ಕಣಚೂರ್ ವಿದ್ಯಾ ಸಂಸ್ಥೆಗಳಲ್ಲಿ ಗಣರಾಜ್ಯ ದಿನಾಚರಣೆ
ನಾಟೆಕಲ್: ನಾಟೇಕಲ್ಲಿನಲ್ಲಿರುವ ಕಣಚೂರ್ ವಿದ್ಯಾಸಂಸ್ಥೆಗಳ ಗಣರಾಜ್ಯ ದಿನಾಚರಣೆ ಸೋಮವಾರ ಸಂಭ್ರಮದಿಂದ ಆಚರಿಸಲಾಯಿತು. ಸಂಸ್ಥೆಯ ಚೇರ್ಮನ್ ಡಾ ಕಣಚೂರು ಹಾಜೀ ಮೋನು, ನಿರ್ದೇಶಕ ಅಬ್ದುಲ್ ರಹಿಮಾನ ಸಹಿತ ಗಣ್ಯರು ಮೆರವಣಿಗೆಯಲ್ಲಿ ಆಗಮಿಸಿ ಮಹಾತ್ಮಾ ಗಾಂಧಿ ಸುಭಾಶ್ಚಂದ್ರ ಬೋಸರ ಭಾವಚಿತ್ರಕ್ಕೆ ಹೂಗಳನ್ನು ಹಾಕಿ ಡಾ ಮೋನುರವರು ಧ್ವಜಾರೋಹಣ ಮಾಡಿದರು.
ವ್ಯೆಷ್ಣವಿ ಆಚಾರ್ಯರಿಂದ ನಾಡಗೀತೆ ಆದ ನಂತರ ಅಧ್ಯಕ್ಷತೆ ವಹಿಸಿದ್ದ ಡಾ. ಮೋನು ಅವರು ದೇಶ ನನ್ನದು ದೇಶಕ್ಕಾಗಿ ನಾನು ಎಂಬ ಮನೋಭಾವ ರೂಢಿಸ ಬೇಕು.ನಮ್ಮ ಕರ್ತವ್ಯ ದೇಶಪ್ರೇಮ ಯಾವರೀತಿ ಇರಬೇಕು ಎಂದು ಹಿತವಚನ ನೀಡಿದರು.
ಡಾ ರೋಷನ್ ಮೋನಿಸ್, ಡಾ ರೋಹನ್, ಮೊಲ್ಲಿ ಸಾಲ್ದಾನ, ಇಕ್ಬಾಲ್, ರಾಜೀವ್ ಕುಮಾರ್, ಶಾಹಿದ, ಕೇರೋಲ್, ಮುಂತಾದ ಬೇರೆಬೇರೆ ಅಂಗಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು.
ಆಯುರ್ವೇದ ಕಾಲೇಜು ಪ್ರಾಚಾರ್ಯರಾದ ಡಾ ವಿದ್ಯಾ ಪ್ರಭಾ ಸ್ವಾಗತಿಸಿದರು ಮತ್ತು ವೈದ್ಯಕೀಯ ಸಲಹೆಗಾರ ಡಾ ಸುರೇಶ ನೆಗಳಗುಳಿ ಧನ್ಯವಾದ ಸಮರ್ಪಿಸಿದರು. ಆಯುರ್ವೇದ ಕಾಲೇಜು ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆಗಳೂ ವಿಶೇಷ ದೇಶಾಭಿಮಾನ ಸಾರುವ ಯೋಗ ಪ್ರಾತ್ಯಕ್ಷಿಕೆಗಳು ಮನಸೆಳೆದವು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

