಡುತ್ತಾಳೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ ಎಂಬುದನ್ನು ಎಲ್ಲರೂ ಅರಿತು ಹೆಣ್ಣಿನ ಸ್ಥಾನಮಾನಗಳಿಗೆ ಕುಂದುಂಟಾಗದಂತೆ ನಡೆದುಕೊಳ್ಳೋಣ. ಸರ್ವರಿಗೂ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಶುಭಾಶಯಗಳು.



-ಕೆ.ಎನ್. ಚಿದಾನಂದ. ಹಾಸನ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top