ಕಾಲದ ಜೊತೆ ಮರೆಯಾಗುತ್ತಿರುವ ಸ್ನೇಹದ ಮೌಲ್ಯ

Upayuktha
0


ಮಾನವನ ಜೀವನದಲ್ಲಿ ಸ್ನೇಹವು ಅತ್ಯಂತ ಅಮೂಲ್ಯವಾದ ಸಂಬಂಧವಾಗಿದೆ. ಒಬ್ಬರೊಂದಿಗೆ ಸಂಕೋಚವಿಲ್ಲದೆ ತಮ್ಮ ಸುಖ, ದುಃಖ, ಆನಂದ, ಕಷ್ಟಗಳನ್ನು ಹಂಚಿಕೊಳ್ಳುವ ವ್ಯಕ್ತಿಯೊಂದಿಗೆ ಇರುವ ಬಂಧನವೇ ಸ್ನೇಹ. ಸಣ್ಣದಾದರೂ, ದೊಡ್ಡದಾದರೂ, ಈ ಸಂಬಂಧವು ಜೀವನದಲ್ಲಿ ಶಾಂತಿ ಮತ್ತು ಸಂತೋಷ ತಂದಿದೆ. ಹುಡುಗನಾದರೂ, ಹುಡುಗಿಯನಾದರೂ, ಲಿಂಗ ಬೇಧವಿಲ್ಲದೆ ಈ ಸಂಬಂಧ ಉಂಟಾಗಬೇಕು. ಸ್ನೇಹದಲ್ಲಿ ಭಾವನಾತ್ಮಕ ಸ್ವಾತಂತ್ರ್ಯ ಬಹಳ ಮುಖ್ಯ. ಆದರೆ ಇಂದಿನ ಕಾಲದಲ್ಲಿ ಆ ಅಮೂಲ್ಯ ಸಂಬಂಧವು ಕೆಲವರಿಗೆ ತಪ್ಪಾಗಿ ಅರ್ಥಮಾಡಿಕೊಳ್ಳಲಾಗುತ್ತಿದೆ.


ಇತ್ತೀಚಿನ ಸಮಾಜದಲ್ಲಿ ಕೆಲವರು ಹೀಗೆ ಯೋಚಿಸುತ್ತಾರೆ: "ಹುಡುಗ ಮತ್ತು ಹುಡುಗಿಯರು ಒಟ್ಟಿಗೆ ಸಮಯ ಕಳೆಯುತ್ತಿದ್ದರೆ, ಅವರು ಪರಸ್ಪರ ಪ್ರೀತಿಸುತ್ತಿದ್ದಾರೆ. ಆದರೆ ಇದೊಂದು ತಪ್ಪಾದ ಕಲ್ಪನೆ. ಒಬ್ಬರು ಒಟ್ಟಿಗೆ ಓಡಾಡುವುದು. ಊಟ ಮಾಡುವುದು, ಕುಳಿತುಕೊಂಡು ಮಾತಾಡುವುದು, ಪ್ರೀತಿಯ ಸಂಕೇತವಲ್ಲ, ಸ್ನೇಹವು ಅನೇಕ ರೀತಿಯ ಸಾಥಿ ಮತ್ತು ಬೆಂಬಲವನ್ನು ನೀಡುವ ಸಂಬಂಧ. ತಪ್ಪಾಗಿ ಅರ್ಥಮಾಡಿಕೊಳ್ಳುವುದರಿಂದ ಜನಗಳು ಸ್ನೇಹಗಳನ್ನು ಬೇಗ ಮುಕ್ತಾಯಗೊಳಿಸುತ್ತಿದ್ದಾರೆ. 


ಇದರಿಂದ ಉದಾಹರಣೆಗಳು ಬಹಳವೇ. ಒಬ್ಬರು ಟೀಕೆಗಳು, ಅಭಿಪ್ರಾಯಗಳು ಅಥವಾ ಸುಳ್ಳು ಊಹೆಗಳ ಕಾರಣದಿಂದ ತಮ್ಮ ಸ್ನೇಹವನ್ನು ಮುಗಿಸುತ್ತಾರೆ. ಕೆಲವೊಮ್ಮೆ ಇಬ್ಬರಲ್ಲಿ ಒಬ್ಬರೂ ಹಿಂಜರಿದರೂ, ಸ್ನೇಹ ಮುಗಿಯುತ್ತದೆ. ಆದರೆ ಸ್ನೇಹವು ಸತ್ಯವಾದರೆ, ಟೀಕೆಗಳು ಮತ್ತು ಮಾರುಕಟ್ಟೆಯ ಮಾತುಗಳು ಸಂಬಂಧವನ್ನು ಬಾಧೆ ಮಾಡಬಾರದು. ನಾವು ಸ್ನೇಹದ ಮೂಲ ಮೌಲ್ಯವನ್ನು ಅರ್ಥಮಾಡಿಕೊಳ್ಳಬೇಕು.


