ನಾವು ಅನುಸರಿಸಿಕೊಂಡಿರುವ ಜೀವನಶೈಲಿ

Upayuktha
0


ಪ್ರಾಚೀನ ಜೀವನಶೈಲಿ ಸರಳತೆ, ಶಿಸ್ತು ಮತ್ತು ಸಂಸ್ಕಾರಗಳಿಂದ ತುಂಬಿತ್ತು. ಆ ಕಾಲದ ಜನರು ಪರಂಪರಗತ ಜೀವನಶೈಲಿಯನ್ನು ಅನುಸರಿಸುತ್ತಿದ್ದರು. ಅನಾವಶ್ಯಕವಾದ ವಿಷಯಗಳಿಗೆ ಮಹತ್ವ ಕೊಡದೇ, ನಿಯಮಿತವಾಗಿ ಮತ್ತು ಸಾತ್ವಿಕವಾಗಿ ಬದುಕುತ್ತಿದ್ದರು. ಆತ್ಮೀಯತೆ ಮತ್ತು ಆಧ್ಯಾತ್ಮಿಕತೆಯೂ ಅವರ ಜೀವನದ ಒಂದು ಭಾಗವಾಗಿತ್ತು. ಅವರು ಪ್ರಕೃತಿಯನ್ನು ಪೂಜಿಸುತ್ತಿದ್ದರು ಮತ್ತು ಸಂಪೂರ್ಣವಾಗಿ ಪರಿಸರದ ಮೇಲೆ ಅವಲಂಬಿತರಾಗಿದ್ದರು. ಏಕೆಂದರೆ ಅವರ ಜೀವನಪಾಠಗಳೆಲ್ಲವೂ ಪ್ರಕೃತಿಯಿಂದಲೇ ಕಲಿತದ್ದಾಗಿತ್ತು.


ಪ್ರಾಚೀನ ಜೀವನಶೈಲಿ ಸಂಪ್ರದಾಯಮಯ ಹಂತಗಳಿಂದ ಕೂಡಿತ್ತು. ಪಾಶ್ಚಾತ್ಯ ಜೀವನಶೈಲಿಯ ಯಾವುದೇ ಪ್ರಭಾವ ಆಗಾಗ ಇರಲಿಲ್ಲ. ಪರಿಸರವೇ ಅವರ ಔಷಧಿಯಾಗಿತ್ತು. ಮನೆಮದ್ದಿನ ಚಿಕಿತ್ಸೆಗಳಿಂದಲೇ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದರು. ಆಗ ಆಸ್ಪತ್ರೆಗಳ ವ್ಯವಸ್ಥೆ ಇಲ್ಲದಿದ್ದರೂ, ಮನೆಮದ್ದಿನ ಸಸ್ಯಗಳು ಮತ್ತು ಪದಾರ್ಥಗಳೇ ರೋಗ ನಿವಾರಣೆಗೆ ಸಾಕಾಗುತ್ತಿದ್ದವು. ಆ ಕಾಲದ ಜೀವನಶೈಲಿ ಸಂಪೂರ್ಣವಾಗಿ ರಾಸಾಯನಿಕರಹಿತವಾಗಿತ್ತು.


ಇಂದು ಆಧುನಿಕ ಜೀವನಶೈಲಿಯಲ್ಲಿ ಬಹಳ ಬದಲಾವಣೆ ಕಂಡುಬಂದಿದೆ. ಉಡುಪು ಮತ್ತು ಆಹಾರದಲ್ಲಿನ ಸಂಪ್ರದಾಯಗಳು ನಿಧಾನವಾಗಿ ಮಾಯವಾಗುತ್ತಿವೆ. ತಂತ್ರಜ್ಞಾನ ಈ ಬದಲಾವಣೆಗೆ ಪ್ರಮುಖ ಕಾರಣವಾಗಿದೆ. ಪ್ರಾಚೀನ ಕಾಲದಲ್ಲಿ ಜನರು ಪರಂಪರাগত ವಸ್ತ್ರ ಧರಿಸುತ್ತಿದ್ದರು, ಆದರೆ ಇಂದು ಪಾಶ್ಚಾತ್ಯ ಉಡುಪುಗಳು ಆ ಸ್ಥಾನವನ್ನು ಪಡೆದುಕೊಂಡಿವೆ. ಸೀರೆಗಳ ಬದಲು ಜೀನ್ಸ್ ಬಂದಿವೆ; ಮುಂದೆ ಇನ್ನೇನು ಬದಲಾವಣೆಗಳು ಆಗಲಿವೆ ಎಂಬುದು ತಿಳಿಯದು.


