ವಂಡಾರು (ಕುಂದಾಪುರ): ಅನಾಥ ಗೋವುಗಳ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಬ್ರಹ್ಮಾವರ ತಾಲೂಕಿನ ನಂಚಾರಿನಲ್ಲಿರುವ ಕಾಮಧೇನು ಗೋಶಾಲಾ ಮಹಾಸಂಘ ಟ್ರಸ್ಟ್ (ರಿ.) ಗೆ ಅಗತ್ಯವಾದ ಜಲಸಂಪರ್ಕ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ, ನಾದನೂಪುರ ಯಕ್ಷೋತ್ಥಾನ ಟ್ರಸ್ಟ್, ವಂಡಾರು ವತಿಯಿಂದ ವಿಶೇಷ ಯಕ್ಷಗಾನ ಪ್ರದರ್ಶನವನ್ನು ಆಯೋಜಿಸಲಾಗಿದೆ.
ಈ ಸಂಬಂಧ ಮಾತನಾಡಿದ ನಾದನೂಪುರ ಯಕ್ಷೋತ್ಥಾನ ಟ್ರಸ್ಟ್‌ನ ಸ್ವಾಪಕಾಧ್ಯಕ್ಷ ಗೋವಿಂದ ವಂಡಾರು, ಕಳೆದ ಹಲವು ವರ್ಷಗಳಿಂದ ಸಂಸ್ಥೆ ಯಕ್ಷಗಾನ ಶಿಕ್ಷಣ ಹಾಗೂ ಪ್ರದರ್ಶನ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಸಮಾಜಮುಖಿ ಉದ್ದೇಶಗಳಿಗಾಗಿ ಕಲೆಯನ್ನು ಬಳಸಿಕೊಂಡು ಸೇವೆ ಸಲ್ಲಿಸುತ್ತಿದೆ ಎಂದರು. ಗೋಶಾಲೆಗೆ ಜಲಸಂಪರ್ಕ ಅತ್ಯಾವಶ್ಯಕವಾಗಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಫೆಬ್ರವರಿ 1, 2026 (ಭಾನುವಾರ) ರಂದು ಮಧ್ಯಾಹ್ನ 2ರಿಂದ, ಸಪ್ತಪದಿ ಕನ್ವೆನ್ಷನ್ ಹಾಲ್ ಮೈರ್ಕೊಮೆಯಲ್ಲಿ, ಶುಭಾಶಯ ಜೈನ್ ವಿರಚಿತ ‘ಹನುಮ ಕಲ್ಯಾಣ’ ಎಂಬ ಯಕ್ಷಗಾನ ಆಖ್ಯಾನದ ಪ್ರದರ್ಶನ ನಡೆಯಲಿದೆ.
ಪ್ರದರ್ಶನದಲ್ಲಿ ಭಾಗವತರಾಗಿ ಪ್ರಸನ್ನ ಭಟ್ ಬಾಳಕಲ್, ಮದ್ದಲೆಯಲ್ಲಿ ರಾಘವೇಂದ್ರ ಯಲ್ಲಾಪುರ, ಚಂಡೆಯಲ್ಲಿ ಸುಜನ್ ಹಾಲಾಡಿ ಭಾಗವಹಿಸಲಿದ್ದಾರೆ. ವೇಷಧಾರಿಗಳಾಗಿ ದೂರ್ವಾಸ ಮುನಿಯಾಗಿ ಎಂ.ಕೆ. ರಮೇಶ್ ಆಚಾರ್ಯ, ಕೇಸರಿಯಾಗಿ ಪ್ರಸನ್ನ ಶೆಟ್ಟಿಗಾರ್, ಹನುಮಂತನಾಗಿ ಕಿರಾಡಿ ಪ್ರಕಾಶ್, ಅಂಜನೇಯನಾಗಿ ಗೋವಿಂದ ವಂಡಾರು, ಪುಂಜಿಕಸ್ಥಳೆಯಾಗಿ ಸುಧೀರ್ ಉಪ್ಪೂರು, ಶಂಭಸಾಧನನಾಗಿ ರಾಘವೇಂದ್ರ ಉಳ್ಳೂರು, ಹಾಸ್ಯದಲ್ಲಿ ಸತೀಶ್ ಹಟ್ಟಿಯಂಗಡಿ ಹಾಗೂ ಕಾರ್ತಿಕ್ ಪಾಂಡೇಶ್ಚರ ಸೇರಿದಂತೆ ಅನೇಕ ಹಿರಿಯ ಮತ್ತು ಯುವ ಕಲಾವಿದರು ಭಾಗವಹಿಸಲಿದ್ದಾರೆ.
ಯಕ್ಷಗಾನದ ಪರಂಪರೆ, ಕಲಾತ್ಮಕ ಮೌಲ್ಯ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸುವ ಈ ಪ್ರದರ್ಶನವು, ಗೋಶಾಲೆಗೆ ಅಗತ್ಯವಾದ ನೆರವನ್ನು ಒದಗಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಆಯೋಜಕರು ಆಶಿಸಿದ್ದಾರೆ.
ಈ ಸಮಾಜೋಪಯೋಗಿ ಕಾರ್ಯಕ್ರಮಕ್ಕೆ ಯಕ್ಷಗಾನ ಅಭಿಮಾನಿಗಳು, ದಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಹಕಾರ ನೀಡುವಂತೆ ಸಂಘಟಕರು ಮನವಿ ಮಾಡಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

