ಮಂಗಳೂರು ತಾಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಮಂಜುನಾಥ ರೇವಣಕರರವರು ತಮ್ಮ ಅಹರ್ನಿಷಿ ಪ್ರಯತ್ನದಿಂದ ಮಂಗಳೂರಿನ ವಾಮಂಜೂರಿನಲ್ಲಿ ಸಾಹಿತ್ಯ ಪರಿಷತ್ತಿನ ಮಂಗಳೂರು ಘಟಕಕ್ಕೆ ಸರ್ಕಾರದಿಂದ ಅರ್ಧ ಎಕರೆ ಜಮೀನನ್ನು ಮಂಜೂರು ಮಾಡಿಸಿದುದಕ್ಕಾಗಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಮಂಗಳೂರು: 'ನಾವು ಅಪ್ರಾಮಾಣಿಕರಾದರೆ ನಮ್ಮ ಸುತ್ತಲಿನವರೂ ನಮಗೆ ಅಪ್ರಾಮಾಣಿಕರಾಗಿಯೇ ಕಾಣುತ್ತಾರೆ. ಅದೇ ನಾವು ಪ್ರಾಮಾಣಿಕರಾಗಿದ್ದರೆ ಎಲ್ಲರೂ ಪ್ರಾಮಾಣಿಕರೇ. ಸಮಾಜದಲ್ಲಿ ಮೌಲ್ಯಗಳು ಸತ್ತಿವೆ ಎನ್ನುವುದು ಸರಿಯಲ್ಲ. ಮೌಲ್ಯಗಳು ಸತ್ತಿದ್ದರೆ ಲಂಚ ತೆಗೆದುಕೊಳ್ಳುವವರು ಯಾಕೆ ನೇರವಾಗಿ ತೆಗೆದುಕೊಳ್ಳುತ್ತಿಲ್ಲ. ಅವರೊಳಗಿನ ಅಂತಸ್ಸಾಕ್ಷಿ ಅದು ಸರಿ ಅಲ್ಲ ಎನ್ನುವ ಕಾರಣದಿಂದಲ್ಲವೇ? ನಮಗೆ ಈಗ ಯಾರ ಬಗ್ಗೆಯೂ ಯಾರ ಬಗ್ಗೆಯೂ ನಂಬಿಕೆ ಇಲ್ಲ. ಮೆಷೀನ್ ಗಳನ್ನು ನಂಬುವ ನಾವು ಮನುಷ್ಯರನ್ನು ನಂಬುವುದಿಲ್ಲ. ಬೃಹತ್ ನಗರಗಳಿಗೆ ಹೋಲಿಸಿದರೆ ಸಣ್ಣ ಸಣ್ಣ ಊರುಗಳಲ್ಲಿ ಇನ್ನೂ ಮೌಲ್ಯಗಳು ಜೀವಂತವಾಗಿವೆ' ಎಂದು ಮಾಯಾಮೃಗ ಖ್ಯಾತಿಯ ಹಿರಿಯ ಖ್ಯಾತ ನಟ ಹಾಗೂ ಆದಾಯ ತೆರಿಗೆ ಇಲಾಖೆಯ ನಿವೃತ್ತ ಸಹ ಆಯುಕ್ತರಾದ ಶ್ರೀ ಸೇತುರಾಮ್ ಅವರು ಹೇಳಿದರು.
ಅವರು ನಗರದ ಭಾರತೀ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮಂಗಳೂರು ತಾಲೂಕು ಘಟಕ, ಹವ್ಯಕ ಸಭಾ ಮಂಗಳೂರು ಹಾಗೂ ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ಇವುಗಳು ಜಂಟಿಯಾಗಿ ಆಯೋಜಿಸಿದ "ಕೌಟುಂಬಿಕ ಹಾಗೂ ಸಾಮಾಜಿಕ ಮೌಲ್ಯಗಳ ಅನಿವಾರ್ಯತೆ" ಎಂಬ ವಿಚಾರ ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಿದ್ದರು.
ಬ್ಯಾಂಕ್ ಆಫ್ ಬರೋಡ ಮಂಗಳೂರು ವಲಯದ ವಲಯ ಮುಖ್ಯಸ್ಥರಾದ ರಾಜೇಶ್ ಖನ್ನಾರವರು ಮುಖ್ಯ ಅತಿಥಿಗಳಾಗಿದ್ದು, 'ಸಾಹಿತ್ಯ ಜನಜೀವನದ ಕನ್ನಡಿ. ಸಮಾಜವನ್ನು ಮುಟ್ಟುವ ಮತ್ತು ತಟ್ಟಿ ಎಚ್ಚರಿಸುವ ಕೆಲಸವನ್ನು ಸಾಹಿತ್ಯ ಮಾಡಬೇಕು. ಆ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ಘಟಕ ಉತ್ತಮ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು. ಇನ್ನೋರ್ವ ಮುಖ್ಯ ಅತಿಥಿ ಖ್ಯಾತ ದಂತ ವೈದ್ಯ ಡಾ. ರಾಜೇಂದ್ರ ಪ್ರಸಾದರು ಶುಭ ಹಾರೈಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