ಇಂದಿನ ಜೀವನದಲ್ಲಿ ಜನರು ತುಂಬಾ ಬ್ಯುಸಿಯಾಗಿದ್ದಾರೆ. ಪ್ರಾಚೀನ ಸಂಪ್ರದಾಯಗಳನ್ನು ನೆನಪಿಸಿಕೊಳ್ಳಲು ಸಮಯವೇ ಇಲ್ಲ. ಪಾಶ್ಚಾತ್ಯ ಸಂಸ್ಕೃತಿಯನ್ನು ಅನುಸರಿಸುವುದರಲ್ಲಿ ತಪ್ಪಿಲ್ಲ, ಆದರೆ ಕನಿಷ್ಠ 50% ಜೀವನಶೈಲಿಯನ್ನು ನಾವು ನಮ್ಮ ಪರಂಪರೆಯ ದೃಷ್ಟಿಕೋನದಲ್ಲೇ ಮುಂದುವರಿಸಬೇಕು. ಆರೋಗ್ಯಕರ ಆಹಾರದ ಬದಲು ಜಂಕ್ ಫುಡ್ ಹೆಚ್ಚಾಗಿ ಬಳಸಲಾಗುತ್ತಿದೆ, ಇದು ಆರೋಗ್ಯಕ್ಕೆ ತುಂಬಾ ಹಾನಿಕಾರಕ. ಹಿಂದೆ ಮನೆಮದ್ದುಗಳಿಂದಲೇ ಚಿಕಿತ್ಸೆ ಪಡೆದವರು, ಇಂದು ತಕ್ಷಣ ಆಸ್ಪತ್ರೆಗಳ ಕಡೆ ಓಡುತ್ತಾರೆ. ಆಸ್ಪತ್ರೆ ಅವಶ್ಯಕವೇ, ಆದರೆ ಪಾರಂಪರಿಕ ಚಿಕಿತ್ಸಾ ವಿಧಾನಗಳನ್ನು ಮರೆತಬಾರದು.


ಪ್ರಾಚೀನ ಮತ್ತು ಆಧುನಿಕ ಜೀವನಶೈಲಿಗಳಿಗೆ ತಮ್ಮದೇ ಆದ ಮಹತ್ವವಿದೆ. ಪ್ರಾಚೀನ ಜೀವನದಲ್ಲಿ ಶಾಂತಿ, ಆರೋಗ್ಯ, ಸಮಯಪಾಲನೆ ಇತ್ಯಾದಿ ಇದ್ದವು. ಆದರೆ ಆಧುನಿಕ ಜೀವನದಲ್ಲಿ ನಿರಂತರ ಓಡಾಟ, ಒತ್ತಡ ಮತ್ತು ತುರ್ತುತನದಿಂದ ಜೀವನವೇ ವ್ಯಸ್ತವಾಗಿದೆ. ಆದರೂ ನಮ್ಮ ಪಾರಂಪರಿಕ ವಿಧಾನಗಳನ್ನು ಮರೆತಬಾರದು, ಏಕೆಂದರೆ ಅವೇ ನಮ್ಮ ಉತ್ತಮ ಜೀವನಕ್ಕೆ ಆಧಾರವಾದ ಜೀವನಾಡಿ.


-ಅಂಜಲಿ ಮುಂಡಾಜೆ

ಎಸ್ ಡಿ ಯಂ ಕಾಲೇಜು ಉಜಿರೆ 


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top