ಸ್ನೇಹದ ಬೆಲೆ ಗೌರವದಲ್ಲಿ ಇದೆ. ಒಬ್ಬರ ಮೇಲೆ ನಂಬಿಕೆ ಇಲ್ಲದಿದ್ದರೆ, ಸಂಬಂಧವು ದೀರ್ಘಕಾಲ ಉಳಿಯದು. ನಿಜವಾದ ಸ್ನೇಹವು ಸಂತೋಷವನ್ನು ಮಾತ್ರ ಹಂಚಿಕೊಳ್ಳುವುದಲ್ಲ, ಕಷ್ಟಗಳಲ್ಲಿ ಸಹಾಯ ಮಾಡುವುದರಲ್ಲಿ ಕೂಡ ಇದೆ. ಸಮಯ, ದೂರ, ಪರ್ಯಾಯ ಅಭಿಪ್ರಾಯಗಳು, ಎಲ್ಲವು ಬಂದರೂ ನಿಜವಾದ ಸ್ನೇಹ ಬಿಗಿಯಾದ ಕಂಬದಂತೆ ಸ್ಥಿರವಾಗಿರಬೇಕು.


ಇನ್ನು ಒಂದು ಪ್ರಮುಖ ಅಂಶ - ಸಾಮಾಜಿಕ ಒತ್ತಡ ಮತ್ತು ನಿರ್ಣಯಗಳು ಸ್ನೇಹವನ್ನು ಹಾಳುಮಾಡಬಾರದು. ಇಂದಿನ ಯುವಕರಿಗೆ ಒಬ್ಬರ ಕುರಿತು ತಪ್ಪಾದ ಊಹೆಗಳು, ಟೀಕೆಗಳು, ಎದುರಾಗುತ್ತಿವೆ. ಒಬ್ಬರು ತಮ್ಮ ಸಂಬಂಧವನ್ನು ಸುರಕ್ಷಿತವಾಗಿಡಲು ಎಷ್ಟು ಪ್ರಯತ್ನಿಸಿದರೂ, ಸುತ್ತಲೂ ಇರುವ ತಪ್ಪಾದ ಅಭಿಪ್ರಾಯಗಳು ಸ್ನೇಹವನ್ನು ನಾಶ ಮಾಡಬಹುದು. ಹೀಗಾಗಿ, ನಾವು ಪ್ರತಿಯೊಬ್ಬರೂ ಸ್ನೇಹವನ್ನು ಗೌರವದಿಂದ ನೋಡುವ ಅಭ್ಯಾಸವನ್ನು ಬೆಳೆಸಬೇಕು.


ಸ್ನೇಹವು ಜೀವನದಲ್ಲಿ ನಿಜವಾದ ಬೆಲೆ ಬಾಳುವ ಸಂಪತ್ತು. ನಾವು ಅದನ್ನು ಕಾಪಾಡಿದರೆ, ಕಾಲದ ಜೊತೆ ಮರೆಯದ, ಶಾಶ್ವತ ಸಂಬಂಧಗಳಾಗಿ ಉಳಿಯುತ್ತದೆ. ಕಾಲದ ಹೊತ್ತಿಗೂ ಮರೆಯಲ್ಪಡುವ ಸ್ನೇಹವು ಮಾನವನ ಜೀವನದಲ್ಲಿ ಸಂತೋಷ, ನೆಮ್ಮದಿ ಮತ್ತು ತಾಳ್ಮೆಯನ್ನು ತರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಸ್ನೇಹವನ್ನು ಗೌರವದಿಂದ, ಮೌಲ್ಯದಿಂದ, ಮತ್ತು ಪರಸ್ಪರ ನಂಬಿಕೆಯಿಂದ ಕಾಪಾಡುವಂತೆ ಪ್ರಯತ್ನಿಸಬೇಕು.


-ರಮ್ಯಾ ನಾಯ್ಕ್ 

ಎಸ್.ಡಿ.ಎಂ.ಸಿ ಉಜಿರೆ


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top