ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯು ನೀಡುವ ಕರುನಾಡ ಸಾಧಕ ಶ್ರೇಷ್ಠ ರತ್ನ ರಾಜ್ಯ ಪ್ರಶಸ್ತಿಗೆ ರಿಪೋರ್ಟರ್ ಕರ್ನಾಟಕ ಪ್ರಧಾನ ಸಂಪಾದಕ ಅಶೋಕ್ ಕಲ್ಲಡ್ಕ ಆಯ್ಕೆಯಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಜನವರಿ 28ರಂದು ನಡೆಯಲಿರುವ ಸಂಘಟನೆಯ ರಾಜ್ಯಮಟ್ಟದ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ, ಮಾಜಿ ಲೋಕಾಯುಕ್ತ ಜಸ್ಟಿಸ್ ಸಂತೋಷ್ ಹೆಗ್ಡೆ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಮುಂತಾದವರು ಉಪಸ್ಥಿತರಿರುವರು.
ಅಶೋಕ್ ಕಲ್ಲಡ್ಕ ಅವರು ವಿಜಯ ಕರ್ನಾಟಕ, ಜನವಾಹಿನಿ, ಕೆನರಾ ಟೈಮ್ಸ್ ಬಳಗದ ದಿನಪತ್ರಿಕೆಗಳಲ್ಲಿ ಉಪ ಸಂಪಾದಕ, ವರದಿಗಾರನಾಗಿ ಕಾರ್ಯನಿವರ್ಹಿಸಿದ್ದರು. 4 ವರ್ಷಗಳ ಹಿಂದೆ ರಿಪೋರ್ಟರ್ ಕರ್ನಾಟಕ ಮೀಡಿಯಾ ನೆಟ್ ವರ್ಕ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ ರಿಪೋರ್ಟರ್ ಕರ್ನಾಟಕ ಡಾಟ್ ಕಾಮ್ ಎಂಬ ಡಿಜಿಟಲ್ ಪತ್ರಿಕೆಯ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜ್ಯಮಟ್ಟದ ನ್ಯೂಸ್ ನೆಟ್ ವರ್ಕ್ ಹೊಂದಿರುವ ರಿಪೋರ್ಟರ್ ಕರ್ನಾಟಕ ಇಂದು ತನ್ನ ಕಂಟೆಂಟ್ ಮೂಲಕ ರಾಜ್ಯದಲ್ಲಿ ಅಪಾರ ಜನಪ್ರಿಯತೆಯನ್ನು ಹೊಂದಿದೆ.
ಮಾಧ್ಯಮ ರಂಗದಲ್ಲಿ ಪತ್ರಕರ್ತ ಅಶೋಕ್ ಕಲ್ಲಡ್ಕ ಅವರ ಸಾಧನೆಯನ್ನು ಪರಿಗಣಿಸಿ ಅವರಿಗೆ ಕರುನಾಡ ಸಾಧಕ ಶ್ರೇಷ್ಠ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕಲ್ಲಡ್ಕ ಅವರಿಗೆ ಕರ್ನಾಟಕ ಮಾಧ್ಯಮ ರತ್ನ, ದೇವನಾಂಪ್ರಿಯ ಪ್ರಿಯದರ್ಶಿನಿ ಅಶೋಕ ಪ್ರಶಸ್ತಿಯೂ ಈ ಹಿಂದೆ ಲಭಿಸಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


